ಫ್ಯಾಕ್ಟ್‌ಚೆಕ್ : ಭಾರತದ ವಿರುದ್ದ ಹೀನಾಯ ಸೋಲು ಕಂಡ ಪಾಕ್ ತಂಡದ ಆಟಗಾರರ ಮೇಲೆ ಹಲ್ಲೆ ನಡೆದಿದ್ದು ನಿಜವೇ?

ಏಷ್ಯಾ ಕಪ್ 2023ರ ನಾಲ್ಕರ ಘಟ್ಟದ ಪಂದ್ಯದಲ್ಲಿ ಭಾರತದ ವಿರುದ್ಧ 228 ರನ್ ನಿಂದ ಪಾಕಿಸ್ತಾನ ಸೋಲನುಭವಿಸಿದೆ. ಈ ಸೋಲಿಗೆ ಕಾರಣವಾದ ಪಾಕಿಸ್ತಾನದ ತಂಡದ ಆಟಗಾರರ ಮೇಲೆ ಹಲ್ಲೆ ನಡೆದು ಎಲ್ಲರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಪೋಸ್ಟ್‌ವೊಂದು ಸಾಮಾಜಿಕ ಮಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ಸೋಲಿನ ಬಳಿಕ ಪಾಕಿಸ್ತಾನದಲ್ಲಿ ದೊಡ್ಡ ಜಗಳ | ಎಲ್ಲಾ ಪಾಕ್ ಆಟಗಾರರು ಆಸ್ಪತ್ರೆಗೆ ದಾಖಲು ಎಂಬ ಹೇಳಿಕೆಯೊಂದಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಪಾಕ್ ತಂಡದ ಮೇಲೆ ನಡೆದ ದಾಳಿಯಲ್ಲಿ ಬೌಲರ್ ಗಳಾದ ಹ್ಯಾರಿಸ್ ರವೂಫ್ ಹಾಗೂ ನಸೀಮ್ ಶಾಗೆ ಗಾಯಗಳಾಗಿವೆ ಎಂದು ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಸುದ್ದಿ ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಕನ್ನಡ ಸ್ಪೋಟ್ಸ್‌ ಎಕ್ಸ್‌ರ್ಪ್ಟ್ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು ಇದರಲ್ಲಿ ಭಾತರದ ವಿರುದ್ದ 228 ರನ್‌ನಿಂದ ಸೋತ ಪಾಕಿಸ್ತಾನದ ತಂಡದ ಮೇಲೆ ಪಾಕ್‌ ಜನರು ಹಲ್ಲೆ ನಡೆಸಿ ಟಿವಿಗಳನ್ನು ರಸ್ತೆಗೆ ಎಸೆದಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ವಿಡಿಯೋದಲ್ಲಿ ಹಂಚಿಕೊಳ್ಳಲಾದ ಮಾಹಿತಿ ಸುಳ್ಳು.

ಪಾಕಿಸ್ತಾನದ ಬೌಲರ್ ಗಳಾದ ಹ್ಯಾರಿಸ್ ರವೂಫ್ ಹಾಗೂ ನಸೀಮ್ ಶಾ ಗಾಯಾಳುಗಳಾಗಿದ್ದಾರೆ. ವಿಶ್ವ ಕಪ್ ಅನ್ನು ದೃಷ್ಟಿಯಲ್ಲಿ ಇಟ್ಟುಕೊಂಡು, ಅವರಿಬ್ಬರಿಗೆ ಬದಲಿಯಾಗಿ ಶಾನವಾಜ್ ದಹಾನಿ ಮತ್ತು ಜಮಾನ್ ಖಾನ್ ಅವರನ್ನು ತಂಡಕ್ಕೆ ಕರೆಸಿಕೊಳ್ಳಲಾಗಿದೆ ಎಂದು ಪಾಕ್ ತಂಡ ಹೇಳಿಕೆ ನೀಡಿದೆ. ಇನ್ನು ಸಲ್ಮಾನ್ ಅಘಾ ಖಾನ್ ಅವರಿಗೆ ಭಾರತದ ವಿರುದ್ಧದ ಪಂದ್ಯದಲ್ಲಿ ಚೆಂಡು ಮುಖಕ್ಕೆ ಬಡಿದು ಗಾಯವಾಗಿತ್ತು. ಇದನ್ನು ಹೊರತುಪಡಿಸಿದರೆ ವಿಡಿಯೋದಲ್ಲಿ ಸುದ್ದಿ ಆಗಿರುವಂತೆ ಎಲ್ಲ ಪಾಕ್ ಆಟಗಾರರು ಆಸ್ಪತ್ರೆಗೇನೂ ಸೇರಿಲ್ಲ.

ಹ್ಯಾರಿಸ್ ರವೂಫ್, ನಸೀಮ್ ಶಾ ಅವರಿಗೆ ಗಾಯವಾಗಿರುವುದು ಮತ್ತು ಅವರಿಬ್ಬರಿಗೆ ಬದಲಿಯಾಗಿ ಇನ್ನಿಬ್ಬರು ಆಟಗಾರರನ್ನು ಸೇರ್ಪಡೆ ಮಾಡಿಕೊಂಡಿರುವ ಬಗ್ಗೆ ಪಾಕ್ ಕ್ರಿಕೆಟ್ ತಂಡದ ಹೇಳಿಕೆ ಪ್ರಕಟ ಆಗಿರುವ ಪ್ರಜಾವಾಣಿ ವರದಿಯನ್ನು ಇಲ್ಲಿ ಓದಬಹುದು. ಇನ್ನು ವಿಸ್ತಾರ ನ್ಯೂಸ್ ವೆಬ್ ಸೈಟ್ ನಲ್ಲಿ ಸಲ್ಮಾನ್ ಅಘಾ ಖಾನ್ ಅವರಿಗೆ ಮುಖಕ್ಕೆ ಚೆಂಡು ಬಡಿದು, ರಕ್ತಸ್ರಾವ ಆಗಿರುವ ಬಗ್ಗೆ ವರದಿ ಪ್ರಕಟವಾಗಿದೆ. ಅದನ್ನು ಸಹ ಇಲ್ಲಿ ಓದಬಹುದು.

ಇನ್ನು ಭಾರತದ ವಿರುದ್ಧ ಪಾಕ್ ಹೀನಾಯವಾಗಿ ಸೋತಿದ್ದರಿಂದ ಪಾಕಿಸ್ತಾನದಲ್ಲಿ “ಎಲ್ಲ ಟೀವಿಗಳನ್ನು” ಒಡೆದು ಹಾಕಲಾಗಿದೆ ಎಂದು ವಿಡಿಯೋದಲ್ಲಿ ಹೇಳಿದ್ದು, ಅಂಥ ಯಾವುದೇ ವರದಿ ಪ್ರಕಟವಾಗಿಲ್ಲ. ಜತೆಗೆ “ದಿ ಪ್ರಿಂಟ್” ವೆಬ್ ಸೈಟ್ ನಲ್ಲಿ Losing to India broke hearts not TV in Pakistan. Cricket fans took a ‘loyalty test’ on Babar ಎಂಬ ಶೀರ್ಷಿಕೆಯಲ್ಲಿ ವರದಿ ಪ್ರಕಟಿಸಲಾಗಿದೆ. ಭಾರತಕ್ಕೆ ಸೋತಿದ್ದರಿಂದ ಪಾಕಿಸ್ತಾನದಲ್ಲಿ ಹೃದಯಗಳು ಒಡೆದಿವೆ, ಟೀವಿಯಲ್ಲ. ಕ್ರಿಕೆಟ್ ಅಭಿಮಾನಿಗಳು ಬಾಬರ್ ವಿಶ್ವಾಸ ಪರೀಕ್ಷೆಗೆ ಒಡ್ಡಿದ್ದಾರೆ ಎಂಬ ಅರ್ಥದಲ್ಲಿ ಈ ವರದಿ ಇದೆ.

ಪಾಕಿಸ್ತಾನ ಆಟಗಾರರು ತವರಿಗೆ ಬಂದರೆ ಹೊಡಿತೀವಿ, ಬಡಿತೀವಿ ಎಂದು ಪಾಕಿಸ್ತಾನೀಯರು ಹೇಳುತ್ತಿದ್ದಾರೆ ಎಂದು ಸಹ ವಿಡಿಯೋದಲ್ಲಿ ಹೇಳಲಾಗಿದೆ. ಜತೆಗೆ ಪಾಕಿಸ್ತಾನದಲ್ಲಿ ದೊಡ್ಡ ಜಗಳ ಎಂದು ವಿಡಿಯೋದ ಥಂಬ್ ನೇಲ್ ನಲ್ಲಿ ಹಾಕಲಾಗಿದೆ. ಆದರೆ ಎಲ್ಲಿ, ಯಾರು ಹೇಳಿದ್ದು ಎಂಬುದಕ್ಕೆ ಒಂದು ಉದಾಹರಣೆ ಎಂಬಂತೆ ‘ಎಕ್ಸ್’ (ಈ ಹಿಂದೆ ಟ್ವಿಟ್ಟರ್) ನಂಥ ಮೈಕ್ರೋ ಬ್ಲಾಗಿಂಗ್ ಸೈಟ್ ಅಥವಾ ಯಾವುದೇ ಸಾಮಾಜಿಕ ಜಾಲತಾಣದ ಪೋಸ್ಟ್ ಅನ್ನು ವೈರಲ್ ಆದ ವಿಡಿಯೋದಲ್ಲಿ ಉಲ್ಲೇಖ ಮಾಡಿಲ್ಲ. ಇನ್ನು ಪಾಕಿಸ್ತಾನದಲ್ಲಿ ಅಷ್ಟು ದೊಡ್ಡ ಜಗಳ ಆಗಿರುವ ಬಗ್ಗೆ ಮಾಧ್ಯಮಗಳಲ್ಲಿಯಾದರೂ ವರದಿ ಆಗಬೇಕಿತ್ತು. ಅಂಥ ಯಾವ ವರದಿ ಸಹ ಆಗಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಭಾರತದ ವಿರುದ್ದ ಇನ್ನೂರಕ್ಕೂ ಅಧಿಕ ರನ್‌ನಿಂದ ಸೋತ ಪಾಕ್‌ನ ಆಟಗಾರರ ಮೇಲೆ ಹಲ್ಲೆ ನಡೆದಿದೆ ಎಂಬುದು ಸುಳ್ಳು. ಅಂತಹ ಘಟನೆ ನಡೆದ ಬಗ್ಗೆ ಯಾವುದೇ ವರದಿಗಳಾಗಲಿ ಸುದ್ದಿಗಳಾಗಲಿ ಇಲ್ಲ.

ಕೃಪೆ: ನ್ಯೂಸ್ ಮೀಟರ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ʻಸ್ವಾವಲಂಬಿ ಸಾರಥಿʼ ಯೋಜನೆಯನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ವಿರುದ್ದ ಸಂಸದ ತೇಜಸ್ವಿ ಸೂರ್ಯ ಟ್ವೀಟ್


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights