FACT CHECK | ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕ್‌ಗಳ ಸೀಟ್ ಕವರ್‌ಗಳನ್ನು ಹರಿದು ಟೈರ್ ಪಂಕ್ಚರ್ ಮಾಡಿದ ವ್ಯಕ್ತಿ ಮುಸ್ಲಿಮನ್ನಲ್ಲ, ಮತ್ತ್ಯಾರು?
ವ್ಯಕ್ತಿಯೊಬ್ಬ ರಸ್ತೆ ಬದಿಯಲ್ಲಿ ನಿಲ್ಲಿಸಿರುವ ಬೈಕ್ ಮತ್ತು ಸ್ಕೂಟರ್‌ಗಳ ಸೀಟ್ ಕವರ್‌ಗಳನ್ನು ಬ್ಲೇಡಿನಿಂದ ಕೊಯ್ದು ಹಾನಿಗೊಳಿಸಿ, ಅವುಗಳ ಟೈರ್‌ಗಳನ್ನು ಪಂಕ್ಚರ್ ಮಾಡುತ್ತಿರುವ ವಿಡಿಯೋ ಹಾಗೆಯೇ ಒಬ್ಬ ವ್ಯಕ್ತಿ ಮಿನಿ ಟ್ರಕ್‌ನ ಟೈರ್‌ಗಳನ್ನು ಪಂಕ್ಚರ್ ಮಾಡುವುದನ್ನು ಕಾಣಬಹುದು.ಮುಸ್ಲಿಮಮುಸ್ಲಿಮನ್ನಲ್ಲನ್ನಲ್ಲ

ಮುಸ್ಲಿಂ ಮೆಕ್ಯಾನಿಕ್‌ವೊಬ್ಬ ಬೈಕ್ ಮತ್ತು ಸ್ಕೂಟರ್‌ಗಳ ಸೀಟ್ ಕವರ್‌ಗಳನ್ನು ಹಾನಿಗೊಳಿಸುವುದನ್ನು ಮತ್ತು ಅವುಗಳ ಟೈರ್‌ಗಳನ್ನು ಪಂಕ್ಚರ್ ಮಾಡುತ್ತಿರುವುದನ್ನು ನೋಡಿ ಎಂದು ಪ್ರತಿಪಾದಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ. ಮುಸ್ಲಿಮನ್ನಲ್ಲ
ಮುಸ್ಲಿಮರು ತಮ್ಮ ಅಂಗಡಿಯ ವ್ಯಾಪಾರವನ್ನು ಹೆಚ್ಚಿಸಿಕೊಳ್ಳಲು ಮುಸ್ಲಿಂ ಮೆಕ್ಯಾನಿಕ್ ಸೀಟ್ ಕವರ್‌ಗಳನ್ನು ಹಾನಿಗೊಳಿಸುತ್ತಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗುತ್ತಿದೆ. “ಮೊಹಮ್ಮದ್ ಜುನೈದ್ ಅವರು ರಸ್ತೆಬದಿಯಲ್ಲಿ ನಿಲ್ಲಿಸಿದ ವಾಹನಗಳ ಸೀಟುಗಳನ್ನು ಬೇಡ್‌ನಿಂದ ಹರಿದು ಹಾಕುತ್ತಿರುವುದು ಕಂಡುಬಂದಿದೆ. ಯಾರೋ ವಿಡಿಯೋ ರೆಕಾರ್ಡ್ ಮಾಡಿ ಅದನ್ನು ವೈರಲ್ ಮಾಡಿದಾಗ, ಅದೇ ರಸ್ತೆಯಲ್ಲಿ ಜುನೈದ್ ಪಂಕ್ಚರ್ ಮತ್ತು ಸೀಟ್ ಕವರ್ ಅಂಗಡಿಯನ್ನು ಹೊಂದಿರುವುದು ಕಂಡುಬಂದಿದೆ. ತನ್ನ ವ್ಯಾಪಾರವನ್ನು ವಿಸ್ತರಿಸಲು, ಅವನು ವಾಹನಗಳನ್ನು ಪಂಕ್ಚರ್ ಮಾಡುತ್ತಾನೆ ಮತ್ತು ಸೀಟುಗಳನ್ನು ಹರಿದು ಹಾಕುತ್ತಾನೆ ಎಂಬ ಹೇಳಿಕೆಯೊಂದಿಗೆ ಪೋಸ್ಟ್ ಮಾಡಲಾಗಿದೆ. ಅದರ ಆರ್ಕೈವ್ ಅನ್ನು ಇಲ್ಲಿ ನೋಡಬಹುದು. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ. ಮುಸ್ಲಿಮನ್ನಲ್ಲ
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಕೀವರ್ಡ್ ಬಳಸಿ ಸರ್ಚ್ ಮಾಡಿದಾಗ, ಸೀಟ್ ಕವರ್‌ಗಳನ್ನು ಹರಿದು ಹಾಕಿದ ವ್ಯಕ್ತಿ ಡೆಹ್ರಾಡೂನ್‌ನ ತರಬೇತುದಾರ ಧೀರಜ್ ಅಗರ್ವಾಲ್ ಎಂದು ಇಂಡಿಯಾ ಟುಡೆ ಫ್ಯಾಕ್ಟ್‌ಚೆಕ್ ವರದಿಯಲ್ಲಿ ತಿಳಿಸಲಾಗಿದೆ. ಆತ ಮುಸಲ್ಮಾನನೂ ಅಲ್ಲ, ಟೈರ್ ಪಂಕ್ಚರ್ ಹಾಕುವ ಅಂಗಡಿಯನ್ನು ನಡೆಸುತ್ತಿಲ್ಲ ಎಂದು ವಿವರಿಸಿದೆ.

ವೈರಲ್ ವಿಡಿಯೋದಲ್ಲಿ ಹಾನಿಗೊಳಗಾಗುವ ಬೈಕ್‌ಗಳ ನಂಬರ್ ಪ್ಲೇಟ್‌ನಲ್ಲಿ “UK” ಎಂದು ಪ್ರಾರಂಭವಾಗುವ ನೋಂದಣಿ ಸಂಖ್ಯೆಗಳು ಕಂಡುಬಂದಿದ್ದು, ಈ ಮಾಹಿತಿ ಆಧರಿಸಿ ಸರ್ಚ್ ಮಾಡಿದಾಗ ಈ ವಿಡಿಯೋ ಉತ್ತರಾಖಂಡದದ್ದು ಎಂದು ತಿಳಿದುಬಂದಿದೆ.

ಮುಸ್ಲಿಂ ವ್ಯಾಪಾರಿಗಳು ಹೆಚ್ಚಿನ ಲಾಭದ ಆಸೆಗೆ ಬಿದ್ದು ಸೀಟ್ ಕವರ್‌ಗಳನ್ನು ಹಾನಿಗೊಳಿಸಲಾಗುತ್ತಿದೆ ಎಂಬುದು ಸುಳ್ಳು.
ಈ ವೀಡಿಯೋ ಡೆಹ್ರಾಡೂನ್‌ನ ನೆಹರುಗ್ರಾಮ್‌ನಿಂದ ಎಂದು ಹೇಳಿಕೊಳ್ಳುವ ಪೋಸ್ಟ್ ಲಭ್ಯವಾಗಿದೆ. ಇದನ್ನು ಬಳಸಿಕೊಂಡು, ನಾವು Google ಮ್ಯಾಪ್‌ನಲ್ಲಿ ಸ್ಥಳವನ್ನು ಕಂಡುಹಿಡಿದಿದ್ದು, ವೈರಲ್ ವಿಡಿಯೋದಲ್ಲಿ ಕಂಡುಬರುವ ಬೂದು ಬಣ್ಣದ ಶಟರ್, ಮೂರು ಕೆಂಪು ಮೆಟ್ಟಿಲುಗಳು ಮತ್ತು ಕಿತ್ತಳೆ-ಬೂದು ಪಿಲ್ಲರ್ ಗಳನ್ನು ಗೂಗಲ್ ಮ್ಯಾಪ್‌ನಲ್ಲಿ ನೋಡಬಹುದು.

ಡೆಹ್ರಾಡೂನ್‌ನ ನೆಹರುಗ್ರಾಮ್‌ನಲ್ಲಿ ಈ ಘಟನೆ ನಡೆದಿರುವುದನ್ನು ರಾಯ್‌ಪುರ ಪೊಲೀಸ್ ಠಾಣೆಯ ಉಸ್ತುವಾರಿ ಪ್ರದೀಪ್ ನೇಗಿ ಅವರು ಇಂಡಿಯಾ ಟುಡೇ ಫ್ಯಾಕ್ಟ್ ಚೆಕ್‌ಗೆ ಖಚಿತಪಡಿಸಿದ್ದಾರೆ.
ಧೀರಜ್ ಏನು ಹೇಳಿದ್ದಾರೆ ಕೇಳಿ ?
ಘಟನೆ ಸಂಬಂಧ ಹೆಚ್ಚಿನ ಮಾಹಿತಿಗಾಗಿ ವಿಡಿಯೋದಲ್ಲಿರುವ ವ್ಯಕ್ತಿ ಧೀರಜ್ ಅಗರ್ವಾಲ್ ಅವರನ್ನು ಸಂಪರ್ಕಿಸಿದ್ದು, ಅವರು ಡೆಹ್ರಾಡೂನ್‌ನಲ್ಲಿ ಕೋಚಿಂಗ್ ಸೆಂಟರ್ ನಡೆಸುತ್ತಿದ್ದಾರೆ ಮತ್ತು ಈ ಘಟನೆ ಆಗಸ್ಟ್ 5, 2024 ರಂದು ಸಂಭವಿಸಿದೆ ಎಂದು ಅವರು ಇಂಡಿಯಾ ಟುಡೇ ಫ್ಯಾಕ್ಟ್ ಚೆಕ್‌ಗೆ ತಿಳಿಸಿದ್ದಾರೆ.
ಧೀರಜ್ ಹೇಳಿಕೆಯ ಪ್ರಕಾರ, “ಡೆಹ್ರಾಡೂನ್‌ನ ನೆಹರುಗ್ರಾಮ್‌ನಲ್ಲಿರುವ ನನ್ನ ಕೋಚಿಂಗ್ ಸೆಂಟರ್ ಬಳಿ ಸಾರ್ವಜನಿಕ ಪಾರ್ಕಿಂಗ್ ಪ್ರದೇಶವಿದೆ. ಕೆಲವು ಬೇಜವಬ್ದಾರಿ ಜನರು ಇಡೀ ದಿನ ಈ ಪಾರ್ಕಿಂಗ್ ಪ್ರದೇಶದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ ಕಣ್ಮರೆಯಾಗುತ್ತಿದ್ದರು. ಹತ್ತಿರದ ಅಂಗಡಿಗಳ ಮಾಲೀಕರು ಇಡೀ ದಿನ ಪಾರ್ಕಿಂಗ್ ಸ್ಥಳವನ್ನು ಆಕ್ರಮಿಸಬೇಡಿ ಎಂದು ಕೇಳಿಕೊಳ್ಳುತ್ತಿದ್ದರು ಅದಕ್ಕೆ ಸ್ವಲ್ಪವೂ ಮನ್ನಣೆ ನೀಡುತ್ತಿರಲಿಲ್ಲ, ಅವರಿಗೆ ಪಾಠ ಕಲಿಸಲು ಕೆಲ ವಾಹನಗಳ ಸೀಟ್ ಕವರ್ ಗಳನ್ನು ಹಾಳು ಮಾಡಿದೆವು. ಆದರೆ, ನಾವು ಇದನ್ನು ಮಾಡುವುದನ್ನು ಯಾರೋ ಚಿತ್ರೀಕರಿಸಿದ್ದಾರೆ ಮತ್ತು ವಿಡಿಯೋ ವೈರಲ್ ಆಗಿದೆ. ಪೊಲೀಸರು ನನಗೆ ಕೌನ್ಸೆಲಿಂಗ್ ಮಾಡಿ ದಂಡವನ್ನೂ ವಿಧಿಸಿದ್ದಾರೆ. ಆದರೂ ಈ ವಿಡಿಯೋವನ್ನು ಹೀಗೆ ತಪ್ಪುದಾರಿಗೆಳೆಯುವ ರೀತಿಯಲ್ಲಿ ಮತ್ತೆ ಹಂಚಿಕೊಳ್ಳುತ್ತಿರುವುದು ದುಃಖಕರವಾಗಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಧೀರಜ್ ಅವರು ನಮಗೆ ವೀಡಿಯೊ ಸಂದೇಶವನ್ನು ಸಹ ಕಳುಹಿಸಿದ್ದಾರೆ, ಅದನ್ನು ಕೆಳಗೆ ನೋಡಬಹುದು.
ವಿಡಿಯೋದ ಕೊನೆಯ ಭಾಗದಲ್ಲಿ ಟೈರ್‌ಗಳು ಪಂಕ್ಚರ್ ಮಾಡುತ್ತಿರುವ ವ್ಯಕ್ತಿ ಧೀರಜ್ ಅಲ್ಲ. ಅದರಲ್ಲಿರುವ ವ್ಯಕ್ತಿ ಯಾರು ಎಂಬ ಮಾಹಿತಿ ಲಭ್ಯವಾಗಿಲ್ಲ. ಆದರೆ ಈ ವಿಡಿಯೋದಲ್ಲಿ ಇರುವುದು ನಾನಲ್ಲ ಎಂದು ಧೀರಜ್ ಇಂಡಿಯಾ ಟುಡೇ ಫ್ಯಾಕ್ಟ್ ಚೆಕ್ ಗೆ ತಿಳಿಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದದರೆ, ಡೆಹ್ರಾಡೂನ್ ಮೂಲದ ಶಿಕ್ಷಕ ಧೀರಜ್ ಅಗರ್ವಾಲ್ ಪಾರ್ಕಿಂಗ್ ಕಿರಿ ಕಿರಿಯಿಂದಾಗಿ ಬೇಸತ್ತು ಬೈಕ್‌ಗಳ ಸೀಟ್‌ಗಳನ್ನು ಹಾನಿಗೊಳಿಸಿದ ಘಟನೆಯನ್ನು ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಪಂಕ್ಚರ್ ಅಂಗಡಿಗೆ ವ್ಯಾಪಾರ ಆಗಲೆಂದು ಹೀಗೆ ಮಾಡಿದ್ದಾನೆ ಎಂದು ಸುಳ್ಳು ಮತ್ತು ಕೋಮು ನಿರೂಪಣೆಯೊಂದಿಗೆ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ

