FACT CHECK | ಕರ್ನಾಟಕದಲ್ಲಿ ಲವ್ ಜಿಹಾದ್ ಬ್ಯಾನರ್ ಹಾಕಲಾಗಿದೆ ಎಂದು ತೆಲಂಗಾಣದ ಹಳೆಯ ಪೋಸ್ಟ್‌ ಹಂಚಿಕೆ

ಲವ್ ಜಿಹಾದ್‌ಗೆ ಸಂಬಂಧಿಸಿದ ಪೋಸ್ಟ್‌ವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು, ಕರ್ನಾಟಕದ ಶಾಪಿಂಗ್ ಮಾಲ್‌ವೊಂದರಲ್ಲಿ ಮುಸ್ಲಿಂ ಯುವಕರು ಹಿಂದೂ ಯುವತಿರೊಂದಿಗೆ ಶಾಪಿಂಗ್ ಬಂದರೆ ಶೇ 50ರ ವರಗೆ ಡಿಸ್ಕೌಂಟ್ ನೀಡಲಾಗುವುದು ಎಂಬ ಜಾಹೀರಾತಿನ ಬ್ಯಾನರ್‌ಅನ್ನು ಹಾಕಿದ್ದಾರೆ ಎಂದು ಹೇಳುವ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

CMR ಶಾಪಿಂಗ್ ಮಾಲ್ ಹೆಸರಿನಲ್ಲಿ ಹಂಚಿಕೊಂಡಿರುವ ಈ ಜಾಹೀರಾತು ಲವ್ ಜಿಹಾದ್‌ಅನ್ನು ಬಹಿರಂಗವಾಗಿ ಪ್ರೇರೇಪಿಸುತ್ತದೆ, ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರದ ಮುಸ್ಲಿಂ ಓಲೈಕೆಯೇ ಇದಕ್ಕೆ ಮೂಲ ಕಾರಣ ಎಂದು ಪ್ರತಿಪಾದಿಸಲಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕಾಗಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನ ಬ್ಯಾನರ್‌ನಲ್ಲಿ ಸೀರೆಯನ್ನು ಧರಿಸಿದ ಮಹಿಳೆಯ ಪಕ್ಕದಲ್ಲಿ ಇಸ್ಲಾಮಿಕ್ ಕ್ಯಾಪ್ ಧರಿಸಿ ನಿಂತಿರುವುದು ವ್ಯಕ್ತಿಯ ಚಿತ್ರವನ್ನು ಕಾಣಬಹುದು. ಈ ಫೋಟೋವನ್ನು ನೋಡಿದ ತಕ್ಷಣ ಸಾಕಷ್ಟು ಮಂದಿ ಸಾಮಾಜಿಕ ಜಾಲತಾಣದ ಬಳಕೆದಾರರು, ಮುಸಲ್ಮಾನರ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿ ಬರಹಗಳನ್ನು ಹಂಚಿಕೊಂಡಿದ್ದಾರೆ.  ಇನ್ನೂ ಕೆಲವರು ಕರ್ನಾಟಕದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಟೀಕಾ ಪ್ರಹಾರವನ್ನು ನಡೆಸಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ಅನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಆಂಧ್ರಪ್ರದೇಶ ಮತ್ತು ತೆಲಂಗಾಣದ ಪ್ರಾದೇಶಿಕ ಭಾಷೆಯಾಗಿರುವ ಪೋಸ್ಟರ್‌ನಲ್ಲಿ ತೆಲುಗು ಭಾಷೆ ಬರೆದಿರುವುದು ಕಂಡುಬರುತ್ತದೆ. ತೆಲುಗಿನ ಬ್ಯಾನರ್, “ರಂಜಾನ್ ರಿಯಾಯಿತಿ” ಮತ್ತು ಕೆಳಗೆ ತೆಲಂಗಾಣದ CMR ಶಾಪಿಂಗ್ ಮಾಲ್‌ನ ವಿವಿಧ ಶಾಖೆಗಳ ಹೆಸರುಗಳನ್ನು ಬರೆಯಲಾಗಿದೆ. ಮಾಲ್‌ಗೆ ಮುಸ್ಲಿಂ ಯುವಕರೊಂದಿಗೆ ಹಿಂದೂ ಹುಡುಗಿಯರು ಬಂದರೆ ರಿಯಾಯಿತಿ ನೀಡಲಾಗುವುದು ಎಂದು ಬೋರ್ಡ್‌ನಲ್ಲಿ ಎಲ್ಲಿಯೂ ಉಲ್ಲೇಖಿಸಲಾಗಿಲ್ಲ.

ಕೆಲವು ಕೀವರ್ಡ್ ಬಳಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಸರ್ಚ್ ಮಾಡಿದಾಗ, 31 ಮೇ 2019 ರಂದು CMR ತೆಲಂಗಾಣ ಶಾಪಿಂಗ್ ಮಾಲ್ ನೀಡಿದ ಕ್ಷಮೆಯಾಚನೆಯ ಟಿಪ್ಪಣಿ ಲಭ್ಯವಾಗಿದ್ದು, CMR ಶಾಪಿಂಗ್ ಮಾಲ್ ಹೊರಡಿಸಿದ ಹೇಳಿಕೆಯಲ್ಲಿ, “ಇಡೀ CMR ತೆಲಂಗಾಣ ಸಮೂಹದ ಪರವಾಗಿ, ನಾವು ಕ್ಷಮೆಯಾಚಿಸುತ್ತೇವೆ. ಯಾವುದೇ ಧಾರ್ಮಿಕ ಭಾವನೆಗಳನ್ನು ನೋಯಿಸುವ ಅಥವಾ ಯಾವುದೇ ತಾರತಮ್ಯವನ್ನು ಸೃಷ್ಟಿಸುವ ಉದ್ದೇಶ ನಮಗಿಲ್ಲ. ನಾವು ಎಲ್ಲಾ ಧರ್ಮಗಳನ್ನು ಬೆಂಬಲಿಸುತ್ತೇವೆ ಮತ್ತು ಯಾವುದೇ ಪೂರ್ವಾಗ್ರಹವಿಲ್ಲದೆ ಪ್ರತಿ ಸಮುದಾಯವನ್ನು ಗೌರವಿಸುತ್ತೇವೆ. ಎಲ್ಲಾ ಹೋರ್ಡಿಂಗ್‌ಗಳನ್ನು ತೆಗೆದುಹಾಕಲಾಗಿದೆ ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳು ಪುನರಾವರ್ತನೆಯಾಗುವುದಿಲ್ಲ ಎಂದು ನಾವು ಭರವಸೆ ನೀಡುತ್ತೇವೆ” ಎಂದು ಜನ ಸಾಮಾನ್ಯರಲ್ಲಿ ಕ್ಷಮಾಪಣೆಯನ್ನು ಕೇಳಿರುವುದು ಕಂಡುಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 2019ರಲ್ಲಿ ರಂಜಾನ್ ಹಬ್ಬದ ಪ್ರಯುಕ್ತ CMR ಶಾಪಿಂಗ್ ಮಾಲ್‌ ಸಮೂಹ ಸಂಸ್ಥೆಯು ಮುಸ್ಲಿಂ ಯುವಕ ಮತ್ತು ಹಿಂದೂ ಹುಡುಗಿಯ ಫೋಟೊವನ್ನು ಬ್ಯಾನರ್‌ನಲ್ಲಿ ಬಳಸಿ “ರಂಜಾನ್ ರಿಯಾಯಿತಿ” ಎಂಬ ಜಾಹೀರಾತನ್ನು ಪ್ರಕಟಿಸಿತ್ತು. ಬ್ಯಾನರ್‌ನಲ್ಲಿ ಬಳಸಿದ ಫೋಟೊ ಬಗ್ಗೆ ಕೆಲವರು ತಕರಾರು ತೆಗೆದಿದ್ದ ಕಾರಣ ತೆಲಂಗಾಣದ CMR ಶಾಪಿಂಗ್ ಮಾಲ್‌ನಿಂದ ಕ್ಷಮೆಯಾಚನೆ ಪತ್ರವನ್ನು ನೀಡಲಾಗಿತ್ತು. ಹಾಗಾಗಿ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರವ ಫೋಟೊಗೂ ಕರ್ನಾಟಕಕ್ಕೂ ಸಂಬಂಧವಿಲ್ಲ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಆಸಾದುದ್ದಿನ್ ಓವೈಸಿ ಕರೆದ ಮುಸ್ಲಿಂ ರ್‍ಯಾಲಿಯಲ್ಲಿ ಸೇರಿರುವ ಅಲ್ಪಸಂಖ್ಯಾತರನ್ನು ನೋಡಿ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights