ಫ್ಯಾಕ್ಟ್‌ಚೆಕ್ : ಪೋರ್ನ್ ನಿಯತಕಾಲಿಕೆ ಪ್ಲೇಬಾಯ್‌ಗೆ ನೆಹರು ಸಂದರ್ಶನ ನೀಡಿದ್ದರೆ?

1889 ನವೆಂಬರ್ 14 ನೆಹರು ಅವರ ಹುಟ್ಟಿದ ದಿನ. ಈ ದಿನವನ್ನು ಸರ್ವಕಾಲಿಕವಾಗಿ ಜನ ಮಾನಸದಲ್ಲಿ ಉಳಿಯುವಂತೆ ಮಾಡಲು ಜವಾಹರಲಾಲ್ ನೆಹರು ಅವರ ಹುಟ್ಟಿದ ದಿನವನ್ನು (ನವೆಂಬರ್ 14ಅನ್ನು) ಮಕ್ಕಳ ದಿನಾಚರಣೆ ಎಂದು ಘೋಷಿಸಿ ವಿಶೇಷವಾಗಿ ಆಚರಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ BJP ಬೆಂಬಲಿತ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ನೆಹರು ಕುರಿತು ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

BJP ಬೆಂಬಲಿಗ ರಿಷಿ ಬಾಗ್ರಿ ಎಂಬ ಸಾಮಾಜಿಕ ಮಾಧ್ಯಮ ಬಳಕೆದಾರನೊಬ್ಬ ಎಕ್ಸ್‌ನಲ್ಲಿ ಪೊಸ್ಟ್‌ಅನ್ನು ಹಂಚಿಕೊಂಡಿದ್ದು, “1962 ರ ಇಂಡೋ-ಚೀನಾ ಯುದ್ಧದಲ್ಲಿ ಸೋತ ನಂತರ, ನೆಹರೂ ಅವರು 1963 ರಲ್ಲಿ ಪ್ರಸಿದ್ಧ ಪೋರ್ನ್ ನಿಯತಕಾಲಿಕೆ ಪ್ಲೇಬಾಯ್‌ನಲ್ಲಿ ಕಾಣಿಸಿಕೊಂಡ ದೇಶದ ಮೊದಲ ಮುಖ್ಯಸ್ಥ ಎಂಬ ಹೆಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

Jawaharlal Nehru was in Playboy - YouTube

An exclusive interview with Nehru of India ಎಂಬ ಶೀರ್ಷಿಕೆಯ ಈ ಇಂಟರ್ವ್ಯೂ ಇರುವ ಈ ಮ್ಯಾಗಜೈನ್‌ನ ಪ್ರತಿಯನ್ನು ಪ್ರದರ್ಶಿಸುತ್ತಾ, 1962ರ ಇಂಡೋ-ಚೈನಾ ಯುದ್ಧದ ನಂತರ ಪೋರ್ನ್‌ ಮ್ಯಾಗಜೈನ್‌ನಲ್ಲಿ ನೆಹರೂ ಇಂಟರ್ವ್ಯೂ ಎಂದು ಹಂಚಿಕೊಳ್ಳಲಾಗುತ್ತಿದೆ.

ಶಕುಂತಲಾ ನಟರಾಜ್ ಎಂಬ  BJP ಬೆಂಬಲಿತೆ, ರಿಷಿ ಬಾಗ್ರಿ ಹಂಚಿಕೊಂಡಿರುವ ವಿಡಿಯೋವನ್ನು ಕೋಟ್ ಮಾಡುತ್ತಾ ” ಅದ್ಸರಿ ಈ ನೆಹರು ವಯಸ್ಕರ ಮ್ಯಾಗಜಿನ್ ನಲ್ಲಿ ಬರೋವಂತ ಕೆಲ್ಸ ಎನ್ ಮಾಡಿದ್ರು?” ಎಂದು ಅಗೌರವದ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪ್ಲೇಬಾಯ್ ನಿಯತಕಾಲಿಕೆಗೆ ನಿಜವಾಗಿಯೂ ನೆಹರೂ ಸಂದರ್ಶನ ನೀಡಿದ್ದರೆ? ಅದು ಭಾರತದಲ್ಲಿ ಪ್ರಕಟವಾಗಿತ್ತೆ? ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಪ್ಲೇಬಾಯ್ ಪತ್ರಿಕೆಗೆ ಭಾರತದ ಪ್ರಧಾನಿ 1963ರಲ್ಲಿ ಸಂದರ್ಶನ ನೀಡಿದ್ದರು ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವಿಡಿಯೋದ ಕೀಫ್ರೇಮ್‌ಗಳನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಪ್ಲೇಬಾಯ್ ಎಂಬ ಪತ್ರಿಕೆಯಲ್ಲಿ ನೆಹರೂರವರ ನಕಲಿ ಸಂದರ್ಶನವನ್ನು ಪ್ರಕಟಿಸಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ವಾಸ್ತವವೇನು?

ಪ್ಲೇಬಾಯ್‌ ಎಂಬುದು ಲೈಫ್‌ ಸ್ಟೈಲ್‌ ಮ್ಯಾಗಜೈನ್. ಇದು ಬೆತ್ತಲೆ ಮತ್ತು ಅರೆ ಬೆತ್ತಲೆ ಪೋಟೋಗಳಿಂದ ಜನಪ್ರಿಯತೆ ಗಳಿಸಿತ್ತು. ಇದರಲ್ಲಿ 1962ರಲ್ಲಿ ಪ್ರಕಟವಾಗುತ್ತಿದ್ದ Playboy interview ಎಂಬ ಸರಣಿ ಸಂದರ್ಶನ ಪತ್ರಿಕೆಯ ಪ್ರಕಟಣೆಯನ್ನು ಹೆಚ್ಚಿಸಿತ್ತು.

ಇದರಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ಕುರಿತಾದ ನೆಹರೂ ಅಭಿಪ್ರಾಯಗಳು, ಪ್ರಜಾಪ್ರಭುತ್ವದ ದೌರ್ಬಲ್ಯಗಳು, ಶೀತಲ ಸಮರದ ರಾಜಕೀಯ ಮತ್ತು ಅಂತರರಾಷ್ಟ್ರೀಯ ಸಂಬಂಧಗಳು, ಸಮಾಜ, ವಿಶ್ವ ಧರ್ಮದ ಮೇಲೆ materialismನ ವಿನಾಶಕಾರಿ ಪರಿಣಾಮ, ದೇಶದಲ್ಲಿ ಜನಸಂಖ್ಯಾ ಸ್ಪೋಟ, ವೇಗವಾಗಿ ಬೆಳೆಯುತ್ತಿರುವ ಜಗತ್ತಿನಲ್ಲಿ ಭಾರತದ ಭವಿಷ್ಯ, ಮೊದಲಾದ ವಿಚಾರಗಳ ಕುರಿತು ನೆಹರೂರವರ ಸಮಗ್ರ ದೃಷ್ಟಿಕೋನವನ್ನು ಪ್ರಕಟಿಸಲಾಗಿತ್ತು.

ವಾಸ್ತವವೇನೆಂದರೆ ಈ ಪತ್ರಿಕೆಗೆ ನೆಹರೂರವರು ಸಂದರ್ಶನವನ್ನೆ ನೀಡಿರಲಿಲ್ಲ. ಅಕ್ಟೋಬರ್ 1963ರಂದು ಪ್ರಕಟವಾದ ನೆಹರೂ ಸಂದರ್ಶನಕ್ಕೆ a candid conversation with the architect of modern India ಎಂಬ ಶೀರ್ಷಿಕೆ ನೀಡಲಾಗಿತ್ತು. ಇದೇ ಸಂಚಿಕೆಯ ಪುಟ 3 ರಲ್ಲಿರುವ “ಸಂಪಾದಕೀಯದಲ್ಲಿ” “ನಿಯತಕಾಲಿಕದ ಉಳಿದ ಪ್ರತಿಗಳು ಮುದ್ರಣಕ್ಕೆ ಹೋದ ನಂತರ, ವಾಷಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಿಂದ ಇದು ಪಿಎಂ ನೆಹರೂ ಅವರೊಂದಿಗಿನ ನಮ್ಮ ವೈಯಕ್ತಿಕ ಸಂದರ್ಶನ ಅಲ್ಲ ಎಂಬ ಸುದ್ದಿ ಬಂದಿದೆ. ಆದರೆ ಕಳೆದ ಹಲವಾರು ವರ್ಷಗಳಿಂದ ಪ್ರಧಾನಿಯವರು ಮಾಡಿದ ವಿವಿಧ ಭಾಷಣಗಳು, ಅವರ ಹೇಳಿಕೆಗಳು,ಸಾರ್ವಜನಿಕ ಭಾಷಣಗಳನ್ನು ಒಟ್ಟುಗೂಡುಸಿ ತಯಾರಿಸಲಾಗಿದೆ,” ಎಂದು ಹೇಳಲಾಗಿದೆ.

ಭಾರತೀಯ ರಾಯಭಾರ ಕಚೇರಿಯ ಪ್ರಕಾರ, ನೆಹರು ಪ್ಲೇಬಾಯ್‌ಗೆ ಯಾವುದೇ ಸಂದರ್ಶನವನ್ನು ನೀಡಿಲ್ಲ ಮತ್ತು ಸಂದರ್ಶಕ ಎಂದು ಕರೆಯಲ್ಪಡುವವರು ಸಾರ್ವಜನಿಕ ಡೊಮೇನ್‌ನಲ್ಲಿ ಈಗಾಗಲೇ ಲಭ್ಯವಿರುವ ನೆಹರೂ ಅವರ ಮಾಹಿತಿ ಮತ್ತು ಹೇಳಿಕೆಗಳನ್ನು ಸಂಗ್ರಹಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದು ತಿಳಿಸಿತ್ತು.

ನೆಹರೂ ಅವರ ಹೆಸರನ್ನು ಮುಖಪುಟದಲ್ಲಿ ಅಲಂಕರಿಸುವುದರೊಂದಿಗೆ, ಪತ್ರಿಕೆಯ ಪ್ರತಿಗಳನ್ನು ಭಾರತಕ್ಕೆ ಕಳ್ಳಸಾಗಣೆ ಮಾಡಲಾಯಿತು, ಅವುಗಳ ಮೂಲ ಬೆಲೆಗಿಂತ 30 ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗಿತ್ತು.

ನೆಹರುರವರು ಪ್ಲೇಬಾಯ್ ಎಂಬ ವಯಸ್ಕರ ಪತ್ರಿಕೆಗೆ ಸಂದರ್ಶನವನ್ನೆ ನೀಡಿರಲಿಲ್ಲ. ನೆಹರು ಬೇರೆ ಬೇರೆ ಸಂದರ್ಭದಲ್ಲಿ ಮಾಡಿದ ಭಾಷಣ ಮತ್ತು ಹಳೆಯ ಸಂದರ್ಶನಗಳನ್ನು ಸಂಗ್ರಹಿಸಿ ಪ್ಲೇಬಾಯ್ ಪ್ರಕಟಿಸಿತ್ತು. ವಾಸ್ತವದಲ್ಲಿ ಸಂದರ್ಶಕನೇ ಇಲ್ಲದೆ ನಡೆದಿರುವ ನಕಲಿ ಸಂದರ್ಶನವನ್ನು ಪ್ಲೇಬಾಯ್ ಪ್ರಕಟಿಸಿದೆ ಎಂದು ಪೋರ್ಬ್ಸ್‌ ಪತ್ರಿಕೆ ಲೇಖನವನ್ನು ಪ್ರಕಟಿಸಿತ್ತು.

ಒಟ್ಟಾರೆಯಾಗಿ ಹೇಳುವುದಾದರೆ, ಪ್ಲೇಬಾಯ್ ಪತ್ರಿಕೆಯ ನಕಲಿ ಸಂದರ್ಶನದ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ನೆಹರು ಕುರಿತಾಗಿ ಸುಳ್ಳು ಮತ್ತು ಅಗೌರವದ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹಾಗಾಗಿ ಫೊಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ : ಪೋರ್ಬ್ಸ್‌ ಪತ್ರಿಕೆ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ನೆಹರೂ ಲಂಡನ್ ಪೌರತ್ವ ಪಡೆದಿದ್ದರೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights