FACT CHECK | ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಪ್ರಧಾನಿ ಮೋದಿಯ ಆತಿಥ್ಯ ಎಂದು 2019ರ ಸಂಬಂಧವಿಲ್ಲದ ಫೋಟೊ ಹಂಚಿಕೆ

ರಾಜಕೀಯ ಅಸ್ಥಿರತೆ ಹಾಗೂ ಹಿಂಸಾತ್ಮಕ ಪ್ರತಿಭಟನೆ ಹಿನ್ನೆಲೆಯಲ್ಲಿ ಬಾಂಗ್ಲಾ ದೇಶದ ಪ್ರಧಾನ ಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಿದ ಶೇಖ್ ಹಸೀನಾ ಅವರಿಗೆ ಬಾಂಗ್ಲಾ ದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನುಸ್ ಖಡಕ್ ಎಚ್ಚರಿಕೆ ನೀಡಿದ್ಧಾರೆ. ಭಾರತದಲ್ಲಿ ಕುಳಿತು ಬಾಂಗ್ಲಾ ದೇಶದಲ್ಲಿನ ರಾಜಕೀಯದ ಕುರಿತಾಗಿ ಹೇಳಿಕೆ ನೀಡೋದು ‘ಸ್ನೇಹಪರವಲ್ಲದ ಸನ್ನೆ’ ಎಂದು ಹೇಳಿದ್ದಾರೆ. ಇದರ ಬೆನ್ನಲ್ಲೆ ಮಾಜಿ ಪ್ರಧಾನಿ ಶೇಖ್ ಹಸೀನಾ ಚಿತ್ರವೊಂದು ಸೋಶಿಯಲ್ ಮೀಡಿಯಾದಲ್ಲಿ ಪ್ರಸಾರವಾಗುತ್ತಿದೆ.

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಊಟ ಮಾಡುತ್ತಿರುವ ಚಿತ್ರವನ್ನು ಹಂಚಿಕೊಳ್ಳಲಾಗಿದ್ದು, ಇದು ಭಾರತದ ಇತ್ತೀಚಿನ ಚಿತ್ರ ಎಂದು ಹೇಳಿಕೊಳ್ಳಲಾಗಿದೆ.

“ನಮ್ಮ ಜನರು ಹಸಿವಿನಿಂದ ಸಾಯುತ್ತಿದ್ದಾರೆ ಆದರೆ ಮೋದಿ ಜೀ ಈ ಕಿಡಿಗೇಡಿಗೆ ಮಟನ್ ಕಬಾಬ್ ತಿನ್ನುತ್ತಿದ್ದಾರೆ. ನಾನು ಬಾಲ್ಯದ ಪ್ರೀತಿಯ ಬಗ್ಗೆ ಕೇಳಿದ್ದೆ, ಆದರೆ ಈ ವೃದ್ಧಾಪ್ಯದ ಪ್ರೀತಿ ದೇಶವನ್ನು ಮುಳುಗಿಸಬಹುದು” ಎಂಬ ಹೇಳಿಕೆಯೊಂದಿಗೆ ಎಕ್ಸ್‌ ಖಾತೆಯ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಚಿತ್ರ ಇತ್ತೀಚಿನದ್ದೆ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಊಟ ಮಾಡುತ್ತಿರುವ ಚಿತ್ರವನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 2019 ರಲ್ಲಿ ಕುಮುದಿನಿ ಕಾಂಪ್ಲೆಕ್ಸ್‌ನ ಭಾರತೇಶ್ವರಿ ಹೋಮ್ಸ್‌ನಲ್ಲಿ ಹುತಾತ್ಮ ದನ್ವೀರ್ ರಣದಪ್ರಸಾದ್ ಸಹಾ ಅವರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಸಿದಾಗಿನ ಚಿತ್ರ ಎಂಬ ಮಾಹಿತಿ ಲಭ್ಯವಾಗಿದೆ. ಸಮಾರಂಭದ ನಂತರ, ಕುಮುದಿನಿ ಕುಟುಂಬವು ಶೇಖ್ ಹಸೀನಾ ಅವರಿಗೆ ಬೆಂಗಾಲಿ ಶೈಲಿಯ ಔತಣಕೂಟವನ್ನು ಆಯೋಜಿಸಿತು.

Image

14 ಮಾರ್ಚ್ 2019ರಲ್ಲಿ ಆಗಿನ ಬಾಂಗ್ಲಾದೇಶದ ಪ್ರಧಾನಿ ಶೇಖ್‌ ಹಸೀನಾರವರು, ಮಿರ್ಜಾಪುರದ ಕುಮುದಿನಿ ಕಾಂಪ್ಲೆಕ್ಸ್‌ನಲ್ಲಿ ‘ದನ್ವೀರ್ ರಣದ ಪ್ರಸಾದ್ ಶಾಹಾ ಸ್ಮಾರಕದಿಂದ ಸಂಘಟಿಸಿದ್ದ ಚಿನ್ನದ ಪದಕ’ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸಿದ್ದ ಸಂದರ್ಭದಲ್ಲಿ ಕಾರ್ಯಕ್ರಮದ ನಂತರ ಕುಮುದಿನಿ ಕುಟುಂಬವು ಶೇಖ್ ಹಸೀನಾ ಅವರಿಗೆ ಔತಣಕೂಟವನ್ನು ಆಯೋಜಿಸಿತು. ಈ ಸಂದರ್ಭದಲ್ಲಿ ಸೆರೆಹಿಡಿದ ಚಿತ್ರ ಎಂಬುದು ಸ್ಪಷ್ಟವಾಗಿದೆ.

Sheikh Hasina eat 31 dishes

ಮಿರ್ಜಾಪುರದ ಕುಮುದಿನಿ ಕಾಂಪ್ಲೆಕ್ಸ್‌ನಲ್ಲಿರುವ ಭಾರತೇಶ್ವರಿ ಹೋಮ್ಸ್‌ನಲ್ಲಿ ಹುತಾತ್ಮ ದನ್ವೀರ್ ರಣದಪ್ರಸಾದ್ ಸಹಾ ಅವರ ಸ್ಮರಣಾರ್ಥ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಧಾನಿ ಶೇಖ್ ಹಸೀನಾ ಭಾಗವಹಿಸಿದ್ದರು. ಸಮಾರಂಭದ ನಂತರ ಪ್ರಧಾನಿಯವರು ಕುಮುದಿನಿ ಕುಟುಂಬದವರ ಆತಿಥ್ಯದಿಂದ ಪ್ರಭಾವಿತರಾದರು. ಕಿರಿಯ ಸಹೋದರಿ ಶೇಖ್ ರೆಹೆನಾ ಅವರೊಂದಿಗೆ ಇದ್ದರು. ಕುಮುದಿನಿ ಕುಟುಂಬವು ಶೇಖ್ ಹಸೀನಾಗೆ 31-ಕೋರ್ಸ್ ಬೆಂಗಾಲಿ ಊಟವನ್ನು ಆಯೋಜಿಸಿತು ಎಂದು ಸಂಗಬಾದ್ ಪ್ರತಿದಿನ್ ವರದಿ ಮಾಡಿದೆ.

ಪ್ರಸ್ತತ ಬಾಂಗ್ಲಾದೇಶದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಸಂದರ್ಬದಲ್ಲಿ ಮಾಜಿ ಪ್ರಧಾನಿ ಶೇಖ್‌ ಹಸೀನಾ ಭಾರತದಲ್ಲಿ ಆಶ್ರಯ ಪಡೆದಿದ್ದು ಅವರನ್ನು ಪ್ರಧಾನಿ ಮೋದಿ ಕಾಪಾಡುತ್ತಿದ್ದಾರೆ ಎಂಬಂತ ಅಭಿಪ್ರಾಯ ಮೂಡಿಸುವ ದುರುದ್ದೇಶದಿಂದ 2019 ಹಳೆಯ ಚಿತ್ರವನ್ನು ಇತ್ತೀಚಿನ ಚಿತ್ರ ಎಂದು ಹಂಚಿಕೊಳ್ಳಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಊಟ ಮಾಡುತ್ತಿರುವ ಚಿತ್ರವನ್ನು, ಭಾರತದ ಇತ್ತೀಚಿನ ಚಿತ್ರ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ವಾಸ್ತವವೆಂದರೆ ಇದು ಬಾಂಗ್ಲಾದೇಶದ ಮಿರ್ಜಾಪುರದ ಹಳೆಯ 2019ರ ಚಿತ್ರವಾಗಿದ್ದು, ಕಾರ್ಯಕ್ರವೊಂದರಲ್ಲಿ ಭಾಗವಹಿಸಿನಂತರ ಔತಣಕೂಟದಲ್ಲಿ ಭಾಗವಹಿಸಿದ್ದರು.  ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಕೇದಾರನಾಥದಲ್ಲಿ ಹೆಲಿಕಾಪ್ಟರ್‌ ಪತನವಾಗಿದೆ ಎನ್ನಲಾದ ವಿಡಿಯೋದ ವಾಸ್ತವವೇನು ಗೊತ್ತೇ?


 

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights