FACT CHECK | ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಅವರ ದಾಖಲೆಯನ್ನು ಮುರಿದರೆ ಪಾಕ್‌ನ ಅರ್ಷದ್ ನದೀಮ್
ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದು ವೈರಲ್ ಆಗುತ್ತಿದ್ದು, ಪಾಕಿಸ್ತಾನದ ಅಥ್ಲೀಟ್ ಅರ್ಷದ್ ನದೀಮ್ 90 ಮೀಟರ್ ಜಾವೆಲಿನ್ ಗುರಿಯನ್ನು ಬನ್ನಟ್ಟಿದ್ದಾರೆ. ನೀರಜ್ ಚೋಪ್ರಾ ಅವರ ದಾಖಲೆಯನ್ನು ಮೀರಿಸಿದ್ದಾರೆ, ನೀವು ಅವರಿಗೆ ನಿಮ್ಮ ಮೆಚ್ಚುಗೆಯನ್ನು ತೋರಿಸಲು ಬಯಸಿದರೆ, ಇದನ್ನು ರಿಟ್ವೀಟ್ ಮಾಡಿ.” ಎಂಬ ಪೋಸ್ಟ್‌ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
Pakistani athlete Arshad Nadeem broke the 90-meter javelin mark, surpassing Neeraj Chopra’s record, yet remains underappreciated.
“If you want to show your appreciation for him, retweet this.”#ArshadNadeem #Paris2024 #OlympicGames #Olympics… pic.twitter.com/7FgSKtm3mv
— Vinay (@kvinaykumar4200) August 2, 2024
ಪಾಕಿಸ್ತಾನದ ಅರ್ಷದ್ ನದೀಮ್ ಒಲಿಂಪಿಕ್ಸ್‌ನ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಗಳಲ್ಲಿ ಭಾರತದ ನೀರಜ್ ಚೋಪ್ರಾ ಅವರ ದಾಖಲೆಯನ್ನು ಮೀರಿಸುವ ಮೂಲಕ 90 ಮೀಟರ್ ಜಾವೆಲಿನ್ ಥ್ರೋನಲ್ಲಿ ದಾಖಲೆ ಮಾಡಿದ್ದಾರೆ ಎಂಬ ಪೋಸ್ಟ್‌ವೊಂದು ವೈರಲ್ ಆಗುತ್ತಿದೆ.
ಒಲಿಂಪಿಕ್ 2024 ಹ್ಯಾಶ್‌ಟ್ಯಾಗ್‌ಗಳೊಂದಿಗೆ ಇದೇ ರೀತಿಯ ಪೋಸ್ಟ್‌ಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಒಲಂಪಿಕ್ಸ್‌ನ ಜಾವಲಿನ್ ಥ್ರೋ ಸ್ಪರ್ಧೆಯು 6 ಆಗಸ್ಟ್ 2024 ರಂದು ನಡೆದಿದ್ದು, ಪ್ರಸ್ತುತ ನಡೆಯುತ್ತಿರುವ 2024ರ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಜಾವೆಲಿನ್ ಸ್ಟಾರ್ ನೀರಜ್ ಚೋಪ್ರಾ ಅವರು ಚಿನ್ನದ ಪದಕದ ಭರವಸೆ ಮೂಡಿಸಿದ್ದಾರೆ. ಮಂಗಳವಾರ ನಡೆದಿದ್ದ ಪುರುಷರ ಜಾವೆಲಿನ್ ಥ್ರೋ ಅರ್ಹತಾ ಸುತ್ತಿನ ಮೊದಲನೇ ಪ್ರಯತ್ನದಲ್ಲಿಯೇ ಚಿನ್ನದ ಹುಡುಗ ನೀರಜ್ ಚೋಪ್ರಾ ಯಶಸ್ವಿಯಾದರು. ಆ ಮೂಲಕ ಫೈನಲ್ ಸುತ್ತಿಗೆ ಅಧಿಕೃತವಾಗಿ ಅರ್ಹತೆ ಪಡೆದಿದ್ದಾರೆ. ಆದರೆ, ಭಾರತದ ಮತ್ತೊಬ್ಬ ಜಾವಿಲಿನ್ ಪಟು ಕಿಶೋರ್ ಜೆನ ಅವರು ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದ್ದಾರೆ ಎಂಬ ವರದಿಗಳು ಲಭ್ಯವಾಗಿವೆ.
ಮಂಗಳವಾರ 6 ಆಗಸ್ಟ್ 2024 ರಂದು ನಡೆದಿದ್ದ ಪುರುಷರ ಜಾವೆಲಿನ್ ಥ್ರೋ ‘ಬಿ’ ಗುಂಪಿನ ಅರ್ಹತಾ ಸುತ್ತಿಗೆ ಟೋಕಿಯೋ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ವಿಶ್ವಾಸದಿಂದ ಕಣಕ್ಕೆ ಇಳಿದರು. ಅವರು ತಮ್ಮ ಮೊದಲ ಪ್ರಯತ್ನದಲ್ಲಿ ಜಾವೆಲಿನ್ ಅನ್ನು ಬರೋಬ್ಬರಿ 89.34 ಮೀಟರ್ ಎಸೆಯುವ ಮೂಲಕ ದಾಖಲೆ ಬರೆದರು ಹಾಗೂ ಫೈನಲ್ ಸುತ್ತಿಗೆ ನೇರವಾಗಿ ಅರ್ಹತೆ ಪಡೆದರು. ನೀರಜ್ ಚೋಪ್ರಾ ಅವರ ಪ್ರದರ್ಶನವನ್ನು ಕಣ್ಣಾರೆ ಕಂಡ ಪ್ರೇಕ್ಷಕರು ಗ್ಯಾಲರಿಯಲ್ಲಿ ಎದ್ದು ನಿಂತು ಚಪ್ಪಾಳೆ ತಟ್ಟಿದರು.
What a superb performance from Arshad Nadeem!
He earns Pakistan their first track and field Gold after 60 years , setting precedence with a new Games record.
Congratulations @NOCPakistan #CommonwealthGames2022 | #B2022 pic.twitter.com/6H5YlKxeLg
— Commonwealth Sport (@thecgf) August 7, 2022
ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವಂತೆ ಪಾಕಿಸ್ತಾನದ ಅರ್ಷದ್ ನದೀಮ್ 90 ಮೀಟರ್ ಎಸೆಯುವ ಮೂಲಕ ನೀರಜ್ ಚೋಪ್ರಾ ಅವರ ದಾಖಲೆಯನ್ನು ಮುರಿದು ವಿಜೇತರಾಗಿದ್ದಾರೆ ಎಂದು ಹಂಚಿಕೊಳ್ಳಲಾದ ಪೋಸ್ಟ್‌ನ ವಿಡಿಯೋ 2022ರ ಕಾಮನ್‌ವೆಲ್ತ್ ಕ್ರಿಡಾ ಕೂಟದ ವಿಡಿಯೋ ಎಂಬ ಮಾಹಿತಿ ಲಭ್ಯವಾಗಿದೆ. 90 ಮೀಟರ್‌ಗಳಷ್ಟು ದೂರ ಎಸೆದ ಮೊದಲ ದಕ್ಷಿಣ ಏಷ್ಯಾದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದ ಅರ್ಷದ್ ನದೀಮ್ ಅವರು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಹೊಸ ದಾಖಲೆ ನಿರ್ಮಿಸಿದ್ದು, ಚಿನ್ನದ ಪದಕವನ್ನು ಖಚಿತಪಡಿಸಿದ್ದಾರೆ ಎಂದು ವರದಿ ದೃಢಪಡಿಸಿದೆ. ತೊಡೆಸಂದು ಗಾಯದಿಂದಾಗಿ ನೀರಜ್ ಚೋಪ್ರಾ ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, 2024 ರ ಒಲಿಂಪಿಕ್ಸ್‌ನಲ್ಲಿ ಭಾರತದ ನೀರಜ್ ಚೋಪ್ರಾ ಅವರ ದಾಖಲೆಯನ್ನು ಪಾಕಿಸ್ತಾನದ ಅರ್ಷದ್ ನದೀಮ್ ಮುರಿದಿದ್ದಾರೆ ಎಂಬ ಹೇಳಿಕೆಯು ತಪ್ಪುದಾರಿಗೆಳೆಯುವಂತಿದೆ. ನದೀಮ್ 90-ಮೀಟರ್ ಎಸೆತದಲ್ಲಿ ದಾಖಲೆ ಮಾಡಿದ್ದು 2022 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ 2024 ರ ಒಲಿಂಪಿಕ್ಸ್ ಅಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ‘ಸಾವಿನಲ್ಲೂ ತನ್ನ ಮಗುವನ್ನು ಒಂಟಿಯಾಗಲು ಬಿಡದೇ ಅಪ್ಪಿಕೊಂಡ ಅಮ್ಮ ! ಇದು ರಿಯಲ್ ಚಿತ್ರವೇ?