FACT CHECK | ಪಾಕಿಸ್ತಾನ ಮೂಲದ ‘ಹಬ್ ಪವರ್ ಕಂಪನಿ’ ಬಿಜೆಪಿ ಯಿಂದ ಚುನಾವಣಾ ಬಾಂಡ್ ಅನ್ನು ಖರೀದಿ ಮಾಡಿದೆಯೇ?

ಸುಪ್ರೀಂ ಕೋರ್ಟ್​ ಚಾಟಿ ಬಳಿಕ ಎಚ್ಚೆತ್ತುಕೊಂಡ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಭಾರತೀಯ ಚುನಾವಣಾ ಆಯೋಗಕ್ಕೆ (ECI) ಎಲ್ಲಾ ಚುನಾವಣಾ ಬಾಂಡ್​ಗಳ ಡೇಟಾವನ್ನು ಸಲ್ಲಿಸಿದೆ. ಚುನಾವಣಾ ಆಯೋಗ 2019ರ ಏಪ್ರಿಲ್‌ 12 ರಿಂದ 1 ಸಾವಿರ ರೂ. ನಿಂದ ಹಿಡಿದು 1 ಕೋಟಿ ರೂ. ಮೌಲ್ಯದ ಮುಖಬೆಲೆಯ ಚುನಾವಣಾ ಬಾಂಡ್‌ಗಳನ್ನು (Election Bond) ಯಾರು ಖರೀದಿಸಿದ್ದಾರೋ ಅವರ ವಿವರವನ್ನು ಪ್ರಕಟಿಸಿದೆ.

ಚುನಾವಣಾ ಆಯೋಗವು ತನ್ನ ವೆಬ್‌ಸೈಟ್‌ನಲ್ಲಿ ವಿವರಗಳನ್ನು ಅಪ್‌ಲೋಡ್ ಮಾಡಿದ ಬೆನ್ನಲ್ಲೆ ಚುನಾವಣಾ ಬಾಂಡ್ ವಿಷಯವು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡಿಂಗ್ ಕ್ರಿಯೇಟ್ ಮಾಡಿದೆ. ಪಾಕಿಸ್ತಾನ ಮೂಲದ ‘ಹಬ್ ಪವರ್ ಕಂಪನಿ’ ಬಿಜೆಪಿ ಯಿಂದ ಚುನಾವಣಾ ಬಾಂಡ್ ಅನ್ನು ಖರೀದಿ ಮಾಡಿದೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಪುಲ್ವಾಮ ದಾಳಿಯ ನಂತರ ಪಾಕಿಸ್ತಾನ ಮೂಲದ ಹಬ್ ಪವರ್ ಕಮಪನಿ ಚುನಾವಣಾ ಬಾಂಡ್ ಮೂಲಕ ನಿರಂತರವಾಗಿ ಬಿಜೆಪಿ ಪಕ್ಷಕ್ಕೆ ಫಂಡಿಂಗ್ ಮಾಡಿದೆ. ಇಡೀ ದೇಶವೇ 40 ವೀರ ಸೈನಿಕರನ್ನು  ಕಳೆದುಕೊಂಡು ದುಖಿಃಸುತ್ತಿದ್ದಾಗ, ಪಾಕಿಸ್ತಾನದಿಂದ ಯಾರೋ ಬಿಜೆಪಿ ಪಕ್ಷಕ್ಕೆ ಧನ ಸಹಾಯ ಮಾಡುತ್ತಿದ್ದರು. ದಾಳಿಯ ಸರಿಯಾದ ತನಿಖೆಯನ್ನು ಯಾಕಾಗಿ ನಡೆಸಲಾಗಿಲ್ಲ, ಆರೋಪಿಗಳು ಯಾಕಾಗಿ ಇನ್ನು ಸಿಕ್ಕಿಲ್ಲ ಎಂದು ಈಗ ನಿಮಗೆ ಅರ್ಥವಾಗಿರಬಹುದು ಎಂಬ ಹೇಳಿಕೆಯಿರುವ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಹಾಗಿದ್ದರೆ “ಹಬ್ ಪವರ್ ಕಂಪನಿಯೂ’ ಪಾಕಿಸ್ತಾನ ಮೂಲದ ಸಂಸ್ಥೆ ಎಂಬುದು ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ನೀಡಿದ ಚುನಾವಣಾ ಬಾಂಡ್ ವಿವರಗಳನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ) ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ ನಂತರ, ಪಾಕಿಸ್ತಾನ ಮೂಲದ “ಹಬ್ ಪವರ್ ಕಂಪನಿ” ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ ಎಂಬ ಸುದ್ದಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿಯಬಿಡಲಾಗುತ್ತಿದೆ. 

2019 ರಲ್ಲಿ ಪುಲ್ವಾಮಾ ಭಯೋತ್ಪಾದಕ ದಾಳಿ ನಡೆದ ವಾರಗಳ ನಂತರ ಈ ಹಬ್ ಪವರ್ ಕಂಪನಿ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದೆ ಎಂದು ಹಂಚಿಕೊಳ್ಳಲಾಗುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ‘ಹಬ್ ಪವರ್ ಕಂಪನಿಯು’ ಯಾವ ದೇಶದ ಕಂಪನಿ ಎಂದು ತಿಳಿದು ಬಂದಿದೆ.

Image

ವಾಸ್ತವವಾಗಿ ಹಬ್ ಪವರ್ ಕಂಪನಿಯ ಮೂಲ ಭಾರತ ಅದರ ಕೇಂದ್ರ ಕಚೇರಿ ದೆಹಲಿಯಲ್ಲಿದೆ. ಈ ಕಂಪನಿಗೂ ಪಾಕಿಸ್ತಾನಕ್ಕೂ ಯಾವುದೇ ಸಂಬಂಧವಿಲ್ಲ. ಈ ಕಂಪನಿಯು ಜಿಎಸ್‌ಟಿ ಪೋರ್ಟಲ್‌ನಲ್ಲಿ ನೋಂದಾಯಿಸಲ್ಪಟ್ಟಿದೆ.

Image

Image

“ಹಬ್ ಪವರ್ ಕಂಪನಿ” ಹೆಸರಿನ ಕಂಪನಿಗೆ ಸಂಬಂಧಿಸಿದಂತೆ ಟ್ವಿಟರ್‌ನಲ್ಲಿ ಸುಳ್ಳು ಸುದ್ದಿ ಹರಡಲಾಗುತ್ತಿದೆ. ವಾಸ್ತವವಾಗಿ ಕಂಪನಿಯು ಭಾರತದ್ದಾಗಿದೆ. ಭಾರತೀಯ ಪ್ರಜೆ ಅಥವಾ ಭಾರತ ಮೂಲದ ಸಂಸ್ಥೆಗಳು ಮಾತ್ರ ಚುನಾವಣಾ ಬಾಂಡ್‌ಗಳನ್ನು ಖರೀದಿಸಲು ಅರ್ಹರಾಗಿರುತ್ತಾರೆ.

Image

ಒಟ್ಟಾರೆಯಾಗಿ ಹೇಳುವುದಾದರೆ, ‘ಹಬ್ ಪವರ್ ಕಂಪನಿ’ ಬಿಜೆಪಿ ಯಿಂದ ಚುನಾವಣಾ ಬಾಂಡ್ ಅನ್ನು ಖರೀದಿ ಮಾಡಿರುವುದು ನಿಜ, ಆದರೆ ಅದು ಪಾಕಿಸ್ತಾನ ಮೂಲದಲ್ಲ, ಅದು ಭಾರತದ ದೆಹಲಿಯಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ :  FACT CHECK | ಕನ್ನಡಿಗರಿಗೆ ಕುಡಿಯಲು ನೀರಿಲ್ಲದಿದ್ದರೂ ರಾಜ್ಯ ಸರ್ಕಾರ ತಮಿಳುನಾಡಿಗೆ ಕದ್ದು ಮುಚ್ಚಿ ಕಾವೇರಿ ನೀರು ಹರಿಸಿದೆಯೇ? ಈ ಸ್ಟೋರಿ ಓದಿ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights