FACT CHECK | ಈ ಹಿಂದೂ ಮಹಿಳೆಗೆ 24 ಮಕ್ಕಳಾ? ವೈರಲ್ ವಿಡಿಯೋದ ಅಸಲೀಯತ್ತೇನು ಗೊತ್ತೇ?

ಒಂದಾನೊಂದು ಕಾಲದಲ್ಲಿ ಮಕ್ಕಳಿರಲವ್ವ ಮನೆ ತುಂಬಾ ಅಂತ ಹೇಳ್ತಿದ್ರು, ಕಾಲ ಕಳೆದಂತೆ ಆರತಿಗೊಂದು ಕೀರ್ತಿಗೊಂದು ಎರಡು ಮಕ್ಕಳು ಸಾಕು ಎನ್ನುತ್ತಿದ್ದರು. ಈಗಂತೂ ಒಂದ್ ಮಗು ಆದ್ರೆ ಪುಣ್ಯ ಅನ್ನೋರೀತಿ ಆಗಿದೆ. ಆದರೆ ಈ ಎಲ್ಲಕ್ಕೂ ಅಪಾವಾದ ಎಂಬಂತೆ ಈಗಿನ ಕಾಲದಲ್ಲೂ ಹಿಂದೂ ಮಹಿಳೆಯೊಬ್ಬರು 24 ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

“16 ಗಂಡು, 8 ಹೆಣ್ಣು ಮಕ್ಕಳಿಗೆ ಜನ್ಮ ನೀಡಿರುವ ಈ ಹಿಂದೂ ಮಹಿಳೆಗೆ ಒಟ್ಟು 24 ಮಕ್ಕಳು, ಈ ಮಹಿಳೆಯ ಸಂತೋಷವನ್ನೊಮ್ಮೆ ನೋಡಿ” ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಎಕ್ಸ್‌ನಲ್ಲಿ ಹಂಚಿಕೊಳ್ಳಲಾದ 6 ನಿವಿಷಗಳ ಈ ವಿಡಿಯೋದಲ್ಲಿ,  ಚಾನೆಲ್‌ನ ನಿರೂಪಕನೊನ್ನ ಮಹಿಳೆಯ ಕುರಿತು ಇದು ಹೇಗೆ ಸಾದ್ಯವಾಯಿತು ಎಂದು ಕೇಳಿದಾಗ, ಪ್ರೇಕ್ಷಕರ ಪ್ರೀತಿ ಮತ್ತು ಬೆಂಬಲದಿಂದ ಇದು ಸಾಧ್ಯವಾಯಿತು ಎಂದು ಮಹಿಳೆ ಹೇಳುವುದನ್ನು ಕೇಳಬಹುದು. 24 ಮಕ್ಕಳನ್ನು ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುವ ಮಹಿಳೆ, ಎಲ್ಲವು ದೇವರ ಆಶೀರ್ವಾದ, ನಾನು ಪ್ರತಿ ದಿನ ದೇವರನ್ನು ಬೇಡಿಕೊಳ್ಳುತ್ತಿದೆ ಅವನು ಆಶೀರ್ವದಿಸಿದ್ದಾನೆ ಎಂದು ಹೇಳುವುದನ್ನು ಕೇಳಬಹುದು.

ಇದೇ ರೀತಿಯ ವಿಡಿಯೋಗಳನ್ನು ಹಲವು ಯೂಟ್ಯೂಬ್‌ಗಳು ಅಪ್‌ಲೋಡ್‌ ಮಾಡಿರುವುದನ್ನು ಇಲ್ಲಿ ನೋಡಬಹುದು. ಹಾಗಿದ್ದರೆ ಈ ವಿಡಿಯೋ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯಂತೆ ಈ ಮಹಿಳೆಗೆ 24 ಮಕ್ಕಳು ನಿಜವಾಗಿಯೂ ಇದ್ದಾರಾ? ಅಥವಾ ಬೇರೆ ಕಥೆ ಏನಾದರೂ ಇದೇಯೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 18 ಆಗಸ್ಟ್‌ 2024ರಂದು ಖಬರ್ ದುನಿಯಾ ಎಂಬ ಯೂಟ್ಯೂಬ್‌ ಅಪ್‌ಲೋಡ್‌ ಮಾಡಿದ ವಿಡಿಯೋ ಲಭ್ಯವಾಗಿದೆ.

ತನಗೆ 24 ಮಕ್ಕಳಿದ್ದಾರೆ ಎಂದು ಹೇಳಿಕೊಳ್ಳುವ ಹಿಂದೂ ಮಹಿಳೆಯ ಹೆಸರು ಖುಷ್ಬು ಪಾಠಕ್. ಸಾಮಾಜಿಕ ಜಾಲತಾಣದಲ್ಲಿ ಕಾಮಿಡಿ ವಿಡಿಯೋ‌ಗಳನ್ನು ಮಾಡುವ ಮೂಲಕವೇ ಈಕೆ ಪ್ರಸಿದ್ಧಿ ಪಡೆದಿದ್ದು, ತನ್ನದೇ ಆದ ‘ಅಪ್ನಾ ಆಜ್‘ ಎಂಬ ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ. ಈ ಚಾನೆಲ್‌ನಲ್ಲಿ 24 ಮಕ್ಕಳ ಬಗ್ಗೆ ವಿಭಿನ್ನ ರೀತಿಯಲ್ಲಿ ಕಥೆಗಳನ್ನು ಹೆಣೆದು ವಿಡಿಯೋ ಮಾಡಿರುವುದನ್ನು ಕಾಣಬಹುದು.

ಸಂದರ್ಶನ ಮಾಡಿದ ಖಬರ್ ದುನಿಯಾ ಯೂಟ್ಯೂಬ್ ಚಾನೆಲ್ ಆಗಸ್ಟ್ 11 ರಂದು “ಹಿಂದೂ ಮಹಿಳೆಗೆ 24ಮಕ್ಕಳು” ಎಂಬ ಶೀರ್ಷಿಕೆಯಲ್ಲಿ ವಿಡಿಯೋ‌ ಅಪ್ಲೋಡ್ ಮಾಡಿದೆಯಾದರೂ, 24 ಮಕ್ಕಳಿರುವ ಬಗ್ಗೆ ದೃಢೀಕರಿಸಿಲ್ಲ ಎಂದು ತನ್ನ ಹೇಳಿಕೆಯಲ್ಲಿ ನಮೂದಿಸಿದೆ. ಆದರೆ, ಈ ಬಗ್ಗೆ ವಿಡಿಯೋದಲ್ಲಿ ಯಾವುದೇ ಹೇಳಿಕೆಯನ್ನು ನೀಡದೇ ಇರುವುದು ವಿಕ್ಷಕರು ಇದು ನೈಜ ಸುದ್ದಿ ಎಂದು ಭಾವಿಸಲು ಕಾರಣವಾಗಿದೆ.

ಖುಷ್ಬು ಅಕ್ಕಪಕ್ಕದಲ್ಲಿ ನಿಂತ ಸಹನಟರೂ ಕೂಡ ಈ ಸಂದರ್ಶನ ವಿಡಿಯೋ ಚಿತ್ರೀಕರಣದ ವೇಳೆ ಖುಷ್ಬು‌ಗೆ 24 ಮಕ್ಕಳಿದ್ದಾರೆ ಎಂದು ಹೇಳುವಾಗ ಸಂದರ್ಶನ ನಡೆಸುವಾತ ತಬ್ಬಿಬ್ಬಾಗುವುದು ಚಿತ್ರಣವಾಗಿತ್ತು.

ಇದನ್ನೇ ‌ನಿಜವೆಂದು ಭಾವಿಸಿ ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನ ಆಯಾಮದಲ್ಲಿ ಜನರು ವಿಡಿಯೋ ಹಂಚಿಕೊಳ್ಳುತ್ತಿದ್ದಾರೆ.

 

ಆದರೆ, ಪಿಜಿ ನ್ಯೂಸ್ ಎಂಬ ಯೂಟ್ಯೂಬ್ ಚಾನೆಲ್‌ವೊಂದು ನಡೆಸಿದ ಸಂದರ್ಶನದಲ್ಲಿ ಖುಷ್ಬು “ತನ್ನ ಇಬ್ಬರು ಮಕ್ಕಳು ಮನೆಯಲ್ಲಿದ್ದಾರೆ‌ ಮಿಕ್ಕುಳಿದ 22 ಮಕ್ಕಳು ಹೊಲದಲ್ಲಿದ್ದಾರೆ” ಎಂದು ಹೇಳಿಕೆ ನೀಡಿದ್ದಾಳೆ. “22 ಮಕ್ಕಳು ತಾನು ನೆಟ್ಟ ಗಿಡಗಳು” ಎಂದು ಖುಷ್ಬು ಇದರಲ್ಲಿ ಪರಿಚಯಿಸಿದ್ದು, ತನ್ನ ಎರಡು ಮಕ್ಕಳು ಮಾತ್ರ ಮನೆಯಲ್ಲಿದ್ದಾರೆ ಎಂದು ಹೇಳಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಯೂಟ್ಯೂಬ್ ಚಾನೆಲ್‌ ನಡೆಸುವ ಮಹಿಳೆಯೊಬ್ಬರು ತನ್ನ ಕೈಯಾರೆ ನೆಟ್ಟ ಗಿಡಗಳನ್ನು ಉಲ್ಲೇಖಿಸಿ (ಗಿಡಗಳನ್ನು ಮಕ್ಕಳು ಎಂದು) ತನಗೆ 24 ಮಕ್ಕಳು ಇದ್ದಾರೆ ಎಂದು ತಮಾಷೆಗೆ ಹೇಳಿರುವ ವಿಡಿಯೋವನ್ನು ತಪ್ಪು ಗ್ರಹಿಕೆಯೊಂದಿಗೆ ಮಹಿಳೆಗೆ ನಿಜವಾಗಿಯೂ 24 ಮಕ್ಕಳಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ವಾಸ್ತವವಾಗಿ ಈ ಮಹಿಳೆಗೆ ಇರುವುದು ಇಬ್ಬರು ಮಕ್ಕಳು ಮಾತ್ರ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ತಂದೆ ಇಲ್ಲದ ಮಕ್ಕಳಿಗೆ 24 ಸಾವಿರ ಸ್ಕಾಲರ್‌ಶಿಪ್! ಇದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights