Fact Check: ಲಡಾಖ್ ಘರ್ಷಣೆ ಎಂದು ಜಂಟಿ ಮಿಲಿಟರಿ ವ್ಯಾಯಾಮದ ಹಳೆಯ ಚಿತ್ರ ವೈರಲ್!

ಲಡಾಖ್‌ನಲ್ಲಿ ಫಾರ್ವರ್ಡ್ ಪೋಸ್ಟ್ ಅನ್ನು ವಶಪಡಿಸಿಕೊಳ್ಳಲು ಚೀನಾದ ಸೈನ್ಯದ ಮತ್ತೊಂದು ಪ್ರಯತ್ನವನ್ನು ಭಾರತೀಯ ಸೇನೆಯು ವಿಫಲಗೊಳಿಸಿದ್ದರಿಂದ ವಾಸ್ತವಿಕ ನಿಯಂತ್ರಣದ ರೇಖೆಯಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಇದರ ನಂತರ ಎರಡೂ ಕಡೆಯವರು ಹೇಳಿಕೊಂಡಂತೆ ಗುಂಡಿನ ದಾಳಿ ನಡೆದಿದೆ.

ಆದರೆ ಈ ಸಂದರ್ಭದವನ್ನು ಫೇಸ್‌ಬುಕ್‌ನಲ್ಲಿ ಕೆಲವು ಬಳಕೆದಾರರು ಕೆಲ ಚಿತ್ರಗಳನ್ನು ಶೇರ್ ಮಾಡುವ ಮೂಲಕ  ‘ಇದು ಪೂರ್ವ ಲಡಾಖ್‌ನಲ್ಲಿನ ಘರ್ಷಣೆಯ ದೃಶ್ಯವಾಗಿದೆ’ ಎನ್ನುತ್ತಿದ್ದಾರೆ.

ಇಂಡಿಯಾ ಟುಡೆ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ (ಎಎಫ್‌ಡಬ್ಲ್ಯೂಎ) ಇದು 2016 ರಲ್ಲಿ ಲಡಾಖ್‌ನಲ್ಲಿ ಎರಡೂ ಕಡೆಯ ಚೀನಾ-ಭಾರತೀಯ ಸೈನಿಕರು ನಡೆಸಿದ ವಿಪತ್ತು ಪರಿಹಾರ ವ್ಯಾಯಾಮದ ಚಿತ್ರ ಎಂದು ಕಂಡುಹಿಡಿದಿದೆ. ಅನೇಕ ಫೇಸ್‌ಬುಕ್ ಬಳಕೆದಾರರು ಇತ್ತೀಚಿನ ಘರ್ಷಣೆಗಳ ಚಿತ್ರವೆಂದು ಇದನ್ನು ಹಂಚಿಕೊಂಡಿದ್ದಾರೆ.

ಎಎಫ್‌ಡಬ್ಲ್ಯೂಎ ತನಿಖೆ :-

ರಿವರ್ಸ್ ಇಮೇಜ್ ಹುಡುಕಾಟವನ್ನು ಬಳಸಿಕೊಂಡು, ಈ ಚಿತ್ರವನ್ನು 2016 ರ ಅಕ್ಟೋಬರ್ 20 ರಂದು ಭಾರತೀಯ ಸೇನೆಯ ಉತ್ತರ ಕಮಾಂಡ್ ಟ್ವೀಟ್ ಮಾಡಿದೆ ಎಂದು ಕಂಡುಕೊಳ್ಳಲಾಗಿದೆ. ಪೋಸ್ಟ್‌ನ ಶೀರ್ಷಿಕೆ, “ಜಂಟಿ ಚೀನಾ-ಭಾರತೀಯ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ವ್ಯಾಯಾಮ ಲಡಾಖ್ನಲ್ಲಿ ಸೈನಿಕರು ನಡೆಸಿದರು. ” ಎಂದು ಬರೆಯಲಾಗಿತ್ತು.

ಈ ಘಟನೆಯನ್ನು ಆ ಸಮಯದಲ್ಲಿ ಹಲವಾರು ಮಾಧ್ಯಮಗಳು ಸುದ್ದಿ ಮಾಡಿದವು.ಈ ಸುದ್ದಿ ವರದಿಗಳ ಪ್ರಕಾರ, ಭಾರತ ಮತ್ತು ಚೀನಾ ಜಮ್ಮು ಮತ್ತು ಕಾಶ್ಮೀರದ ಪೂರ್ವ ಲಡಾಖ್‌ನಲ್ಲಿ ಜಂಟಿ ಸೈನ್ಯದ ವ್ಯಾಯಾಮವನ್ನು ನಡೆಸಿವೆ ಎನ್ನುವುದಾಗಿತ್ತು. ಆದರೀಗ ಈ ಸುದ್ದಿ ಉಭಯ ದೇಶಗಳ ನಡುವೆ ತೀವ್ರವಾದ ರಾಜತಾಂತ್ರಿಕತೆಯ ಸಮಸ್ಯೆಗಳನ್ನು ಸೃಷ್ಟಿಮಾಡಿದೆ.

ಗಡಿ ರಕ್ಷಣಾ ಸಹಕಾರ ಒಪ್ಪಂದ 2013 ರ ಅಡಿಯಲ್ಲಿ ಭಾರತೀಯ ಮತ್ತು ಚೀನಾದ ಸೈನ್ಯಗಳು ಎರಡನೇ ಜಂಟಿ “ಚೀನಾ-ಭಾರತ ಸಹಕಾರ 2016” ವ್ಯಾಯಾಮವನ್ನು ನಡೆಸಿದವು. ಇದು ಫೆಬ್ರವರಿ 6, 2016 ರಂದು ನಡೆದ ಮೊದಲ ವ್ಯಾಯಾಮದ ಮುಂದುವರಿದ ಭಾಗವಾಗಿತ್ತು. ಭಾರತದ ಚುಶುಲ್ ಗ್ಯಾರಿಸನ್‌ನ ಸೈನಿಕರು ಮತ್ತು ಚೀನಾದ ಮೊಲ್ಡೊ ಗ್ಯಾರಿಸನ್ ಈ ವ್ಯಾಯಾಮದಲ್ಲಿ ಭಾಗವಹಿಸಿದ್ದರು.

ಆದ್ದರಿಂದ, ಲಡಾಖ್‌ನಲ್ಲಿ ಇತ್ತೀಚೆಗೆ ನಡೆದ ಭಾರತೀಯ ಮತ್ತು ಚೀನಾದ ಸೈನಿಕರ ನಡುವಿನ ಘರ್ಷಣೆಯಿಂದ ಈ ಚಿತ್ರ ಎಂದು ಹೇಳಿಕೊಳ್ಳುವ ವೈರಲ್ ಪೋಸ್ಟ್ ವಾಸ್ತವವಾಗಿ 2016 ರಲ್ಲಿ ಉಭಯ ದೇಶಗಳು ನಡೆಸಿದ ಜಂಟಿ ಮಿಲಿಟರಿ ವ್ಯಾಯಾಮದಿಂದ ಬಂದಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights