FACT CHECK | ದೆಹಲಿಯಲ್ಲಿ BJP ಅಧಿಕಾರಕ್ಕೆ ಬರುತ್ತಿದಂತೆ ಹಿಂದೂಗಳ ಅಂಗಡಿಗಳನ್ನು ಗುರುತು ಹಾಕಲಾಗುತ್ತಿದೆ ಎಂಬುದು ನಿಜವೇ?

ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 27 ವರ್ಷಗಳ ಬಳಿಕ ಬಿಜೆಪಿ ಗೆಲುವು ಸಾಧಿಸಿದ್ದು, ಆಮ್ ಆದ್ಮಿ ಪಾರ್ಟ್ ಹೀನಾಯ ಸೋಲು ಕಂಡಿದೆ. ಈ ಹಿನ್ನಲೆಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದು ವೈರಲ್ ಆಗುತ್ತಿದೆ.

ಫೇಸ್​ಬುಕ್ ಬಳಕೆದಾರರೊಬ್ಬರು ಫೆಬ್ರವರಿ 10, 2025 ರಂದು ಈ ವೀಡಿಯೊವನ್ನು ಹಂಚಿಕೊಂಡು, ‘‘ಗೆದ್ದು ಇನ್ನು ಒಂದು ದಿನ ಆಗಲಿಲ್ಲ ಆಗಲೇ ಅಖಾಡಕ್ಕಿಳಿದ ಪರ್ವತ ಗಂಜ್ ನ ಬಿಜೆಪಿ ಶಾಸಕ ರವೀಂದ್ರ_ಸಿಂಗ್. ನೀವು ವ್ಯಾಪಾರ ಮಾಡಿಕೊಳ್ಳಿ ಆದರೆ ನಿಮ್ಮ ಗುರುತನ್ನು ಅಂಗಡಿ ಮುಂದೆ ಹಾಕಿ ಎಂದು ಬಾಂಧವರಿಗೆ ವಾರ್ನಿಂಗ್’’ ಎಂದು ಬರೆದುಕೊಂಡಿದ್ದಾರೆ. (Archive)

ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.

ಈ ವಿಡಿಯೋದಲ್ಲಿ, ರವೀಂದ್ರ ಸಿಂಗ್ ಅವರು ಬೀದಿ ಬದಿ ವ್ಯಾಪಾರಿ ಅಂಗಡಿಗಳ ಬಳಿ ಹೆಸರು ಮತ್ತು ಧರ್ಮವನ್ನು ಕೇಳುತ್ತಿರುವುದು ಕಂಡುಬರುತ್ತದೆ. ಜೊತೆಗೆ ಒಂದು ಕೇಸರಿ ಧ್ವಜವನ್ನು ಅಂಗಡಿಯಲ್ಲಿ ಇಡುವುದನ್ನು ಕಾಣಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್​ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಡಿಸೆಂಬರ್ 8, 2024 ರಂದು jist.news ಎಂಬ ಇನ್‌ಸ್ಟಾಗ್ರಾಮ್ ಪುಟದಲ್ಲಿ ಇದೇ ವೈರಲ್ ರೀತಿಯ ವಿಡಿಯೋ ಲಭ್ಯವಾಗಿದೆ. “ದೆಹಲಿಯಲ್ಲಿ ಹಿಂದೂ ತರಕಾರಿ ಮಾರಾಟಗಾರರ ಬಂಡಿಗಳ ಮೇಲೆ ಕೇಸರಿ ಧ್ವಜಗಳನ್ನು ಇಡುವ ಮೂಲಕ ಬಿಜೆಪಿ ಕೌನ್ಸಿಲರ್ ರವೀಂದರ್ ಸಿಂಗ್ ನೇಗಿ ವಿವಾದವನ್ನು ಹುಟ್ಟುಹಾಕಿದ್ದಾರೆ” ಎಂಬ ಶೀರ್ಷಿಕೆಯನ್ನು ನೀಡಲಾಗಿದೆ.

 

View this post on Instagram

 

A post shared by Jist (@jist.news)

ಇದೇ ವೇಳೆ The Observer Post ಕೂಡ ಡಿಸೆಂಬರ್ 6, 2024 ರಂದು ಇದೇ ವೀಡಿಯೊವನ್ನು ಹಂಚಿಕೊಂಡಿದ್ದು, ದೆಹಲಿಯ ವಿನೋದ್ ನಗರದಿಂದ ಸೆರೆಹಿಡಿಯಲಾಗಿದೆ ಎಂದು ಬರೆಯಲಾಗಿದೆ. ‘‘ಡಿಸೆಂಬರ್ 3 ರಂದು ದೆಹಲಿಯ ವಿನೋದ್ ನಗರದಲ್ಲಿ, ಬಿಜೆಪಿ ಕೌನ್ಸಿಲರ್ ರವೀಂದರ್ ಸಿಂಗ್ ನೇಗಿ ಅವರು ಮುಸ್ಲಿಂ ಪನೀರ್ ಮಾರಾಟಗಾರನಿಗೆ ತಮ್ಮ ಹೆಸರನ್ನು ಪ್ರದರ್ಶಿಸುವುದಾಗಿ ಅಥವಾ ಅವರ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಬೆದರಿಕೆ ಹಾಕಿದರು. ನೇಗಿ ತರಕಾರಿ ಮಾರಾಟಗಾರರ ಹೆಸರುಗಳು ಮತ್ತು ಧರ್ಮಗಳ ಬಗ್ಗೆ ಪ್ರಶ್ನಿಸಿದ್ದಾರೆ. ಹಿಂದೂ ಮಾರಾಟಗಾರರ ಅಂಗಡಿಗಳ ಮೇಲೆ ಕೇಸರಿ ಧ್ವಜಗಳನ್ನು ಸ್ಥಾಪಿಸಿದರು’’ ಎಂದು ಬರೆಯಲಾಗಿದೆ.

ಈ ಮಾಹಿತಿಯ ಆಧಾರದ ಮೇಲೆ ನಾವು ಗೂಗಲ್​ನಲ್ಲಿ ‘ravinder singh negi vinod nagar saffron flag’ ಎಂಬ ಕೀವರ್ಡ್ ಬಳಸಿ ಸರ್ಚ್ ಮಾಡಿದಾಗ, ವೈರಲ್ ವೀಡಿಯೊಗೆ ಸಂಬಂಧಿಸಿದಂತೆ ದಿ ಟ್ರಿಬ್ಯೂನ್ ಡಿಸೆಂಬರ್ 9, 2024 ರಂದು ಪ್ರಕಟಿಸಿದ ಸುದ್ದಿ ಲಭ್ಯವಾಗಿದೆ. ‘ಬಿಜೆಪಿ ಕೌನ್ಸಿಲರ್ ಮುಸ್ಲಿಂ ಮಾರಾಟಗಾರರನ್ನು ಭಯಭೀತಗೊಳಿಸುತ್ತಿದ್ದಾರೆ ಎಂದು ಸಿಪಿಎಂ ಆರೋಪಿಸಿದೆ’ ಎಂದು ಶೀರ್ಷಿಕೆ ನೀಡಲಾಗಿದೆ.

ಇದರಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ‘‘ನೇಗಿ ಅವರು ಬೀದಿ ವ್ಯಾಪಾರಿಗಳ ಬಳಿ ಹೆಸರುಗಳನ್ನು ಕೇಳಿ, ಮುಸ್ಲಿಂ ಮಾರಾಟಗಾರರಿಗೆ ಅವರ ಹೆಸರುಗಳನ್ನು ಪ್ರದರ್ಶಿಸಲು ಹೇಳುತ್ತಿದ್ದಾರೆ ಮತ್ತು ಹಿಂದೂಗಳೆಂದು ಹೇಳಿಕೊಳ್ಳುವ ಅಂಗಡಿಯವರಿಗೆ ಕೇಸರಿ ಧ್ವಜಗಳನ್ನು ವಿತರಿಸುತ್ತಿದ್ದಾರೆ. ದೆಹಲಿ ಪೊಲೀಸರೇ, ಕೋಮು ದ್ವೇಷ ಹರಡಿದ್ದಕ್ಕಾಗಿ ಈ ವ್ಯಕ್ತಿಯ ಮೇಲೆ ಏಕೆ ಆರೋಪ ಹೊರಿಸಿ ಬಂಧಿಸಲಾಗಿಲ್ಲ ಎಂದು ಸಿಪಿಎಂ ಆರೋಸಿದೆ’’ ಎಂದು ವರದಿ ಹೇಳುತ್ತದೆ.

ಸಿಪಿಎಂ ಡಿಸೆಂಬರ್ 8, 2024 ರಂದು ತನ್ನ ಅಧಿಕೃತ ಫೇಸ್‌ಬುಕ್ ಪುಟದ ಮೂಲಕ ಆರೋಪಗಳನ್ನು ಮಾಡಿರುವುದನ್ನು ನೀವು ಇಲ್ಲಿ ನೋಡಬಹುದು. ದೆಹಲಿ ಚುನಾವಣೆಗು ಮುನ್ನವೇ ಈ ವೀಡಿಯೊವನ್ನು ಹಂಚಿಕೊಂಡಿರುವುದು ಹಾಗೂ ಸುದ್ದಿ ಪ್ರಕಟ ಆಗಿರುವುದನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ,ರವೀಂದ್ರ ಸಿಂಗ್ ಅವರು ಬೀದಿ ಬದಿ ವ್ಯಾಪಾರಿ ಅಂಗಡಿಗಳ ಬಳಿ ಹೆಸರು ಮತ್ತು ಧರ್ಮವನ್ನು ಕೇಳುತ್ತಿರುವುದು ದೆಹಲಿ ವಿಧಾನ ಸಭಾ ಚುನಾವಣೆಯಲ್ಲಿ ಗೆದ್ದ ನಂತರದ್ದಲ್ಲ. ಈ ಘಟನೆ ದೆಹಲಿ ಚುನಾವಣೆಗೂ ಮೊದಲು ನಡೆದಿದ್ದು, ಈಗ ಇದನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ : ನ್ಯೂಸ್ ಮೀಟರ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ  ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಫ್ರಾನ್ಸ್ ಭೇಟಿಯ ವೇಳೆ ಟ್ಯಾಕ್ಸಿ ಬಳಸಿದ್ರಾ ಪ್ರಧಾನಿ ಮೋದಿ?


 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights