FACT CHECK | T20 ವಿಶ್ವಕಪ್ ಫೈನಲ್ ದಕ್ಷಿಣ ಆಫ್ರಿಕ ವಿರುದ್ದ ಭಾರತ ಗೆದ್ದದಕ್ಕೆ ಬಾಂಗ್ಲಾದೇಶದ ಅಭಿಮಾನಿಗಳು ನಿರಾಸೆಯಾಗಿದ್ದಾರೆ ಎಂಬ ವಿಡಿಯೋದ ಅಸಲೀಯತ್ತೇನು ಗೊತ್ತೇ?

ಭಾರತ ಮತ್ತು ಪಾಕಿಸ್ತಾನ, ಹಾಗೂ ಭಾರತ ಮತ್ತು ಬಾಂಗ್ಲಾದೇಶ ತಂಡಗಳ ನಡುವೆ ನಡೆಯುವ ಕ್ರಿಕೆಟ್‌ ಪಂದ್ಯಗಳನ್ನು, ಭಾರತದ ಮುಖ್ಯವಾಹಿನಿ ಮಾಧ್ಯಮಗಳು ಒಂದು ರೀತಿ ಯುದ್ದ ನಡೆಯುತ್ತಿದೆ ಎನ್ನುವ ರೇಂಜಿಗೆ ತೋರಿಸುತ್ತಿರುವುದರಿಂದ ಅಭಿಮಾನಿಗಳ ಮನಸ್ಥಿತಿಗಳು ಬದಲಾಗಿವೆ.ಕ್ರೀಡಾ ಸ್ಪೂರ್ತಿ ಮರೆತು ದ್ವೇಷ ಮೆರೆಯುವಂತಾಗಿದೆ. ಅಂತಹದ್ದೆ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.

“ಭಾರತ ವಿರುದ್ಧ ದಕ್ಷಿಣ ಆಫ್ರಿಕಾ T20 ವಿಶ್ವಕಪ್ ಫೈನಲ್ 2024 ರ ಅಂತಿಮ ಓವರ್‌ನಲ್ಲಿ ಸೂರ್ಯ ಕುಮಾರ್ ಯಾದವ್ ಅವರ ಕ್ಯಾಚ್‌ನಿಂದ ಬಾಂಗ್ಲಾದೇಶದ ಅಭಿಮಾನಿಗಳು ನಿರಾಶೆಗೊಂಡಿದ್ದಾರೆ. ಅದನ್ನು ನೀವು ಈ ವಿಡಿಯೋದಲ್ಲಿಯೇ ನೋಡಬಹುದು, ಬಾಂಗ್ಲದೇಶದ ಅಭಿಮಾನಿಗಳು ಭಾರತ ಕ್ರಿಕೆಟ್‌ ತಂಡ ಸೋಲನ್ನು ಹೇಗೆ ಸಂಭ್ರಮಿಸುತ್ತಾರೆ ಎಂಬುದನ್ನು ನೀವೇ ನೋಡಿ.” ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಟಿ-20 ವಿಶ್ವಕಪ್‌ ಫೈನಲ್‌ ಪಂದ್ಯ ನಡೆದಿರುವುದು ಭಾರತ ಮತ್ತು ದಕ್ಷಿಣ ಆಫ್ರಿಕಾದ ನಡುವೆ. ಇದರಲ್ಲಿ ಭಾರತ ಗೆದ್ದರೆ ಬಾಂಗ್ಲದೇಶಕ್ಕೆ ಯಾಕೆ ಬೇಸರ ಎಂಬ ಪ್ರಶ್ನೆಯನ್ನು ಹಲವರು ವ್ಯಕ್ತಪಡಿಸಿದ್ದಾರೆ. ಈ ದೃಶ್ಯಗಳಿಗೂ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆದ ಟಿ-20 ವಿಶ್ವಕಪ್‌ ಫೈನಲ್‌ ಪಂದ್ಯಕ್ಕೂ ಸಂಬಂಧವಿದೆಯೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ : 

ಭಾರತ ವಿರುದ್ಧ ದಕ್ಷಿಣ ಆಫ್ರಿಕಾ T20 ವಿಶ್ವಕಪ್ ಫೈನಲ್ 2024 ರ ಅಂತಿಮ ಓವರ್‌ನಲ್ಲಿ ಸೂರ್ಯ ಕುಮಾರ್ ಯಾದವ್ ಅವರ ಕ್ಯಾಚ್‌ನಿಂದ ಬಾಂಗ್ಲಾದೇಶದ ಅಭಿಮಾನಿಗಳು ನಿರಾಶೆಗೊಂಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗುತ್ತಿರುವ  ವಿಡಿಯೋವನ್ನು ಪರಿಶೀಲಿಸಲು, ವಿವಿಧ ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಸರ್ಚ್ ಮಾಡಿದಾಗ, ಇದು ಭಾರತ ಮತ್ತು ದಕ್ಷಿಣ ಆಫಿಕಾದ ಟಿ-20 ವಿಶ್ವಕಪ್‌ ಫೈನಲ್‌ ಪಂದ್ಯಾವಳಿಯ ದೃಶ್ಯ ಅಲ್ಲ, ಬದಲಿಗೆ T20 ವಿಶ್ವಕಪ್ 2024 ರ ಗುಂಪು ಹಂತದಲ್ಲಿ ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಆಟಗಾರನ ಕ್ಯಾಚ್ ವಿಡಿಯೋಗೆ ನೀಡಿದ ಪ್ರತಿಕ್ರಿಯೆ ಎಂಬ ಮಾಹಿತಿ ಲಭ್ಯವಾಗಿದೆ.

ವಾಸ್ತವವಾಗಿ ಈ ವಿಡಿಯೋವನ್ನು 17 ಜೂನ್ 2024 ರಿಂದು ಟ್ವಿಟ್ಟರ್ ಅಲ್ಲಿ ಪೋಸ್ಟ್ ಮಾಡಿ ಹಂಚಿಕೊಳ್ಳಲಾಗುತ್ತಿದೆ. ಇನ್ನು ಈ ದೃಷ್ಯ ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ಪಂದ್ಯದ ಸಮಯದಲ್ಲಿ, ಬಾಂಗ್ಲಾದೇಶದ ಆಟಗಾರ ಮಹಮ್ಮದುಲ್ಲಾ ಔಟ್‌ ಆದ ಕಾರಣ ಪ್ರೇಕ್ಷಕರಿಗೆ ನಿರಾಶೆಯಾದಾಗ ಸೆರೆ ಹಿಡಿಯಲಾಗಿದೆ ಎಂಬ ಮತ್ತೊಂದು ಮಾಹಿತಿ ಲಭ್ಯವಾಗಿದೆ.

ವಾಸ್ತವವಾಗಿ ಈ ವೀಡಿಯೊ ಯಾವ ಪಂದ್ಯಕ್ಕೆ ಸಂಬಂಧಿಸಿದೆ ಅಥವಾ ವ್ಯಕ್ತಿಗಳು ಬಾಂಗ್ಲಾದೇಶದವರೇ ಎಂಬುದನ್ನು ನಾವು ಖಚಿತಪಡಿಸಲು ಹಲವು ಬಾರಿ ಪರಿಶೀಲನೆ ನಡೆಸಿದಾಗಲೂ ಈ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ, ಇನ್ನು ಇಂಟರ್ನೆಟ್‌ನಲ್ಲಿರುವ ಈ ವೀಡಿಯೊದ ಇತ್ತೀಚಿನ T20 ವಿಶ್ವಕಪ್ 2024 ರ ಭಾರತ ಮತ್ತು ದಕ್ಷಿಣ ಆಫ್ರಿಕಾದ ಫೈನಲ್ ಪಂದ್ಯಕ್ಕೆ ಸಂಬಂಧಿಸಿಲ್ಲ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 11 ಜೂನ್ 2024ರ ಹಳೆಯ ವಿಡಿಯೋವನ್ನು ಹಂಚಿಕೊಂಡು, 2024 ರ T20 ವಿಶ್ವಕಪ್ ಫೈನಲ್‌ನಲ್ಲಿ ಭಾರತದ ಗೆಲುವಿನ ಬಗ್ಗೆ ಬಾಂಗ್ಲಾದೇಶದ ಅಭಿಮಾನಿಗಳ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಸುಳ್ಳು ಮತ್ತು ಕೋಮು ಹಿನ್ನಲೆಯಲ್ಲಿ ವಿಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾದ ಫೈನಲ್ ಪಂದ್ಯಕ್ಕೂ ಈ ವೈರಲ್ ದೃಶ್ಯಕ್ಕೂ ಸಂಬಂಧವಿಲ್ಲ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಸಂವಿಧಾನದಲ್ಲಿ ಎಷ್ಟು ಫೇಜುಗಳಿವೆ ನಿನಗೆ ಗೊತ್ತಾ ಎಂದು BJP ಸಂಸದ ರಾಹುಲ್ ಗಾಂಧಿಯನ್ನು ಪ್ರಶ್ನಿಸಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights