FACT CHECK | ರೈಲಿನ ಶಿಳ್ಳೆಯಿಂದ ನಮಾಜ್‌ಗೆ ತೊಂದರೆಯಾಗುತ್ತಿದೆ ಎಂದು ರೈಲು ನಿಲ್ದಾಣವನ್ನೇ ಮುಸ್ಲಿಮರು ಧ್ವಂಸಗೊಳಿಸಿದರೇ?

*ರೈಲಿನ ಶಿಳ್ಳೆ ಶಬ್ದ ತಮ್ಮ ನಮಾಜ್‌ಗೆ ಭಂಗ* ತರುತ್ತಿದೆಯೊಂದು ಆಕ್ರೋಶಗೊಂಡು, ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ ರೈಲು ನಿಲ್ದಾಣವನ್ನು ಧ್ವಂಸಗೊಳಿಸುತ್ತಿರುವ ದೃಶ್ಯ. ಅವನ್ಯಾವನೋ *ಹಿಂದುಗಳು ಹಿಂಸಾಚಾರಿಗಳು* ಅಂತ ಬೋಗಳುತ್ತಿದ್ದ… ಅಂತವನಿಗೆ ಲಕ್ಷಾಂತರ ಘಟನೆಗಳ ನಡುವೆ ಈ ಘಟನೆಯೂ ಸಮರ್ಪಣೆ. ಭಾರತದ ಭವಿಷ್ಯ ನಮ್ಮ ಕಣ್ಣ ಮುಂದೆ ಕಾಣುತ್ತಿದೆ. ಇವರಿಗೆ ರೈಲಿನ ಶಿಳ್ಳೆ ಶಬ್ದ ಇಷ್ಟು ಕೋಪ ಬಂದ್ರೇ ನಾವು ಡೈಲಿ ನೋಮಾಜ್ ಮಾಡುವ ಶಬ್ದ ಏಗಿರುತ್ತೆ. ನಾವು ಏನು ಮಾಡಬೇಕು? ಎಂಬ ಪ್ರತಿಪಾದನೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ರೈಲಿನ ಹಾರ್ನ್‌ನಿಂದ ನಮಾಝ್‌ಗೆ ಅಡ್ಡಿಯಾಗುತ್ತಿದೆ ಎಂದು ಪಶ್ಚಿಮ ಬಂಗಾಳದ ಮುರ್ಶಿದಾಬಾದ್‌ನ ಮಹಿಶಾಸುರ ರೈಲು ನಿಲ್ದಾಣವನ್ನು ಜನರು ಧ್ವಂಸಗೊಳಿಸಿದ್ದಾರೆ ಎಂದು ಆರೋಪಿಸಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ.

ಇದೇ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

Fact Check: ರೈಲಿನ ಶಿಳ್ಳೆಯಿಂದ ನಮಾಜ್‌ಗೆ ಭಂಗ ಎಂಬ ಕಾರಣಕ್ಕೆ ಮುಸ್ಲಿಮರು ರೈಲು ನಿಲ್ದಾಣ ಪುಡಿಗಟ್ಟಿದರೇ, ನಿಜ ಏನು? Fact Check: ರೈಲಿನ ಶಿಳ್ಳೆಯಿಂದ ನಮಾಜ್‌ಗೆ ಭಂಗ ಎಂಬ ಕಾರಣಕ್ಕೆ ಮುಸ್ಲಿಮರು ರೈಲು ನಿಲ್ದಾಣ ಪುಡಿಗಟ್ಟಿದರೇ, ನಿಜ ಏನು?

ಹಾಗಿದ್ದರೆ ನಿಜವಾಗಿಯೂ ಮುಸ್ಲಿಮರು ತಮ್ಮ ಸಮಾಜ್‌ಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ರೈಲು ನಿಲ್ದಾಣವನ್ನು ದ್ವಂಸ ಮಾಡಿದ್ದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 16 ಡಿಸೆಂಬರ್ 2019ರಂದು   ಫೇಸ್ಬುಕ್‌ ನಲ್ಲಿರುವ ಫ್ರಾಂಕ್ಲಿ ಸ್ಪೀಕ್‌ ಎಂಬ ಬಳಕೆದಾರರು  ಅಪ್‌ಲೋಡ್‌ ಮಾಡಿದ ವಿಡಿಯೋಲಭ್ಯವಾಗಿದೆ.  ಜೊತೆಗೆ ಸಿಎಎ ವಿರುದ್ಧ ಪ್ರತಿಭಟನೆ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿರುವುದನ್ನು ನೋಡಬಹುದು.

ಇದರ ಆಧಾರದಲ್ಲಿ ನಾವು ಇನ್ನಷ್ಟು ಶೋಧ ನಡೆಸಿದ್ದು, ಎಕ್ಸ್ ನಲ್ಲಿ ಅಭಿಜಿತ್ ಮಜುಂದಾರ್ ಎಂಬ ಎಕ್ಸ್ ಖಾತೆಯಿಂದ ಡಿಸೆಂಬರ್ 15, 2019ರಂದು ಮಾಡಿದ ಪೋಸ್ಟ್ ಲಭ್ಯವಾಗಿದೆ.

ಇದೇ ವಿಡಿಯೋ ಈ ಹಿಂದೆ ಬೇರೆ ಬೇರೆ ಬರಹಗಳೊಂದಿಗೆ ವೈರಲ್ ಆಗಿತ್ತು. ಆಗ ಕೆಲ ಮಾಧ್ಯಮಗಳು ಫ್ಯಾಕ್ಟ್‌ಚೆಕ್ ಮಾಡಿ ಸತ್ಯಾಸತ್ಯೆ ತಿಳಿಸಿತ್ತು.ದಿ ಕ್ವಿಂಟ್ 29 ಏಪ್ರಿಲ್ 2022ರಂದು ನಡೆಸಿದ ಫ್ಯಾಕ್ಟ್‌ಚೆಕ್ ಸುದ್ದಿಯ ಲಿಂಕ್ ಇಲ್ಲಿದೆ

14 ಡಿಸೆಂಬರ್, 2019ರ ಎಮ್‌ಡಿ ಇಜಾಜ್ ಅಹ್ಮದ್‌ ಯೂಟ್ಯೂಬ್‌ ವೀಡಿಯೋದಲ್ಲಿ, ಸಿಎಎ, ಎನ್ಆರ್‌ಸಿ ವಿರುದ್ಧ ಸಾಗರ್ದಿಗಿಯಲ್ಲಿರುವ ನಯೋಪಾರಾ ಮಹಿಷಾಸುರ ರೈಲ್ವೇ ನಿಲ್ದಾಣದಲ್ಲಿ ಪ್ರತಿಭಟನೆ ಎಂದು (ಹಿಂದಿಯಲ್ಲಿ) ಬರೆದಿರುವುದನ್ನು ನೋಡಬಹುದು.

 

ವಿಡಿಯೋದ ಕುರಿತು ಇನ್ನಷ್ಟು ಖಚಿತಪಡಿಸಿಕೊಳ್ಳಲು ನಾವು ಫೋಟೋ ಮತ್ತು ಕೀ ವರ್ಡ್‌ ಬಳಸಿ ಗೂಗಲ್‌ನಲ್ಲಿ ಮಾಹಿತಿ ಹುಡುಕಿದ್ದೇವೆ. ಈ ವೇಳೆ 16 ಡಿಸೆಂಬರ್ 2019ರಲ್ಲಿ ಹಾಕಲಾದ ಫೇಸ್‌ಬುಕ್‌ ಪೋಸ್ಟ್‌ ಒಂದು ಲಭ್ಯವಾಗಿದೆ. ಆ ಪೋಸ್ಟ್‌ನಲ್ಲಿರುವ ವಿಡಿಯೋ ಮತ್ತು ವೈರಲ್ ವಿಡಿಯೋ ಒಂದೇ ಎಂಬುವುದನ್ನು ಗಮನಿಸಬಹುದು. ಪೋಸ್ಟ್‌ನಲ್ಲಿ ನವೋಪಾರ ರೈಲು ನಿಲ್ದಾಣದ ದೃಶ್ಯ ಎಂದು ಬರೆಯಲಾಗಿದೆ. ನವೋಪಾರದ ರೈಲು ನಿಲ್ದಾಣದ ಹೆಸರು ಮಹಿಶಾಸುರ ಎಂದಾಗಿದೆ.

ಡಿಸೆಂಬರ್ 14, 2019ರಂದು ಮತ್ತೊಬ್ಬರು ಫೇಸ್‌ಬುಕ್ ಬಳಕೆದಾರರು ಕೂಡ ವೈರಲ್ ವಿಡಿಯೋವನ್ನು ಹಂಚಿಕೊಂಡಿದ್ದರು. ಈ ಪೋಸ್ಟ್‌ನಲ್ಲಿಯೂ ನವೋಪಾರ ರೈಲ್ವೆ ನಿಲ್ದಾಣದ ದೃಶ್ಯ ಎಂದು ಉಲ್ಲೇಖಿಸಲಾಗಿದೆ. ಪೋಸ್ಟ್‌ನ ಕೊನೆಯಲ್ಲಿ CAB (Citizenship Amendment Bill) ಎಂದು ಹ್ಯಾಷ್‌ಟ್ಯಾಗ್ ಕೊಟ್ಟಿರುವುದು ಅದು ಸಿಎಎ ಪ್ರತಿಭಟನೆಯ ಸಂದರ್ಭದ ವಿಡಿಯೋವೊ ಎಂಬುವುದನ್ನು ಹೇಳುತ್ತದೆ.

ವೈರಲ್ ಆಗಿರುವ ವಿಡಿಯೋ ಮತ್ತು ಮುರ್ಶಿದಾಬಾದ್‌ನ ನವೋಪಾರ ಮಹಿಶಾಸುರ ರೈಲ್ವೆ ನಿಲ್ದಾಣವನ್ನು ಸಿಎಎ ಪ್ರತಿಭಟನಾಕಾರರು ಧ್ವಂಸಗೊಳಿಸಿದ ಹಳೆಯ ವಿಡಿಯೊದಲ್ಲಿನ ಕೆಲವು ಸಾಮ್ಯತೆಗಳನ್ನು ನೋಡಬಹುದು.

People vandalised the Naopara Mahishasura railway station during anti-CAA protests in 2019.

15 ಡಿಸೆಂಬರ್ 2019 ರಂದು ಬೆಂಗಾಲಿ ನ್ಯೂಸ್ ಪೋರ್ಟಲ್ ‘ಬರ್ತಮನ್ ಪತ್ರಿಕಾ‘ದಲ್ಲಿ ಸಿಎಎ ಪ್ರತಿಭಟನಾಕಾರರು ರೈಲು ನಿಲ್ದಾಣಗಳ ಮೇಲೆ ದಾಳಿ ನಡೆಸಿರುವ ಕುರಿತು ವರದಿ ಪ್ರಕಟಿಸಿತ್ತು. ಆ ವರದಿಯಲ್ಲೂ ನವೋಪಾರಾ ಮಹಿಷಾಸುರ ನಿಲ್ದಾಣದ ಮೇಲಿನ ದಾಳಿಯ ಕುರಿತು ಉಲ್ಲೇಖಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಪಶ್ಚಿಮ ಬಂಗಾಳದ ನವೋಪಾರ ಮಹಿಶಾಸುರ ರೈಲ್ವೆ ನಿಲ್ದಾಣದ ಮೇಲೆ 2019ರ ಸಿಎಎ ವಿರೋಧಿ ಪ್ರತಿಭಟನೆ ನಡೆದ ದಾಳಿಯ ಹಳೆಯ ವಿಡಿಯೋವನ್ನು ರೈಲಿನ ಹಾರ್ನ್‌ನಿಂದ ನಮಾಝ್‌ಗೆ ಅಡ್ಡಿಯಾಗುತ್ತಿದೆ ಎಂದು ಪಶ್ಚಿಮ ಬಂಗಾಳದ ಮುರ್ಶಿದಾಬಾದ್‌ನ ಮಹಿಶಾಸುರ ರೈಲು ನಿಲ್ದಾಣವನ್ನು ಜನರು ಧ್ವಂಸಗೊಳಿಸಿದ್ದಾರೆ ಎಂದು ಸುಳ್ಳು ಮತ್ತು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಪಪ್ಪಾಯಿ, ಕಿವಿ ಹಣ್ಣು ಮತ್ತು ಡ್ರಾಗನ್ ಫ್ರೂಟ್‌ಗಳಿಂದ ಡೆಂಗ್ಯೂ ಗುಣಪಡಿಸಲು ಸಾಧ್ಯವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights