ಫ್ಯಾಕ್ಟ್‌ಚೆಕ್ : ಕೇರಳದ ಬಾಲ ಗಾಯಕ ಆದಿತ್ಯ ಸುರೇಶ್‌ನನ್ನು ಎಸ್‌ಪಿಬಿ ಮೊಮ್ಮಗ ಎಂದು ತಪ್ಪಾಗಿ ಹಂಚಿಕೆ

ಸಾವಿರಾರು ಹಾಡುಗಳನ್ನು ಹಾಡುವ ಮೂಲಕ ಕೋಟ್ಯಾಂತರ ಜನರನ್ನು ರಂಜಿಸಿದ ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ. ಐದು ದಶಕಗಳ ಕಾಲ ಸಂಗೀತ ಲೋಕದಲ್ಲಿ ಸಕ್ರಿಯರಾಗಿದ್ದರು. 40 ಸಾವಿರಕ್ಕೂ ಅಧಿಕ ಹಾಡುಗಳಿಗೆ ಧ್ವನಿಯಾಗಿದ್ದ ‘ಗಾನ ಗಾರುಡಿಗ’ ದಿವಂಗತ ಎಸ್‌ಪಿ ಬಾಲಸುಬ್ರಹ್ಮಣ್ಯಂ 25 ಸೆಪ್ಟೆಂಬರ್ 2020ರಲ್ಲಿ ನಿಧನರಾದರು.

ಎಸ್‌ಪಿಬಿ ಅವರ ಮೊಮ್ಮಗ ಅವರ ದಾರಿಯಲ್ಲೆ ಸಾಗುತ್ತಿದ್ದಾನೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಬಾಲಕನೊಬ್ಬ ಸುಮದುರವಾಗಿ ಹಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮಧ್ಯಗಳಲ್ಲಿ ಪ್ರಸಾರವಾಗುತ್ತಿದೆ.

ಎಸ್‌ಪಿಬಿ ಮೊಮ್ಮಗನ ಲೈವ್ ನಲ್ಲಿ ಹಾಡುತ್ತಿರುವ ವಿಡಿಯೊ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳಲಾಗುತ್ತಿದ್ದು, ಎಸ್‌ಪಿಬಿ ಹಾಡಿರುವ  ‘ಮಲರೆ ಮೌನಮ’ ಹಾಡನ್ನು ಚಿಕ್ಕ ಹುಡುಗನೊಬ್ಬ ಹಾಡುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು.  ಹಾಗಿದ್ದರೆ ಈ ವಿಡಿಯೋದಲ್ಲಿ ಹಾಡುತ್ತಿರುವ ಬಾಲಕ ದಿವಾಂಗತ ಎಸ್‌ಪಿ ಬಾಲಸುಭ್ರಹ್ಮಣ್ಯಂ ಅವರ ಮೊಮ್ಮಗನಾ? ಎಂದು ಪೋಸ್ಟ್‌ನಲ್ಲಿ ಮಾಡಲಾಗಿರುವ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ವೀಡಿಯೊದಲ್ಲಿನ ಸ್ಕ್ರೀನ್‌ಶಾಟ್‌ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ ಸರ್ಚ್  ಮಾಡಲಾಗಿದ್ದು, ಇದೇ ರೀತಿಯ ದೃಶ್ಯಗಳೊಂದಿಗೆ ವೀಡಿಯೊವನ್ನು 19 ಜೂನ್ 2020 ರಂದು ಯೂಟ್ಯೂಬ್ ಚಾನೆಲ್ ನಲ್ಲಿ ಪೋಸ್ಟ್ ಮಾಡಿರುವುದು ಕಂಡುಬಂದಿದೆ. ಈ ವೀಡಿಯೊವನ್ನು “ಮಲಾರೆ ಮೌನಮೆ – ಆದಿತ್ಯ ಸುರೇಶ್ ಅವರ ಸುಮಧುರ ಗಾಯನ” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು  ಹುಡುಕಿದಾಗ, ಆದಿತ್ಯ ಸುರೇಶ್ ಅವರ ಫೇಸ್‌ಬುಕ್ ಪುಟದಲ್ಲಿ ಪ್ರಕಟವಾದ ಅದೇ ವೀಡಿಯೊ ಕಂಡುಬಂದಿದೆ. ವೀವರ್‌ವೊಬ್ಬರು ಕಾಮೆಂಟ್ ವಿಭಾಗದಲ್ಲಿ, ನೀವು ಎಸ್‌ಪಿಬಿ ಅವರ ಮೊಮ್ಮಗನೇ ಎಂದು ಬಳಕೆದಾರರು ಕೇಳಿದಾಗ, ಆದಿತ್ಯ ಸುರೇಶ್ ಅವರು ಎಸ್‌ಪಿಬಿ ಅವರ ಮೊಮ್ಮಗ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಮತ್ತು ಅದು ನಕಲಿ ಸುದ್ದಿ ಎಂದು ಖಚಿತಪಡಿಸಿದ್ದಾರೆ.

ಆದಿತ್ಯ ಸುರೇಶ್ ಕೇರಳದ ಕೊಲ್ಲಂ ನಗರದ ಜನಪ್ರಿಯ ಬಾಲ ಗಾಯಕ. ಹುಟ್ಟಿನಿಂದಲೇ ಬ್ರಿಟಲ್ ಬೋನ್ ಕಾಯಿಲೆಯಿಂದ ಬಳಲುತ್ತಿದ್ದ ಆದಿತ್ಯ ಸುರೇಶ್ ಹಾಡುಗಾರಿಕೆಯಲ್ಲಿ ಒಲವು ಹೊಂದಿದ್ದರು. ಕೇರಳ ಮತ್ತು ದೇಶದ ಇತರ ಭಾಗಗಳಲ್ಲಿ ಹಲವಾರು ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಆದಿತ್ಯ ಸುರೇಶ್ ಅವರ ಲೈವ್ ಪ್ರದರ್ಶನಗಳ ಕೆಲವು ಇತರ ವೀಡಿಯೊಗಳನ್ನು ಇಲ್ಲಿಇಲ್ಲಿ ಮತ್ತು ಇಲ್ಲಿ ನೋಡಬಹುದು. ಆದಿತ್ಯ ಸುರೇಶ್‌ಗೂ ಸಿನಿಮಾಗಳಲ್ಲಿ ಹಾಡುವ ಅವಕಾಶಗಳು ಬಂದವು. ಆದಿತ್ಯ ಸುರೇಶ್ ಅವರ ಪೋಷಕರೊಂದಿಗೆ ಇರುವ ಫೋಟೋವನ್ನು ಇಲ್ಲಿ ನೋಡಬಹುದು.

ದಿವಾಂಗತ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಮೊಮ್ಮಕ್ಕಳೊಂದಿಗೆ ಇರುವ ಅವರ ಕೌಟುಂಬಿಕ ಚಿತ್ರಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಈ ಎಲ್ಲ ಆಧಾರಗಳಿಂದ ವಿಡಿಯೋದಲ್ಲಿ ಹಾಡುತ್ತಿರುವ  ಬಾಲ ಗಾಯಕ ಆದಿತ್ಯ ಸುರೇಶ್ ಅವರೇ ಹೊರತು ದಿವಂಗತ ಗಾಯಕ ಎಸ್‌ಪಿಬಿ ಅವರ ಮೊಮ್ಮಗ ಅಲ್ಲ ಎಂಬುದು ಖಚಿತವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಕೇರಳದ ಬಾಲ ಗಾಯಕ ಆದಿತ್ಯ ಸುರೇಶ್ ಅವರನ್ನು, ಗಾಯಕ ಎಸ್‌ಪಿಬಿ ಅವರ ಮೊಮ್ಮಗ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : Fact check | ರಾಜ್ಯ ಸರ್ಕಾರ ಅಂಗನವಾಡಿ ಹುದ್ದೆಗಳಿಗೆ ಉರ್ದು ಭಾಷೆಯನ್ನು ಕಡ್ಡಾಯಗೊಳಿಸಿದೆ ಎಂಬುದು ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights