FACT CHECK | ಮುಂಬೈನ ಬೀದಿಗಳಲ್ಲಿ ಮುಸ್ಲಿಮರ ಶಕ್ತಿ ಪ್ರದರ್ಶನ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ

ಮುಂಬೈ ಮಹಾನಗರಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಮರೆವಣಿಗೆಯಲ್ಲಿ ಸಾಗುತ್ತಿರುವ 27 ಸೆಕೆಂಡ್‌ಗಳ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು, ರಸ್ತೆಯ ಇಕ್ಕೆಲಗಳಲ್ಲಿ ನಡೆದುಕೊಂಡು ಹೋಗುವ ಜನರ ಜೊತೆಗೆ ರಸ್ತೆಯ ಮಧ್ಯದಲ್ಲಿ ಅನೇಕ ಕಾರುಗಳು, ವ್ಯಾನ್‌ಗಳು ಮತ್ತು ಟೆಂಪೋಗಳು ಹಾದುಹೋಗುವುದನ್ನು ನೋಡಬಹುದು.

“ಇದು ಪಾಕಿಸ್ತಾನ ಅಥವಾ ಬಾಂಗ್ಲಾದೇಶ ಅಲ್ಲ ಇದು ಇರಾಕ್, ಇರಾನ್ ಅಥವಾ ಅಫ್ಘಾನಿಸ್ತಾನವೂ ಅಲ್ಲ. ಇದು ನಮ್ಮ ಮುಂಬೈನಲ್ಲಿ ಮುಸ್ಲಿಮರು ಬೀದಿಯಲ್ಲಿ ತಮ್ಮ ಶಕ್ತಿಯನ್ನು ತೋರಿಸಲು ಬಯಸುತ್ತಾರೆ. ಹಿಂದೂಗಳೇ ನಿದ್ರಿಸುತ್ತಿರಿ”. ಎಂಬ ಹೇಳಿಕೆಯೊಂದಿಗೆ ಎಕ್ಸ್‌ ಬಳಕೆದಾರರೊಬ್ಬರು ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಹಾಗೆಯೇ ಫೇಸ್‌ಬುಕ್‌ ಬಳಕೆದಾರರೊಬ್ಬರು ಇದೇ ವಿಡಿಯೋವನ್ನು “ಸಾಧುವಿನ ವೇಷದಲ್ಲಿದ್ದ ಇದ್ದ ಹಿಂದುತ್ವ ಉಗ್ರನೊಬ್ಬ ನಮ್ಮ ಪ್ರವಾದಿ (ಸ)ಬಗ್ಗೆ ಕೀಳಾಗಿ ಮಾತನಾಡಿದ, ಪ್ರತಿಭಟಿಸುತ್ತಾ ಪೈಗಂಬ‌ರ್ ಪ್ರೇಮಿಗಳು ಮುಂಬೈ ಎಡೆಗೆ ದೌಡಾಯಿಸಿ ಬಂದಿರುವ ದೃಶ್ಯವಿದು”. ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಸಂತ ರಾಮಗಿರಿ ಮತ್ತು ಬಿಜೆಪಿ ಶಾಸಕ ನಿತೀಶ್ ರಾಣೆ ಅವರ ವಿವಾದಾತ್ಮಕ ಹೇಳಿಕೆಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಇಮ್ತಿಯಾಜ್ ಜಲೀಲ್ ನೇತೃತ್ವದಲ್ಲಿ ಎಐಎಂಐಎಂ ನಾಯಕರು ಮುಂಬೈನಲ್ಲಿ ನಡೆಸಿದ ಐತಿಹಾಸಿಕ  ರ್‍ಯಾಲಿ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿರುವ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 12 ಸೆಪ್ಟಂಬರ್ 2024 ರಂದು ಫೇಸ್‌ಬುಕ್ ಪೋಸ್ಟ್‌ವೊಂದು ಲಭ್ಯವಾಗಿದ್ದು, “ಪೋಪ್ ಫ್ರಾನ್ಸಿಸ್ ಅವರು 100% ಕ್ಯಾಥೋಲಿಕ್ ಬೇರುಗಳನ್ನು ಹೊಂದಿರುವ ದೇಶಕ್ಕೆ ಐತಿಹಾಸಿಕ ಭೇಟಿಯನ್ನು ಸ್ವಾಗತಿಸುತ್ತಾರೆ.” ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ವೈರಲ್ ವಿಡಿಯೋದಲ್ಲಿರುವಂತೆಯೇ ಜನಸಮೂಹದ ವಿಡಿಯೋವೊಂದನ್ನು ನೈಜೀರಿಯನ್ ಕ್ಯಾಥೋಲಿಕ್‌ಗಳು ಎಂಬ ಫೇಸ್‌ಬುಕ್ ಬಳಕೆದಾರರು ಸೆಪ್ಟೆಂಬರ್ 12 ರಂದು ಹಂಚಿಕೊಂಡ ಪೋಸ್ಟ್ ಲಭ್ಯವಾಗಿದೆ. ಇದರಲ್ಲಿ ಈ ವಿಡಿಯೋವನ್ನು ಟಿಮೋರ್-ಲೆಸ್ಟೆಯಲ್ಲಿ ಪೋಪ್ ಫ್ರಾನ್ಸಿಸ್ ಗೆ ನೀಡಿದ ಸ್ವಾಗತ ಎಂದು ವಿವರಿಸಲಾಗಿದೆ.  “100% ಕ್ಯಾಥೋಲಿಕ್ ಮೂಲದ ದೇಶವಾದ ಟಿಮೊಲ್-ಲೆಸ್ಟೆಗೆ ಪೋಪ್ ಫ್ರಾನ್ಸಿಸ್ ನೀಡಿದ ಐತಿಹಾಸಿಕ ಭೇಟಿಯನ್ನು ಸ್ವಾಗತಿಸಿದ್ದಾರೆ” ಎಂಬ ಬರಹದೊಂದಿಗೆ ಹಂಚಿಕೊಳ್ಳಲಾಗಿದೆ.

ಸೆಪ್ಟೆಂಬರ್ 16 ರಂದು ಮೊರಾಕೊ ನ್ಯೂಸ್ (@ಮೊರೊಕೊಲಿಟಿಕ್) ಪೋಸ್ಟ್ ಮಾಡಿದ ಈ ವೀಡಿಯೊವೊಂದು ಲಭ್ಯವಾಗಿದ್ದು, ಈ ವಿಡಿಯೋವನ್ನು ಪೋಪ್ ಫ್ರಾನ್ಸಿಸ್ ಟಿಮೋರ್-ಲೆಸ್ಟೆಗೆ ಭೇಟಿ ಎಂದು ವಿವರಿಸಲಾಗಿದೆ.

ಕೆಲವು ಕೀವರ್ಡ್ ಸಹಾಯದಿಂದ ಮತ್ತಷ್ಟು ಸರ್ಚ್ ಮಾಡಿದಾಗ, 10 ಸೆಪ್ಟೆಂಬರ್ 2024ರಂದು ಅಸೋಸಿಯೇಟೆಡ್ ಪ್ರೆಸ್‌ ತನ್ನ YouTubeನಲ್ಲಿ ವಿಡಿಯೋವನ್ನು ಹಂಚಿಕೊಂಡಿದೆ  “ಸುಮಾರು 600,000 ಜನರು ಪೋಪ್ ಫ್ರಾನ್ಸಿಸ್ ಅವರ ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ” ಎಂಬ ಶೀರ್ಷಿಕೆಯನ್ನು ನೀಡಲಾಗಿದೆ.

ವಿಡಿಯೋಗೆ ನೀಡಿರುವ ವಿವರಣೆಯಲ್ಲಿ “ಅಂದಾಜು 600,000 ಜನರು – ಪೂರ್ವ ಟಿಮೋರ್‌ನ ಜನಸಂಖ್ಯೆಯ ಅರ್ಧದಷ್ಟು ಜನರು – 35 ವರ್ಷಗಳ ಹಿಂದೆ ಸೇಂಟ್ ಜಾನ್ ಪಾಲ್ II ಪ್ರಾರ್ಥನೆ ಮಾಡಿದ ಅದೇ ಮೈದಾನದಲ್ಲಿ ಪೋಪ್ ಫ್ರಾನ್ಸಿಸ್ ಅವರ ಅಂತಿಮ ಮಾಸ್‌ಗಾಗಿ ಮಂಗಳವಾರ ಕಡಲತೀರದ ಉದ್ಯಾನವನವನ್ನು ಪ್ಯಾಕ್ ಮಾಡಿದರು. ಇಂಡೋನೇಷ್ಯಾದಿಂದ ಸ್ವಾತಂತ್ರ್ಯಕ್ಕಾಗಿ ಹೋರಾಟ.” ಎಂದು ಬರೆಯಲಾಗಿದೆ. ಹಾಗಾಗಿ ಮುಂಬೈನ ಬೀದಿಗಳಲ್ಲಿ ಮುಸ್ಲಿಮರ ಐಕ್ಯ ಹೋರಾಟ, ಶಕ್ತಿ ಪ್ರದರ್ಶನ ಎಂದು ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ದೃಶ್ಯಗಳು ಸುಳ್ಳು ಮತ್ತು ತಪ್ಪುದಾರಿಗೆಳೆಯುವಂತಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋ ಎಐಎಂಐಎಂ ನಾಯಕ ಇಮ್ತಿಯಾಜ್ ಜಲೀಲ್ ಅವರ ಮುಂಬೈನಲ್ಲಿ ನಡೆಸಿದ ರ್‍ಯಾಲಿಯದ್ದಲ್ಲ ಎಂದು  ಈ ಮೂಲಕ ಖಚಿತವಾಗಿದೆ. ಈ ಹಿನ್ನಲೆಯಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ವಾಸ್ತವವಾಗಿ ಕ್ಯಾಥೋಲಿಕ್ ದೇಶವಾದ ಟಿಮೋರ್-ಲೆಸ್ಟೆಯಲ್ಲಿ ಪೋಪ್ ಫ್ರಾನ್ಸಿಸ್ ಅವರಿಗೆ ನೀಡಿದ ಭವ್ಯ ಸ್ವಾಗತದ ದೃಶ್ಯಗಳನ್ನು ಒಳಗೊಂಡಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ರೈಲನ್ನು ಆಕ್ಸಿಡೆಂಟ್ ಮಾಡುವ ಉದ್ದೇಶದಿಂದ ಜಿಹಾದಿಗಳು ರೈಲ್ವೇ ಹಳಿಯ ಮೇಲೆ ಕಂಬವನ್ನು ಇಟ್ಟಿದ್ದು ನಿಜವೇ? ಈ ಸ್ಟೋರಿ ಓದಿ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights