ಫ್ಯಾಕ್ಟ್‌ಚೆಕ್ : ಅಶೋಕ ವನದಲ್ಲಿ ಸೀತೆ ಕುಳಿತಿದ್ದ ಕಲ್ಲನ್ನು ಶ್ರೀಲಂಕಾದಿಂದ ವಿಮಾನದಲ್ಲಿ ತರಲಾಗಿದೆ ಎಂದು ಸಂಬಂಧವಿಲ್ಲದ ದೃಶ್ಯ ಹಂಚಿಕೆ

“ಅಶೋಕ ವನದಲ್ಲಿ ಸೀತಾ ಮಾತೆ ಕುಳಿತಿದ್ದ ಕಲ್ಲನ್ನು ಇಂದು ಶ್ರೀಲಂಕಾ ಏರ್‌ಲೈನ್ಸ್ ಮೂಲಕ ಅಯೋಧ್ಯೆಗೆ ತರಲಾಯಿತು” ಅದನ್ನು ಸ್ವೀಕರಿಸಲು ಸ್ವತಃ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಭಕ್ತಿಯಿಂದ ಆಗಮಿಸಿದ ದೃಶ್ಯ ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ವ್ಯಾಪಕವಾಗಿದೆ ಪ್ರಸಾರವಾಗುತ್ತಿದೆ.

ಶ್ರೀಲಂಕಾ ಏರ್ ಲೈನ್ಸ್ ನಲ್ಲಿ ಬಂದಿಳಿದ ಬೌದ್ಧ ಬಿಕ್ಕುಗಳ ನಿಯೋಗವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಬರಮಾಡಿಕೊಂಡರು ” ಸೀತಾಮಾತೆಯ ಅಶೋಕವನದಲ್ಲಿ ಕುಳಿತಿದ್ದ ಬಂಡೆಯ ಭಾಗವನ್ನು ಬಿಕ್ಕುಗಳ ನಿಯೋಗವು ಕುಶಿನಗರಕ್ಕೆ ತಂದಿದೆ. ಅದನ್ನು ಗೌರವಪೂರ್ವಕವಾಗಿ ಬರಮಾಡಿಕೊಳ್ಳಲಾಯಿತು‌ ”

ಹಾಗಿದ್ದರೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ದೃಶ್ಯಗಳು, ರಾಮಾಯಣ ಕಾಲದ ಸೀತೆ ಅಶೋಕವನದಲ್ಲಿ ಕುಳಿತಿದ್ದ ಕಲ್ಲನ್ನು ಶ್ರೀಲಂಕಾದಿಂದ ವಿಮಾನದಲ್ಲಿ ತಂದಾಗ ಅದನ್ನು ಸ್ವೀಕರಿಸಲು ಯೋಗಿ ಆದಿತ್ಯನಾಥ್ ಆಗಮಿಸಿ ಸ್ವೀಕರಿಸಿದ್ದಾರೆ ಎಂಬ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, X ಬಳಕೆದಾರರಾದ ಆಶಿಶ್ ಜಗ್ಗಿ ಅವರ ಪೋಸ್ಟ್‌ಗೆ  ಉತ್ತರಿಸುವಾಗ ಟೈಮ್ಸ್ ಆಫ್ ಇಂಡಿಯಾ ಲೇಖನವನ್ನು ಹಂಚಿಕೊಂಡಿದ್ದಾರೆ. ಲೇಖನದ ಪ್ರಕಾರ, “ಉತ್ತರ ಪ್ರದೇಶದ ಕುಶಿನಗರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶ್ರೀಲಂಕಾದ ವಿಮಾನವನ್ನು ಸ್ವಾಗತಿಸಲಾಯಿತು. ಯೋಗಿ ಆದಿತ್ಯನಾಥ್ ಅವರು ವಿಮಾನ ನಿಲ್ದಾಣದಲ್ಲಿ ಬುದ್ಧನ ಅವಶೇಷಗಳನ್ನು ಸ್ವೀಕರಿಸಿದರು. ಅಕ್ಟೋಬರ್ 20, 2021ರಲ್ಲಿ ವರದಿಯಾಗಿದ್ದು ಈ ಸಂದರ್ಭದಲ್ಲಿ ಸಂದರ್ಭದಲ್ಲಿ123 ಶ್ರೀಲಂಕಾ ಪ್ರತಿನಿಧಿಗಳ ತಂಡವು ಅವಶೇಷಗಳೊಂದಿಗೆ ಬಂದಿತು.

ಅಷ್ಟಕ್ಕೂ ಈ ಘಟನೆ ನಡೆದಿರುವುದು ಅಕ್ಟೋಬರ್ 2021ರಲ್ಲಿ ಅಂದರೆ ಎರಡು ವರ್ಷಗಳ ಹಿಂದೆ, ಅಕ್ಟೋಬರ್ 20 ರಂದು ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಈ ಸಂದರ್ಭದ ಕೆಲವು ಚಿತ್ರಗಳನ್ನು ಟ್ವೀಟ್ ಮಾಡಿದ್ದರು. ವಾಸ್ತವವಾಗಿ ಶ್ರೀಲಂಕಾದಿಂದ ಬಂದರುವ ಅಶೋಕ ವನದಲ್ಲಿ ಸೀತೆ ಕುಳಿತಿದ್ದ ಕಲ್ಲು ಎಂದು ಹೇಳಲಾಗುತ್ತಿರುವ ದೃಶ್ಯಗಳು ವಾಸ್ತವವಾಗಿ ಗೌತಮ ಬುದ್ಧನ ಲೋಹದ ಅವಶೇಷವಾಗಿದೆ. ನ್ಯಾಷನಲ್ ಕೌನ್ಸಿಲ್ ಆಫ್ ಸೈನ್ಸ್ ಮ್ಯೂಸಿಯಂ ಕೂಡ ಈ ಸಂದರ್ಭದ ಫೋಟೋವನ್ನು ಹಂಚಿಕೊಂಡಿದೆ.

2021 ಅಕ್ಟೋಬರ್ 28 ರಂದು, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಶ್ರೀಲಂಕಾದ ಹೈಕಮಿಷನರ್ ಮತ್ತು ಮಂತ್ರಿಗಳು, ಅಶೋಕ ವನದ ಸೀತಾ ಕಲ್ಲನ್ನು ಅಯೋಧ್ಯೆಗೆ ಶಿಲಾ (ಪವಿತ್ರ ಕಲ್ಲು) ದಾನ ಮಾಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ANI ತನ್ನ ಎಕ್ಸ್‌ ನಲ್ಲಿ ಹಂಚಿಕೊಂಡ ಮಾಹಿತಿ ಪ್ರಕಾರ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರು ಭಾರತದಲ್ಲಿರುವ ತಮ್ಮ ಹೈಕಮಿಷನರ್ ಮಿಲಿಂದಾ ಮೊರಗೋಡ ಮತ್ತು ಅವರ ಪತ್ನಿ ಜೆನ್ನಿಫರ್ ಮೊರಗೋಡ ಸೇರಿದಂತೆ ಶ್ರೀಲಂಕಾದ ನಿಯೋಗವನ್ನು ಸ್ವಾಗತಿಸಿದ್ದರು. ಇದಕ್ಕೂ ಮುನ್ನ ಮಾರ್ಚ್‌ನಲ್ಲಿ ಕೊಲಂಬೊದಲ್ಲಿರುವ ಭಾರತದ ಹೈಕಮಿಷನ್ ಶ್ರೀಲಂಕಾದ ಸೀತಾ ಕಲ್ಲನ್ನು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಬಳಸಲಾಗುವುದು ಎಂದು ಟ್ವೀಟ್ ಮಾಡಿದ್ದರು.

ಒಟ್ಟಾರೆಯಾಗಿ ಹೇಳುವುದಾದರೆ, 2021ರಲ್ಲಿ ಬುದ್ದನಿಗೆ ಸಂಬಂಧಿಸಿದ ವಸ್ತುಗಳನ್ನು 123 ಶ್ರೀಲಂಕಾ ಪ್ರತಿನಿಧಿಗಳ ತಂಡವು ವಿಶೇಷ ವಿಮಾನದ ಮೂಲಕ ಉತ್ತರ ಪ್ರದೇಶದ ಕುಶಿನಗರಕ್ಕೆ ತೆಗೆದುಕೊಂಡು ಬಂದ ಸಂದರ್ಭವನ್ನು, ರಾಮಾಯಣ ಕಾಲದ ಲಂಕಾದಲ್ಲಿ ಅಶೋಕ ವನದಲ್ಲಿ ಸೀತೆ ಕುಳಿತಿದ್ದ ಕಲ್ಲನ್ನು ಅಯೋಧ್ಯಯ ರಾಮಮಂದಿರ ನಿರ್ಮಾಣಕ್ಕಾಗಿ ತರಲಾಗಿದೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ : ಆಲ್ಟ್‌ನ್ಯೂಸ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಆಸೀಸ್ ನಾಯಕನನ್ನು ಅಭಿನಂದಿಸದೆ ಮುಖ ತಿರುಗಿಸಿಕೊಂಡು ಹೋದ್ರಾ ಪ್ರಧಾನಿ ಮೋದಿ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights