FACT CHECK | ಸಂವಿಧಾನದಲ್ಲಿ ಎಷ್ಟು ಫೇಜುಗಳಿವೆ ನಿನಗೆ ಗೊತ್ತಾ ಎಂದು BJP ಸಂಸದ ರಾಹುಲ್ ಗಾಂಧಿಯನ್ನು ಪ್ರಶ್ನಿಸಿದ್ದು ನಿಜವೇ?

ಸಂವಿಧಾನದಲ್ಲಿ ಎಷ್ಟು ಫೇಜುಗಳಿವೆ ನಿನಗೆ ಗೊತ್ತಾ? ಅರೆ ನೀನು ಓದೋದೇ ಇಲ್ಲ. ಇಲ್ಲಿ ಬಂದು ಅಲ್ಲಾಡಿಸುತ್ತೀಯಾ. ಸಂವಿಧಾನಕ್ಕೆ ಬೀಗ ಜಡಿದು ತುರ್ತು ಪರಿಸ್ಥಿತಿ ಹೇರಿದ್ದು ನಿನ್ನ ಅಜ್ಜಿ ಅಲ್ಲವೇ?  ಎಂದು ಲೋಕಸಭೆಯ ಅಧಿವೇಶನದಲ್ಲಿ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರು ಕಾಂಗ್ರೆಸ್ ಸಂಸದ, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿಯನ್ನು ಅಣಕಿಸಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ಪ್ರಸಾರವಾಗುತ್ತಿದೆ.

Fact Check: 'ಸಂವಿಧಾನದಲ್ಲಿ ಎಷ್ಟು ಪುಟಗಳಿವೆ?' ಸಂಸದ ಅನುರಾಗ್ ಠಾಕೂರ್ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ ಎಂದಿದ್ದು ತಿರುಚಿದ ವೀಡಿಯೋ

ಇದರೊಂದಿಗೆ ಹಂಚಿಕೊಳ್ಳಲಾದ ವೀಡಿಯೋದಲ್ಲಿ ಅನುರಾಗ್‌ ಠಾಕೂರ್ ಅವರು  “ಸಂವಿಧಾನದಲ್ಲಿ ಎಷ್ಟು ಪುಟಗಳಿವೆ? ಎಷ್ಟು? ಇದು ‘ಇದು’ (ತನ್ನ ಬೆರಳುಗಳಿಂದ ಸನ್ನೆ ಮಾಡಿ) ಇಷ್ಟಿದೆ ಎಂದು ಹೇಳಬೇಡಿ” ಎಂದು ಉದ್ದೇಶಪೂರ್ವಕವಾಗಿ ಗಾಂಧಿಯನ್ನು ಕೇಳುತ್ತಾರೆ, ಈ ಮೂಲಕ ಅವರನ್ನು ಮಾತಿನಲ್ಲಿ ಕಟ್ಟಿಹಾಕುತ್ತಾರೆ. “ಎಷ್ಟು ಪುಟಗಳಿವೆ ಎಂದು ಹೇಳಿ? ನೀವು ಪ್ರತಿದಿನ ಅದರೊಂದಿಗೆ ತಿರುಗಾಡುತ್ತಿದ್ದೀರಿ. ಒಮ್ಮೆಯೂ ಓದುವ ಮನಸ್ಸಾಗಲಿಲ್ಲವೇ? ನೀವು ಓದುವುದಿಲ್ಲ, ಜೇಬಿನಿಂದ ತೆಗೆದು ನೋಡಿ” ಎಂದು ಹೇಳಿದ್ದಾರೆ ಎಂದು ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ವ್ಯಾಪಕವಾಗಿ ಹಂಚಿಕೊಂಡಿದ್ದಾರೆ.

Fact Check: 'ಸಂವಿಧಾನದಲ್ಲಿ ಎಷ್ಟು ಪುಟಗಳಿವೆ?' ಸಂಸದ ಅನುರಾಗ್ ಠಾಕೂರ್ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ ಎಂದಿದ್ದು ತಿರುಚಿದ ವೀಡಿಯೋ

ಇದೇ ರೀತಿಯ ಹೇಳಿಕೆಗಳು ಇಲ್ಲಿಇಲ್ಲಿ ಕಂಡುಬಂದಿದೆ.

Fact Check: 'ಸಂವಿಧಾನದಲ್ಲಿ ಎಷ್ಟು ಪುಟಗಳಿವೆ?' ಸಂಸದ ಅನುರಾಗ್ ಠಾಕೂರ್ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ ಎಂದಿದ್ದು ತಿರುಚಿದ ವೀಡಿಯೋ

ಈ ವಿಡಿಯೋದಲ್ಲಿ ಕೂಡ ಅನುರಾಗ್‌ ಠಾಕೂರ್‌ ಅವರು ಸಂವಿಧಾನ ಗ್ರಂಥದ ಪುಟಗಳ ಬಗ್ಗೆ ಲೆಕ್ಕ ಕೇಳಿದಾಗ ಅದಕ್ಕೆ ಉತ್ತರ ಕೊಡದೆ ರಾಹುಲ್‌ ಗಾಂಧಿ ಅವರು ಕೆಲ ಸೆಕೆಂಡ್‌ಗಳ ಕಾಲ ಸುಮ್ಮನಿರುವುದನ್ನು ಕಾಣಬಹುದಾಗಿದೆ. ಬಳಿಕ ರಾಹುಲ್, ಅನುರಾಗ್‌ ಠಾಕೂರ್‌ ಅವರ ವಿರುದ್ಧ ಕಿಡಿ ಕಾರುವಂತೆ ವಿಡಿಯೋ ಕಂಡು ಬಂದಿದೆ. ಆದರೆ ಈ ವಿಡಿಯೋ ಹಲವು ಅನುಮಾನಗಳನ್ನು ಹುಟು ಹಾಕಿದ್ದು, ಈ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್  ಸರ್ಚ್ ಮಾಡಿದಾಗ, 1 ಜುಲೈ, 2024 ರ  ಎಎನ್‌ಐ ವರದಿ ಲಭ್ಯವಾಗಿದೆ. ಇದರಲ್ಲಿ “ಸಂವಿಧಾನದಲ್ಲಿ ಎಷ್ಟು ಪುಟಗಳಿವೆ?” ಅನುರಾಗ್ ಠಾಕೂರ್ ಇಂಡಿಯಾ ಒಕ್ಕೂಟದ ಸಂಸದರನ್ನು ಪ್ರಶ್ನಿಸಿದ್ದಾರೆ ಎಂದಿದೆ. ಅಂದರೆ ವೈರಲ್ ಪೋಸ್ಟ್‌ನಲ್ಲಿ ಹೇಳಿಕೊಂಡಿರುವಂತೆ ಅನುರಾಗ್ ಠಾಕೂರ್ ರಾಹುಲ್ ಗಾಂಧಿಯನ್ನು ಪ್ರಶ್ನಿಸಿದ್ದಾರೆ ಎಂಬುದು ಸುಳ್ಳು.

 ಎಎನ್‌ಐ ವರದಿ
ಎಎನ್‌ಐ ವರದಿ

“ಭಾರತೀಯ ಸಂವಿಧಾನದಲ್ಲಿ ಎಷ್ಟು ಪುಟಗಳಿವೆ ಎಂದು ಕೇಳುವ ಅವರು ಅದನ್ನು ಓದಲು ಸಹ ತಲೆಕೆಡಿಸಿಕೊಳ್ಳುವುದಿಲ್ಲ ಆದರೆ ಅದನ್ನು ಹಿಡಿದುಕೊಂಡು ಅಲೆಯುತ್ತಾರೆ ಎಂದು ಮಾಜಿ ಕೇಂದ್ರ ಸಚಿವ ಮತ್ತು ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರು ವಿರೋಧ ಪಕ್ಷದ ಸಂಸದರಿಗೆ ಸವಾಲು ಎಸೆದರು,” ಎಂದು ವರದಿಯಲ್ಲಿದೆ. ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಹಮೀರ್‌ಪುರ ಸಂಸದರು ಭಾಷಣದ ವೇಳೆ ಹೀಗೆ ಹೇಳಿದರು ಎಂದಿದೆ. ಆದರೆ  ಠಾಕೂರ್ ನೇರವಾಗಿ ಗಾಂಧಿಯವರ ಮೇಲೆ ಈ ಪ್ರಶ್ನೆಯನ್ನು ಕೇಳಿದ್ದಾರೆ ಎಂದು ವರದಿಯಲ್ಲಿಲ್ಲ ಎನ್ನುವುದನ್ನು ಗಮನಿಸಬೇಕು.

2 ಜುಲೈ , 2024 ರ ಇದೇ ರೀತಿಯ ಟೈಮ್ಸ್ ಆಫ್‌ ಇಂಡಿಯಾ  ವರದಿಯನ್ನು ಇಲ್ಲಿ ನೋಡಬಹುದು , ಠಾಕೂರ್ ಅವರು ವಿರೋಧ ಪಕ್ಷದ ಸಂಸದರಿಗೆ ಪ್ರಶ್ನೆಯನ್ನು ಹಾಕಿದ್ದಾರೆ ಎಂದು ಇದರಲ್ಲಿದೆ. ಠಾಕೂರ್ ಅವರು ಟೀಕಿಸಿದಾಗ, ರಾಹುಲ್‌ ಗಾಂಧಿಯವರು ಸದನದಲ್ಲಿರಲಿಲ್ಲ ಎಂದು ಇದರಲ್ಲಿದೆ.

ಹೆಚ್ಚಿನ ಕೀವರ್ಡ್ ಸರ್ಚ್ ವೇಳೆ 1 ಜುಲೈ , 2024 ರ ಸಂಸತ್ತಿನ ಯುಟ್ಯೂಬ್ ಚಾನೆಲ್ ಸಂಸದ್‌ ಟಿವಿ ಯಲ್ಲಿ ಈ ವೀಡಿಯೋ  ಲಭ್ಯವಾಗಿದೆ. “ಅನುರಾಗ್ ಠಾಕೂರ್ ಅವರ ಹೇಳಿಕೆಗಳು, 18ನೇ ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ” ಎಂದಿದೆ. ವೈರಲ್ ಆಗಿರುವ ಭಾಷಣದ ದೃಶ್ಯವನ್ನು  56:35 ಟೈಮ್‌ ಲೈನ್‌ನಲ್ಲಿ ನೋಡಬಹುದು, ಅಲ್ಲಿ ಠಾಕೂರ್‌ರ ಭಾಷಣದ ಸಂದರ್ಭದ ವೇಳೆ ಕ್ಯಾಮೆರಾಗಳು ರಾಹುಲ್‌ ಗಾಂಧಿಯವರನ್ನು ಕೇಂದ್ರೀಕರಿಸುವುದಿಲ್ಲ ಎಂದು ಸ್ಪಷ್ಟವಾಗಿ ಗಮನಿಸಬಹುದು. ಮತ್ತು ವೈರಲ್‌ ವಿಡಿಯೋಗೆ ಹೋಲಿಸಿದಾಗ ಮೂಲ ವಿಡಿಯೋ ಭಿನ್ನವಾಗಿದೆ.

ಸಂಸದ್ ಟಿವಿ ವೀಡಿಯೋ
ಸಂಸದ್ ಟಿವಿ ವೀಡಿಯೋ

ಅದೇ ರೀತಿ ಠಾಕೂರ್ ಭಾಷಣದ ಟೈಮ್ಸ್ ನೌ ವರದಿಯನ್ನು ಇಲ್ಲಿ ನೋಡಬಹುದು. ಠಾಕೂರ್ ಅವರು ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರನ್ನು ಉಲ್ಲೇಖಿಸಿದ್ದನ್ನು ನಾವು ನೋಡಿದ್ದೇವೆ, ಇದನ್ನು 57:54 ರ ಸಮಯದಿಂದ ನೋಡಬಹುದು.

ತುರ್ತು ಪರಿಸ್ಥಿತಿಗೆ ಸಂಬಂಧಿಸಿ ಕಲ್ಯಾಣ್‌ ಬ್ಯಾನರ್ಜಿಯವರ ಮೇಲೆ ಠಾಕೂರ್ ಅವರ ವಾಗ್ದಾಳಿಯ ಕುರಿತು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಆದರೆ ಈ ವೀಡಿಯೋವನ್ನು ರಾಹುಲ್‌ ಗಾಂಧಿಯವರ ವಿರುದ್ಧವಾಗಿ ಹೇಳಲಾಗಿದೆ ಎಂಬಂತೆ ಎಡಿಟ್ ಮಾಡಿ ಹಂಚಿಕೊಂಡಿರುವುದನ್ನು ಇದು ಖಚಿತಪಡಿಸುತ್ತದೆ.

ಔಟ್ ಲುಕ್‌ ವರದಿ
ಔಟ್ ಲುಕ್‌ ವರದಿ

ಇದರೊಂದಿಗೆ ಜುಲೈ 3, 2024 ರ  ಔಟ್‌ಲುಕ್ ವರದಿಯಲ್ಲಿ ಅನುರಾಗ್ ಠಾಕೂರ್ ಅವರ ಟೀಕೆಗಳ ಕುರಿತ ತಿರುಚಲಾದ ಕ್ಲಿಪ್ ಗಳಲ್ಲಿ, ರಾಹುಲ್ ಅವರು ಪ್ರಶ್ನೆಗೆ ಉತ್ತರಿಸಲು ವಿಫಲರಾಗಿದ್ದಾರೆ ಎಂದು ಹೇಳುವಂತಿದೆ. ಆದರೆ ಅನುರಾಗ್‌ ಠಾಕೂರ್ ಭಾಷಣದ ವೇಳೆ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಸದನದಲ್ಲಿ ಇರಲಿಲ್ಲ ಎಂದು ವರದಿ ಉಲ್ಲೇಖಿಸಲಾಗಿದೆ.

ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರು ಲೋಕಸಭೆಯ ಅಧಿವೇಶನದ ವೇಳೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನು ಮಾತಿನಲ್ಲಿ ಕಟ್ಟಿ ಹಾಕಿದ್ದು, ಸಂವಿಧಾನದಲ್ಲಿ ಎಷ್ಟು ಪುಟಗಳಿವೆ ಎಂದು ನಿಮಗೆ ತಿಳಿದಿದೆಯೇ ಎಂದು ಲೇವಡಿ ಮಾಡಿದ್ದಾರೆ ಎಂದು ಎಡಿಟ್ ಮಾಡಿದ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ತಿರುಪತಿ ದೇವಸ್ಥಾನದ ವಿಶೇಷ ದರ್ಶನದ ಟಿಕೆಟ್ ಬೆಲೆಗಳನ್ನು ಇಳಿಸಲಾಗಿದೆ ಎಂಬುದು ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights