FACT CHECK | ಪಾಕಿಸ್ತಾನದಲ್ಲಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಗಾಯತ್ರಿ ಮಂತ್ರ ಹಾಡಲಾಗಿದೆಯೇ ? ಈ ಸ್ಟೋರಿ ಓದಿ
ಪಾಕಿಸ್ತಾನ್ ಮುಸ್ಲೀಂ ಲೀಗ್- ನವಾಜ್ ಪಕ್ಷದ ಶೆಹಜಾಬ್ ಷರೀಫ್ ಎರಡನೇ ಬಾರಿಗೆ ನೆರೆ ರಾಷ್ಟ್ರ ಪಾಕಿಸ್ತಾನದ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಶೆಹಜಾಬ್ ಷರೀಫ್ (ನವಾಜ್) ಪಾಕಿಸ್ತಾನದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮಾರಂಭದಲ್ಲಿ ಗಾಯತ್ರಿ ಮಂತ್ರವನ್ನು ಪಠಿಸಲಾಗಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.
ಇದು ನಿಜವೇ ? ಪಾಕಿಸ್ತಾನದ ಪ್ರಧಾನಿಯ ಪದಗ್ರಹಣ ಸಭೆಯಲ್ಲಿ ಗಾಯತ್ರಿ ಮಂತ್ರ ಪಠಿಸಲು ಅವಕಾಶ ಕೊಟ್ಟಿದ್ದರೇ ? ಅಥವಾ ಹಿಂದೂ ಕಿಡಿಗೇಡಿಗಳ ಫೋಟೋಶಾಪ್ ಇರಬಹುದೇ ? ಎಂದು ಫೇಸ್‌ಬುಕ್ ಬಳಕೆದಾರರೊಬ್ಬರು ಪ್ರಶ್ನಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.
ಮಾರ್ಚ್ 4 ರಂದು ಶೆಹಬಾಜ್ ಷರೀಫ್ ಅವರು ಪಾಕಿಸ್ತಾನದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು, 2022 ರಿಂದ ಎರಡನೇ ಬಾರಿಗೆ ದೇಶದ ಆಡಳಿತವನ್ನು ಷರೀಫ್ ವಹಿಸಿಕೊಂಡಿದ್ದಾರೆ. ಹಾಗಿದ್ದರೆ ಶೆಹಬಾಜ್ ಷರೀಫ್ ಪಾಕಿಸ್ತಾನದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ ಗಾಯತ್ರಿ ಮಂತ್ರವನ್ನು ಹಾಡಿರುವುದು ನಿಜವೆ ಎಂದು ಪರಿಶೀಲಿಸುವಂತೆ ಕೆಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಏನ್‌ಸುದ್ದಿ.ಕಾಂ ಅನ್ನು ವಿನಂತಿಸಿದ್ದಾರೆ. ಇದು ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂದಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಮಾರ್ಚ್ 17, 2017 ರ ಎಬಿಪಿ ನ್ಯೂಸ್ ವರದಿ ಲಭ್ಯವಾಗಿದೆ. ಕರಾಚಿಯಲ್ಲಿ ನವಾಜ್ ಷರೀಫ್ ಅವರ ಸಮ್ಮುಖದಲ್ಲಿ ಹಿಂದೂ ಹುಡುಗಿಯೊಬ್ಬಳು ಗಾಯತ್ರಿ ಮಂತ್ರವನ್ನು ಪಠಿಸಿದಳು ಮತ್ತು ಪಾಕ್ ಪ್ರಧಾನಿ ನಿರೂಪಣೆಯನ್ನು ಶ್ಲಾಘಿಸಿದರು ಎಂದು ವರದಿಯಾಗಿದೆ.
ಮಾಜಿ ಪ್ರಧಾನಿ ನವಾಜ್ ಷರೀಫ್ ಸೇರಿದಂತೆ ವೇದಿಕೆಯಲ್ಲಿದ್ದ ಸಭಿಕರು ಮತ್ತು ಗಣ್ಯರಿಗೆ “ಹ್ಯಾಪಿ ಹೋಳಿ” ಎಂದು ಪ್ರಾರ್ಥನೆಯನ್ನು ಪಠಿಸಲು ಮುಂದಾಗುವ ಮೊದಲು ಸ್ಪೀಕರ್ ಶುಭ ಹಾರೈಸಿದ್ದು, ಇದೊಂದು ಸಾಂಸ್ಕೃತಿಕ ಕಾರ್ಯಕ್ರಮವಾಗಿದೆ ಎಂಬುದನ್ನು ಪರಿಶೀಲಿನೆ ವೇಳೆ ತಿಳಿದುಬಂದಿದೆ. ಗಾಯತ್ರಿ ಮಂತ್ರ ಪಠಣ ಮುಗಿಯುತ್ತಿದ್ದಂತೆ ನವಾಜ್ ಷರೀಫ್ ಚಪ್ಪಾಳೆ ತಟ್ಟುತ್ತಾ ಆಕೆಯನ್ನು ಪ್ರೋತ್ಸಾಹಿಸುವುದನ್ನು ಕಾಣಬಹುದು. ಹಾಗಾಗಿ ಈ ವೈರಲ್ ವಿಡಿಯೋ ಕನಿಷ್ಠ ಏಳು ವರ್ಷಗಳಷ್ಟು ಹಳೆಯದು ಎಂದು ಸ್ಪಷ್ಟವಾಗುತ್ತದೆ.
“ಮುಹಮ್ಮದ್ ನವಾಜ್ ಷರೀಫ್ (ಪಾಕಿಸ್ತಾನದ ಪ್ರಧಾನ ಮಂತ್ರಿ) ಅವರಿಗೆ ಆತ್ಮೀಯ ಸ್ವಾಗತ, ಹೋಳಿ ಹಬ್ಬದ ಶುಭಾಶಯಗಳು”. ಎಂದು ಪೋಸ್ಟ್‌ರ್‌ನಲ್ಲಿ ಬರೆದಿರುವುದನ್ನು ಕಾಣಬಹುದು. ಜಿನ್ನಾ ಪೋಸ್ಟರ್ ಕೂಡ ವಿಡಿಯೋದಲ್ಲಿ ಕಾಣಬಹುದು. ಮಾರ್ಚ್ 17, 2017 ರಂದು ಯುಟ್ಯೂಬ್‌ನಲ್ಲಿ ನ್ಯಾಷನಲ್ ಹೆರಾಲ್ಡ್ ವಿಡಿಯೋ ಲಭ್ಯವಾಗಿದ್ದು ಅದರಲ್ಲಿಯೂ ಈ ಕಾರ್ಯಕ್ರಮ ಹಳೆಯದು ಎಂಬುದು ಸ್ಪಷ್ಟವಾಗುತ್ತದೆ.
ಮಾರ್ಚ್ 21, 2017 ರಂದು ನರೋಧಾ ಮಾಲಿನಿಯೊಂದಿಗಿನ BBC ನ್ಯೂಸ್ ಹಿಂದಿ ಸಂದರ್ಶನ ಲಭ್ಯವಾಗಿದ್ದು ಷರೀಫ್ ಅವರ ಮುಂದೆ ಅವರು ಮಾಡಿದ ವಾಚನದ ಆಯ್ದ ಭಾಗವನ್ನು ಒಳಗೊಂಡಿದೆ.
“ಮುಖ್ಯ ಅತಿಥಿ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಮತ್ತು ಇತರರು ಭಾಗವಹಿಸಿದ ಹೋಳಿ ಆಚರಣೆಯ ಕಾರ್ಯಕ್ರಮದ ಆರಂಭದಲ್ಲಿ, ಪಾಕಿಸ್ತಾನಿ ಗಾಯಕಿ ನರೋಧ ಮಾಲ್ನಿ ಅವರು ಪವಿತ್ರ ಗಾಯತ್ರಿ ಮಂತ್ರದ ನಿರೂಪಣೆಯನ್ನು ನೀಡುತ್ತಾರೆ” ಎಂದು ವೀಡಿಯೊದ ವಿವರಣೆಯಲ್ಲಿ ಉಲ್ಲೇಖಿಸಲಾಗಿದೆ. ಪಾಕಿಸ್ತಾನದ ಕರಾಚಿಯಲ್ಲಿ 2017 ರ ಹೋಳಿ ಕಾರ್ಯಕ್ರಮದ ವೈರಲ್ ವೀಡಿಯೊವನ್ನು ದೃಢೀಕರಿಸುವ ಇದೇ ರೀತಿಯ ವರದಿಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, 2017ರಲ್ಲಿ ಹೋಳಿ ಆಚರಣೆಯ ಕಾರ್ಯಕ್ರಮದಲ್ಲಿ ಪಾಕಿಸ್ತಾನಿ ಗಾಯಕಿ ನರೋಧ ಮಾಲ್ನಿ ಅವರು ಗಾಯತ್ರಿ ಮಂತ್ರ ಹಾಡಿನ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂದರ್ಭವನ್ನು, 2024 ಮಾರ್ಚ್ 4 ರಂದು ನಡೆದ ಶೆಹಜಾಬ್ ಷರೀಫ್ (ನವಾಜ್) ಪಾಕಿಸ್ತಾನದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮಾರಂಭದಲ್ಲಿ ಗಾಯತ್ರಿ ಮಂತ್ರವನ್ನು ಪಠಿಸಲಾಗಿದೆ ಎಂಬ ಸುಳ್ಳು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಪಾಕಿಸ್ತಾನ ಮೂಲದ ‘ಹಬ್ ಪವರ್ ಕಂಪನಿ’ ಬಿಜೆಪಿ ಯಿಂದ ಚುನಾವಣಾ ಬಾಂಡ್ ಅನ್ನು ಖರೀದಿ ಮಾಡಿದೆಯೇ?