FACT CHECK | ವೈದ್ಯನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ವ್ಯಕ್ತಿ ಮುಸ್ಲಿಮನಲ್ಲ! ಮತ್ತ್ಯಾರು?

ಮುಸುಕುದಾರಿ ವ್ಯಕ್ತಿಯೊಬ್ಬ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ವ್ಯಕ್ತಿಯನ್ನು ಮಚ್ಚಿನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ಮಹಾರಾಷ್ಟ್ರದಲ್ಲಿ, ನಾಸಿಕ್‌ನ ಸುಯೋಗ್ ಆಸ್ಪತ್ರೆಯಲ್ಲಿ, ಜಿಹಾದಿ ದಾಳಿಕೋರನು ಐಸಿಯುಗೆ ನುಗ್ಗಿ ಡಾ. ಕೈಲಾಶ್ ರಾಠಿ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾನೆ. 30 ಸೆಕೆಂಡುಗಳಲ್ಲಿ ನಡೆದ ಈ ದಾಳಿಯಿಂದಾಗಿ, ಡಾ. ಕೈಲಾಶ್ ರಾಠಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ವ್ಯಕ್ತಿ  ವೈದ್ಯರ ಸ್ನೇಹಿತನಾಗಿದ್ದ ಎಂಬ ಬರಹದೊಂದಿಗೆ ವಾಟ್ಸಾಪ್ ಮತ್ತು ಫೇಸ್‌ಬುಕ್‌ನಲ್ಲಿ ಅತ್ಯಂತ ಹೃದಯ ವಿದ್ರಾವಕ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ವಾಟ್ಸಾಪ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್‌ನಲ್ಲಿ ಸಂಬಂಧಿತ ಕೀವರ್ಡ್‌ಗಳೊಂದಿಗೆ ಸರ್ಚ್ ಮಾಡಿದಾಗ, ಹಲವು ಪ್ರತಿಕೆಗಳು ಮಾಡಿದ ವರದಿಗಳು ಲಭ್ಯವಾಗಿವೆ. ವರದಿಗಳ ಪ್ರಕಾರ ಈ ಘಟನೆಯು 23 ಫೆಬ್ರವರಿ 2024 ರಂದು ಮಹಾರಾಷ್ಟ್ರದ ನಾಸಿಕ್‌ನ ಪಂಚವಟಿಯಲ್ಲಿ ಸಂಭವಿಸಿದೆ ಎಂದು ಉಲ್ಲೇಖಿಸಿದೆ.

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ವೈದ್ಯರಾದ ಕೈಲಾಸ್ ರಾಠಿ ಎಂಬುವವರ ಮೇಲೆ ಮಚ್ಚಿನಿಂದ ಹೊಡೆದು ಬರ್ಬರವಾಗಿ ಹಲ್ಲೆ ನಡೆಸಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಕೈಲಾಸ್ ರಾಠಿ ನಾಸಿಕ್‌ನ ಪಂಚವಟಿಯಲ್ಲಿರುವ ಸುಯೋಗ್ ಆಸ್ಪತ್ರೆಯ ನಿರ್ದೇಶಕರಾಗಿದ್ದಾರೆ.

ರಾಜೇಂದ್ರ ಮೋರೆ ಎಂಬ ವ್ಯಕ್ತಿಯು ವೈದ್ಯರಾದ ಡಾ.ಕೈಲಾಶ್ ರಾಠಿ ಅವರನ್ನು 23 ಫೆಬ್ರವರಿ 2024 ರಂದು ರಾತ್ರಿ 9:30 ರ ಸುಮಾರಿಗೆ ದಿಂಡೋರಿ ನಾಕಾದಲ್ಲಿನ ಅವರ ಕ್ಲಿನಿಕ್‌ನಲ್ಲಿ ಕುಳಿತು ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ವೇಳೆ ಸಂಚು ಮಾಡಿ ಮಚ್ಚಿನಿಂದ 16-17 ಬಾರಿ ಕೊಚ್ಚಿ 49 ವರ್ಷದ ವೈದ್ಯನನ್ನು ಹೊಡೆದು ಹತ್ಯೆ ಮಾಡಿದಾರೆ ಎಂದು ವರದಿಯಾಗಿದೆ. ಇಡೀ ಘಟನೆ ಐಸಿಯುನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಈ ಕೃತ್ಯ ನಡೆದಿದೆ ಎಂದು ವರದಿಯಾಗಿದೆ.

'Stabbed Over 16 Times': Doctor Brutally Attacked With Machete In Maharashtra's Nashik

ರಾಜೇಂದ್ರ ಮೋರೆ ಅವರ ಪತ್ನಿ ಡಾ.ಕೈಲಾಶ್ ರಾಠಿ ಅವರ ಬಳಿ ಕೆಲಸ ಮಾಡುತ್ತಿದ್ದರು, ಕಷ್ಟದ ಸಂದರ್ಭ ಎಂದು ಹೇಳಿ 6 ಲಕ್ಷದವರೆಗೆ ಹಣ ಪಡೆದಿದ್ದರು, ಅದನ್ನು ಹಿಂದಿರುಗಿಸುವಂತೆ ಕೇಳಿದಕ್ಕೆ ಈ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಲ್ಲೆ ಮಾಡಿದ ವ್ಯಕ್ತಿ ಮುಸ್ಲಿಮನಲ್ಲ :

ಮೋರ್ ಅವರ ಪತ್ನಿ ಕೆಲವು ವರ್ಷಗಳ ಹಿಂದೆ ರಾಠಿಯ ಕ್ಲಿನಿಕ್‌ನಲ್ಲಿ ಕೆಲಸ ಬಿಟ್ಟಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆಸ್ತಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಅವರು ಮತ್ತು ಅವರ ಪತಿ ಡಾ.ರಾಠಿ ಅವರಿಂದ ಸ್ವಲ್ಪ ಹಣವನ್ನು ತೆಗೆದುಕೊಂಡಿದ್ದರು. ಹಣವನ್ನು ಹಿಂದಿರುಗಿಸಲು ರಾಠಿ ಮೋರೆಯನ್ನು ಒತ್ತಾಯಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ದಾಖಲಿಸಿರುವ ಎಫ್‌ಐಆರ್ ಪ್ರಕಾರ, ವೈದ್ಯರ ಮೇಲೆ ಹಲ್ಲೆ ನಡೆಸಿರುವ ಆರೋಪಿ ರಾಜೇಂದ್ರ ಮೋರೆ ಎಂಬ ಹಿಂದೂ ವಕ್ತಿ ಎಂಬುದು ದೃಢಪಟ್ಟಿದೆ. ಹಣಕಾಸಿನ ವಿವಾದಕ್ಕಾಗಿ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ಯಾವುದೇ ಕೋಮು ಆಯಾಮವಿಲ್ಲ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ರಾಜೇಂದ್ರ ಮೋರ್ ಎಂಬ ವ್ಯಕ್ತಿ ಹಣದ ವಿಚಾರವಾಗಿ ಡಾ. ಕೈಲಾಸ್ ರಾಠಿ ಎಂಬುವವರನ್ನು ಮಚ್ಚಿನಿಂದ ಹೊಡೆದು ಹ್ತಯೆಗೆ ಯತ್ನಿಸಿದ್ದಾನೆ. ದಾಳಿಗೊಳಗಾದ ಡಾ. ಕೈಲಾಸ್ ರಾಠಿ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಖಿಸಿದ್ದರು ಎಂದು ವರದಿಯಾಗಿದೆ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಹಲ್ಲೆ ಮಾಡಿದ ವ್ಯಕ್ತಿ ಮುಸ್ಲಿಂ ಎಂದು ಡಾ. ಕೈಲಾಸ್ ರಾಠೆ ಸ್ಥಳದಲ್ಲೆ ಮೃತಪಟ್ಟಿದ್ದಾರೆಂದು ಕೋಮು ದ್ವೇಷದ ಹಿನ್ನಲೆಯಲ್ಲಿ ಸುಳ್ಳು ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಹಳೆಯ ಸಂಬಂಧವಿಲ್ಲದ ಫೋಟೊ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights