FACT CHECK | ಅಣ್ಣಾಮಲೈ ಚಿತ್ರಕ್ಕೆ ನಟ ವಿಜಯ್ ಹಾರ ಹಾಕಿದ್ರಾ?

ಅಣ್ಣಾ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಖಂಡಿಸಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ  ಪ್ರತಿಭಟನೆ ನಡೆಸಿದರು. ಸ್ವತಃ ಚಾಟಿಯಲ್ಲಿ ಹೊಡೆದುಕೊಳ್ಳುವ ಮೂಲಕ ಪ್ರತಿಭಟನೆ ನಡೆಸಿದ ಅಣ್ಣಾಮಲೈ, ಡಿಎಂಕೆ ಸರ್ಕಾರ ಬೀಳುವವರೆಗೂ ಶೂ ಧರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು. ಈ ಎಲ್ಲಾ ವಿದ್ಯಮಾನಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿತ್ತು.

ಇದರ ಮಧ್ಯೆ ನಟ ಮತ್ತು ತಮಿಳಕ ವೆಟ್ರಿ ಕಜಕಂ ಪಕ್ಷದ (ಟಿವಿಕೆ) ಅಧ್ಯಕ್ಷ ವಿಜಯ್, ಅಣ್ಣಾಮಲೈ ಅವರನ್ನು ಅಣಕಿಸುತ್ತಿರುವ ಚಿತ್ರವೊಂದು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅಣ್ಣಾಮಲೈ ಅವರ ಪ್ರತಿಭಟನಾ ಚಿತ್ರಕ್ಕೆ ವಿಜಯ್ ಮಾಲೆ ಹಾಕಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.  ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ನಟ ವಿಜಯ್ ಅವರ ಚಿತ್ರವನ್ನು ಹಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿರುವುದು ಲಭ್ಯವಾಗಿದೆ. ನಟ ವಿಜಯ್ ಹೂವಿನ ಮಾಲೆ ಹಾಕುತ್ತಿರುವ ಚಿತ್ರ ಅಣ್ಣಾಮಲೈ ಅವರ ಫೋಟೊಗೆ ಅಲ್ಲ. ಬ್ರಿಟಿಷರ ವಿರುದ್ಧ ಹೋರಾಡಿದ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ವೇಲು ನಾಚಿಯಾರ್. ರಾಣಿ ವೋಲು ನಾಚಿಯಾರ್ ಅವರಿಗೆ ನಟ ವಿಜಯ್ ಹೂವಿನ ಮಾಲೆ ಹಾಕಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ವಿವದಿಸಲಾಗಿದೆ.

 

View this post on Instagram

 

A post shared by Ramu Ramu (@ramuramu623)

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಗ್ರೂಪ್‌ನ ತಮಿಳು ಪ್ರಕಟಣೆಯಾದ ದಿನಮಣಿ ಕೂಡ ಚಿತ್ರವನ್ನು ಹಂಚಿಕೊಂಡಿದ್ದಾರೆ. ವಿಜಯ್  ಅವರು ಪಣಯೂರಿನಲ್ಲಿರುವ ತಮಿಳಕ ವೆಟ್ರಿ ಕಳಗಂ ಕಚೇರಿಯಲ್ಲಿ ನಾಚಿಯಾರ್ ಅವರಿಗೆ ನಮನ ಸಲ್ಲಿಸಿದರು. ತಮಿಳಕಾ ವೆಟ್ರಿ ಕಳಗಂ ಅವರು ಅಧಿಕೃತ ಎಕ್ಸ್ ಪೋಸ್ಟ್‌ನಲ್ಲಿ ಹಂಚಿಕೊಂಡ ಫೋಟೋವನ್ನು ಇಲ್ಲಿ ನೀವು ನೋಡಬಹುದು.

ನಟ ವಿಜಯ್ ಹಾರ ಹಾಕಿರುವುದು ರಾಣಿ ವೇಲುನಾಚಿಯಾರ್ ಅವರ ಚಿತ್ರಕ್ಕೆ ಹೊರತು ಅಣ್ಣಾಮಲೈ ಚಿತ್ರಕ್ಕಲ್ಲ ಎಂಬುದು ಸ್ಪಷ್ಟವಾಗಿದೆ. ಆದರೆ, ಅಣ್ಣಾಮಲೈ ಅವರ ಮುಷ್ಕರಕ್ಕೆ ವಿಜಯ್ ಪ್ರತಿಕ್ರಿಯಿಸಿದ್ದಾರೆಯೇ ಎಂದು ನಾವು ಪರಿಶೀಲಿಸಿದ್ದೇವೆ. ಅಣ್ಣಾ ವಿಶ್ವವಿದ್ಯಾನಿಲಯದಲ್ಲಿ ನಡೆದ ಲೈಂಗಿಕ ಕಿರುಕುಳ ಘಟನೆಯ ವಿರುದ್ಧ ಕಠಿಣ ಕ್ರಮಕ್ಕೆ ವಿಜಯ್ ಒತ್ತಾಯಿಸಿದ್ದಾರೆ ಎಂಬ ವರದಿಗಳಿವೆ. ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಆದಷ್ಟು ಬೇಗ ಕ್ರಮ ಕೈಗೊಳ್ಳುವಂತೆ ಹಾಗೂ ಅತಿಜೀವಿತಾ ಸಂಸ್ಥೆಗೆ ಬೆಂಬಲ ನೀಡಿ ಶಾಲೆಗಳನ್ನು ಇನ್ನಷ್ಟು ಸುಭದ್ರಗೊಳಿಸುವಂತೆ ಡಿಎಂಕೆ ಸರ್ಕಾರವನ್ನು ಕೋರಿರುವುದು ಸುದ್ದಿಯಲ್ಲಿದೆ. ಆದರೆ ವಿಜಯ್ ಅಣ್ಣಾಮಲೈ ಅವರ ಹೋರಾಟದ ಶೈಲಿಯನ್ನು ಅಣಕಿಸಿದ ವರದಿಗಳು ಕಂಡು ಬಂದಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ತಮಿಳುನಾಡಿನ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ವೇಲು ನಾಚಿಯಾರ್ ಅವರ ಸ್ಮರಣಾರ್ಥ ಅವರ ಭಾವಚಿತರಕ್ಕೆ ನಟ ವಿಜಯ್ ಗೌರವ ಸೂಚಕವಾಗಿ ಹಾರ ಹಾಕಿರುವ ಪೋಟೊನ್ನು ಎಡಿಟ್‌ ಮಾಡಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಅವರ ಚಿತ್ರಕ್ಕೆ ಹಾರ ಹಾಕಿದ್ದಾರೆ ಎಂದು ವ್ಯಂಗ್ಯ ಮಾಡಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಅಮೇರಿಕಾದಲ್ಲಿ ಹೊಸ ವರ್ಷ ಆಚರಿಸುತ್ತಿದ್ದವರ ಮೇಲೆ ಟ್ರಕ್ ಹರಿಸಿದ ವ್ಯಕ್ತಿ ‘ಜೈ ಶ್ರೀರಾಮ್’ ಘೋಷಣೆ ಕೂಗಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights