FACT CHECK | ಫ್ರಾನ್ಸ್ ಭೇಟಿಯ ವೇಳೆ ಟ್ಯಾಕ್ಸಿ ಬಳಸಿದ್ರಾ ಪ್ರಧಾನಿ ಮೋದಿ?
ಪ್ರಧಾನಿ ನರೇಂದ್ರ ಮೋದಿ ಅವರ ಫ್ರಾನ್ಸ್ ಭೇಟಿಯ ವೇಳೆ ಲೋಕಲ್ ಟ್ಯಾಕ್ಸಿಯಲ್ಲಿ ಓಡಾಟ ನಡೆಸಿದ್ದಾರೆ ಎಂಬ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
अरे फ्रांस वालो हमारे विषगुरू की इतनी बेईज्जती तो मत करो टैक्सी से ले कर नही जाना चाहिऐ था,,,,!! pic.twitter.com/AIW4pesoK6
— Shekhar Khare ( सेवानिवृत्त ) (@SKkhare11) February 13, 2025
@SKkhare11 ಎಂಬ ಎಕ್ಸ್ ಖಾತೆಯ ಬಳಕೆದಾರರು ಈ ಫೋಟೋವನ್ನು ಹಂಚಿಕೊಂಡು, “ಅರೆ ಫ್ರಾನ್ಸ್ನವರೇ, ನಮ್ಮ ವಿಶ್ವಗುರುಗಳಿಗೆ ಇಷ್ಟು ಅವಮಾನ ಮಾಡಬೇಡ., ಟ್ಯಾಕ್ಸಿಯಲ್ಲಿ ಕರೆದುಕೊಂಡು ಹೋಗಬಾರದಿತ್ತು” ಎಂದು ಬರೆದಿದ್ದಾರೆ.
मोदीलाई लिन अमेरिकीहरूले Taxi लिएर गएछन्। भारतियहरू हङ्गामा गरिरहेका छन्। @BhismaK62 @uttambajra78742 @Neupane1Binod pic.twitter.com/fZNyPWQVWG
— UKBhadrapur (@UmeshKoirala1) February 14, 2025
@UmeshKoirala1 ಎಂಬ ಇನ್ನೊಬ್ಬ ಟ್ವೀಟರ್ ಬಳಕೆದಾರರು, “ಅಮೆರಿಕದವರು ಮೋದಿಯವರನ್ನು ಕರೆದುಕೊಂಡು ಹೋಗಲು ಟ್ಯಾಕ್ಸಿ ತಂದಿದ್ದಾರೆ. ಭಾರತೀಯರು ಒಟ್ಟಾಗಿ ಇದನ್ನು ಮಾಡುತ್ತಿದ್ದಾರೆ” ಎಂದು ಬರೆದಿದ್ದಾರೆ.
ಪ್ರಧಾನಿ ಮೋದಿ ಇತ್ತೀಚೆಗೆ ಫ್ರಾನ್ಸ್ಗೆ ಭೇಟಿ ನೀಡಿದ್ದರು. ವೈರಲ್ ಆದ ಫೋಟೋದಲ್ಲಿ ಮೋದಿ ಟ್ಯಾಕ್ಸಿಯಿಂದ ಇಳಿಯುತ್ತಿರುವಂತೆ ತೋರಿಸಲಾಗಿದೆ. ಈ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ಇದು ವ್ಯಾಪಕವಾಗಿ ಹರಿದಾಡಿದೆ. ಕೆಲವು ನೆಟ್ಟಿಗರು ಈ ಫೋಟೋವನ್ನು ಹಂಚಿಕೊಂಡು ಫ್ರಾನ್ಸ್ನಲ್ಲಿ ಮೋದಿ ಅವರಿಗೆ ಟ್ಯಾಕ್ಸಿಯಲ್ಲಿ ಓಡಾಡುವಂತೆ ಮಾಡಲಾಗಿದೆ ಎಂದು ಬರೆದು ವ್ಯಂಗ್ಯ ಮಾಡಿದ್ದಾರೆ. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, 2021 ರ ಹಲವು ಹಳೆಯ ಪೋಸ್ಟ್ಗಳು ಲಭ್ಯವಾಗಿವೆ. ಇದರಿಂದ ಈ ಫೋಟೋ ಇತ್ತೀಚಿನದ್ದಲ್ಲ ಎಂದು ಸ್ಪಷ್ಟವಾಯಿತು. ಈ ಫೋಟೋ 2021 ರಿಂದಲೂ ಇಂಟರ್ನೆಟ್ನಲ್ಲಿ ಲಭ್ಯವಿದೆ.
Prime Minister Narendra Modi arrives at the Vatican City to meet Pope Francis pic.twitter.com/rWCNxl7mVI
— ANI (@ANI) October 30, 2021
ನಂತರ ANI ಯ ಒಂದು ಎಕ್ಸ್ ಪೋಸ್ಟ್ ಲಭ್ಯಾಗಿದ್ದು, ಈ ಪೋಸ್ಟ್ನಲ್ಲಿ, ಪ್ರಧಾನಿ ಮೋದಿ ವ್ಯಾಟಿಕನ್ ಸಿಟಿಯಲ್ಲಿ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿಯಾಗಲು ಹೋದಾಗ ತೆಗೆದ ಫೋಟೋ ಆಗಿದೆ. ಫೋಟೋದಲ್ಲಿ ಮೋದಿ FD330MP ನಂಬರ್ನ ಕಾರಿನಿಂದ ಇಳಿಯುತ್ತಿರುವುದನ್ನು ಕಾಣಬಹುದು. ವೈರಲ್ ಆದ ಫೋಟೋ ಮತ್ತು ANI ಪೋಸ್ಟ್ನ ಫೋಟೋ ಒಂದೇ ಆಗಿವೆ. ಆದರೆ ವೈರಲ್ ಆದ ಫೋಟೋದಲ್ಲಿ, ಕಾರಿನ ನಂಬರ್ ಪ್ಲೇಟ್ ಕೆಳಗೆ ಇರುವ ಸ್ಟಿಕ್ಕರ್ ಅನ್ನು ತೆಗೆದುಹಾಕಲಾಗಿತ್ತು.
ಪ್ರಧಾನಿ ಮೋದಿ ಫ್ರಾನ್ಸ್ನಲ್ಲಿ ಕಾರಿನಿಂದ ಇಳಿಯುತ್ತಿರುವ ಫೋಟೋ 2021 ರದ್ದಾಗಿದೆ. ಮೋದಿ ವ್ಯಾಟಿಕನ್ ಸಿಟಿಯಲ್ಲಿ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿಯಾಗಲು ಹೋದಾಗ ತೆಗೆದ ಫೋಟೋವಾಗಿದೆ. ಫೋಟೋವನ್ನು ಎಡಿಟ್ ಮಾಡಿ ಟ್ಯಾಕ್ಸಿ ಎಂದು ಸುಳ್ಳು ಸುದ್ದಿ ಹರಡಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಫ್ರಾನ್ಸ್ ಅಥವಾ ಅಮೆರಿಕದಲ್ಲಿ ಪ್ರಧಾನಿ ಮೋದಿಯವರು ಟ್ಯಾಕ್ಸಿಯಿಂದ ಇಳಿಯುತ್ತಿರುವ ಫೋಟೋ ಎಂಬುದು ಸಂಪೂರ್ಣ ಸುಳ್ಳು. ವೈರಲ್ ಆಗಿರುವ ಫೋಟೋವನ್ನು ಎಡಿಟ್ ಮಾಡಿ ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಟ್ರಂಪ್ಗೆ ಪ್ರಶ್ನೆ ಕೇಳಿದ ಭಾರತದ ಪತ್ರಕರ್ತನನ್ನು ಅಪಹಾಸ್ಯ ಮಾಡಿದ ಅಮೆರಿಕದ ಪತ್ರಕರ್ತೆ ಎನ್ನುವ ವಿಡಿಯೋದ ಅಸಲೀಯತ್ತೇನು ಗೊತ್ತೇ?

