FACT CHECK | ತಿರುಪತಿ ಪ್ರಸಾದ ಕುರಿತು ಹಿಂದೂಗಳನ್ನು ಅಪಹಾಸ್ಯ ಮಾಡಿದ್ದಕ್ಕೆ ವ್ಯಕ್ತಿಯ ಮೇಲೆ ಹಲ್ಲೆ ನಡೆದಿದೆ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ

ತಿರುಪತಿ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡುವ ‘ಲಾಡ್ಡು’ಗಳನ್ನು ತಯಾರಿಸಲು ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬಿನಂಶವಿದೆ ಎಂದು ಪ್ರಯೋಗಾಲಯದ ಪರೀಕ್ಷೆಯ ವರದಿಗಳು ಭಾರಿ ಸಂಚಲನವನ್ನು ಉಂಟುಮಾಡಿದವು, ಇದು ಭಕ್ತರು ಮತ್ತು ಸಾರ್ವಜನಿಕರಲ್ಲಿ ತೀರ್ವ ಟೀಕೆಗೆ ಗುರಿಯಾಗಿತ್ತು ಮತ್ತು ಆಂದ್ರಪ್ರದೇಶದ ರಾಜಕೀಯ ನಾಯಕರ ನಡುವೆ ಕೆಸರೆರಚಾಟಕ್ಕೆ ಸಾಕ್ಷಿಯಾಗಿತ್ತು.

Tirupati Laddu Row

ಇದೇ ಸಂದರ್ಭದಲ್ಲಿ, ತಿರುಪತಿ ದೇವಸ್ಥಾನದ ಪ್ರಸಾದಕ್ಕೆ ಸಂಬಂಧಿಸಿದಂತೆ “ಹಿಂದೂಗಳನ್ನು ಅಪಹಾಸ್ಯ ಮಾಡಿದ” ಪಿಯೂಷ್ ಮಾನುಷ್ ಎಂಬ ವ್ಯಕ್ತಿಯನ್ನು  ಗುಂಪೊಂದು ಥಳಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಹಲವು ಎಕ್ಸ್‌ ಮತ್ತು ಫೇಸ್‌ಬುಕ್ ಖಾತೆಯ ಬಳಕೆದಾರರು 26 ಸೆಕೆಂಡ್‌ಗಳ ವಿಡಿಯೋವನ್ನು ಹಂಚಿಕೊಂಡಿದ್ದು, “ಪೆರುಮಾಳ್ ಅವರೇ ವಿತರಿಸಿದ ಎಲ್ಲಾ ಹಿಂದೂಗಳಿಗೆ ಬೀಫ್ ಲಡ್ಡೂ” ಎಂಬ ಶೀರ್ಷಿಕೆಯ ವೀಡಿಯೊದೊಂದಿಗೆ ಹಿಂದೂಗಳನ್ನು ಅಪಹಾಸ್ಯ ಮಾಡಿದ ಪಿಯೂಷ್ ಮನುಷ್ ತಮಿಳಿನ ಸೇಲಂನಲ್ಲಿ ಉತ್ತಮ ಚಿಕಿತ್ಸೆ ಪಡೆದಿದ್ದಾರೆ ಎಂದು.” ಬರೆದುಕೊಂಡಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನ ವಿಡಿಯೋದಲ್ಲಿ ಕಂಡುಬರುವ ‘NewsGlitz’ ಎಂಬ ವಾಟರ್‌ಮಾರ್ಕ್ ನಿಂದ ಸುಳಿವನ್ನು ತೆಗೆದುಕೊಂಡು, ಸಂಬಂಧಿತ ಕೀವರ್ಡ್ ಮೂಲಕ ಸರ್ಚ್ ಮಾಡಿದಾಗ, ಅಗಸ್ಟ್ 28, 2019 ರಂದು ಅದೇ ವಿಡಿಯೋವನ್ನು ಹೋಲುವ ಮತ್ತೊಂದು ವಿಡಿಯೋವನ್ನು NewsGlitz ನ YouTube ಚಾನಲ್‌ನಲ್ಲಿ ಪೋಸ್ಟ್ ಮಾಡಿರುವುದು ಲಭ್ಯವಾಗಿದೆ.

 

 

 

 

 

 

 

 

 

 

ಸೇಲಂನ ಬಿಜೆಪಿ ಕಚೇರಿಯಲ್ಲಿ BJP ಪಕ್ಷದ ಕಾರ್ಯಕರ್ತರು ಪಿಯೂಷ್ ಮಾನುಷ್ ಅವರನ್ನು ಥಳಿಸಿದ್ದಾರೆ ಎಂದು ಅದೇ ವಿವರಣೆಯಲ್ಲಿ ತಿಳಿಸಲಾಗಿದೆ. ಮೂಲಗಳ ಪ್ರಕಾರ, ಅವರು ಫೇಸ್‌ಬುಕ್‌ನಲ್ಲಿ ‘ಲೈವ್’ ಮಾಡುವಾಗ ಉದ್ದೇಶಪೂರ್ವಕವಾಗಿ BJP ಕಚೇರಿಯೊಳಗೆ ಹೋಗಿ ಪ್ರಶ್ನಿಸಲು ಪ್ರಾರಂಭಿಸಿದಾಗ ಈ ಘಟನೆ ನಡೆದಿದೆ ಎಂದು ವಿವರಿಸಲಾಗಿದೆ. ಹಾಗಾಗಿ ಈ ಘಟನೆ ತಿರುಪತಿ ಪ್ರಸಾದಕ್ಕೆ ಬಳಸಲಾಗಿದೆ ಎನ್ನಲಾದ ಪ್ರಾಣಿ ಕೊಬ್ಬಿನ ತುಪ್ಪಕ್ಕೆ ಸಂಬಂಧಿಸಿಲ್ಲ ಎಂಬುದು ಸ್ಪಷ್ಟವಾಗಿದೆ.

ಪಿಯೂಷ್ ಮಾನುಷ್ ಅವರ ಎಕ್ಸ್‌ ಖಾತೆಯನ್ನು ಪರಿಶೀಲಿಸಲಾಗಿದ್ದು ಸೆಪ್ಟೆಂಬರ್ 22, 2024 ರಂದು ತಿರುಪತಿ ಪ್ರಸಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದು, “ದನದ ಮಾಂಸವು ಅತ್ಯಂತ ಪ್ರಸಿದ್ಧ, ಶ್ರೀಮಂತ ಮತ್ತು ಅತ್ಯುನ್ನತ ಪೂಜ್ಯ ತಿರುಪತಿ ಬಾಲಾಜಿ ದೇವಸ್ಥಾನವನ್ನು ಪ್ರವೇಶಿಸಿತು ದೇವರು, ಅರ್ಚಕರು, ಆಡಳಿತ ಎಲ್ಲವೂ ವಿಫಲವಾಗಿದೆ. ಯಾರೂ ಜವಾಬ್ದಾರಿಯನ್ನು ತೆಗೆದುಕೊಳ್ಳಲಿಲ್ಲ ಅಥವಾ ಕ್ಷಮೆ ಕೇಳಲಿಲ್ಲ ! ಎಂದು ಬರೆದುಕೊಂಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ತಿರುಪತಿ ಪ್ರಸಾದದ ಗದ್ದಲದ ನಂತರ ಹಿಂದೂಗಳ ಬಗ್ಗೆ ಅವಹೇಳನಾಕಾರಿ ಹೇಳಿಕೆ ನೀಡಿದಕ್ಕಾಗಿ ಸಾಮಾಜಿಕ ಕಾರ್ಯಕರ್ತ ಪಿಯೂಷ್ ಮಾನುಷ್ ಅವರನ್ನು ಗುಂಪೊಂದು ಹಲ್ಲೆ ಮಾಡಿದೆ ಎಂದು ತೋರಿಸಲು 2019 ರ ವಿಡಿಯೋವನ್ನು ತಪ್ಪಾಗಿ ಲಿಂಕ್ ಮಾಡಿ ಹಂಚಿಕೊಳ್ಳಲಾಗಿದೆ. ಸಂದರ್ಭಾನುಸಾರವಾಗಿ ಹಂಚಿಕೊಳ್ಳಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಮುಂಬೈನ ಬೀದಿಗಳಲ್ಲಿ ಮುಸ್ಲಿಮರ ಶಕ್ತಿ ಪ್ರದರ್ಶನ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights