FACT CHECK | ನಟಿಯೊಬ್ಬರ ವಿಡಿಯೋವನ್ನು ದೆಹಲಿಯ ನೂತನ ಮುಖ್ಯಮಂತ್ರಿ ರೇಖಾ ಗುಪ್ತಾ ಎಂದು ತಪ್ಪಾಗಿ ಹಂಚಿಕೆ
19 ಫೆಬ್ರವರಿ 2025 ರಂದು, ಬಿಜೆಪಿ ರೇಖಾ ಗುಪ್ತಾ ಅವರನ್ನು ದೆಹಲಿಯ ಹೊಸ ಮುಖ್ಯಮಂತ್ರಿಯಾಗಿ ಘೋಷಿಸಿತು. 27 ವರ್ಷಗಳ ನಂತರ ರಾಜಧಾನಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಮರಳಿದೆ. ಶಾಲಿಮಾರ್ ಬಾಗ್‌ನಿಂದ ಮೊದಲ ಬಾರಿಗೆ ಶಾಸಕರಾದ ಗುಪ್ತಾ ಅವರನ್ನು ಹೊಸದಾಗಿ ಆಯ್ಕೆಯಾದ ಶಾಸಕರ ಸಭೆಯಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆ ಮಾಡಲಾಯಿತು. ಅವರು 20 ಫೆಬ್ರವರಿ 2025 ರಂದು ರಾಮಲೀಲಾ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಈ ಸಂದರ್ಭದಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು, ಇದರಲ್ಲಿ ಮಹಿಳೆಯೊಬ್ಬರು ಪ್ರಾಚೀನ ಕಾಲದ ಯೋಧನಂತೆ ಯುದ್ಧ ತಾಲಿಮು ನಡೆಸುತ್ತಿರುವುದು ಕಂಡು ಬಂದಿದೆ. ಈ ಮಹಿಳೆಯಯನ್ನು ರೇಖಾ ಗುಪ್ತಾ ಎಂದು ಹಂಚಿಕೊಳ್ಳಲಾಗುತ್ತಿದೆ.
Her name is Rekha Gupta, and today she was sworn in as the new Chief Minister of Delhi pic.twitter.com/gDDBIuNR5I
— VPR ABIMANI Rama chandhra (@VemireddyVpr) February 20, 2025
ವೈರಲ್ ವಿಡಿಯೋದಲ್ಲಿ ನದಿಯ ದಡದಲ್ಲಿ ಪೂಜೆ ಸಲ್ಲಿಸುತ್ತಿರುವುದು, ನಂತರ ವ್ಯಾಯಾಮ ಮಾಡುವುದು, ರಂಗೋಲಿ ಬಿಡಿಸುವುದು ಮತ್ತು ಕೌಶಲ್ಯದಿಂದ ಕತ್ತಿ ಮತ್ತು ಇತರೇ ಆಯುಧ ಹಿಡಿಯುವುದನ್ನು ತೋರಿಸಲಾಗಿದೆ. ಈ ವೀಡಿಯೊವನ್ನು ದೆಹಲಿಯ ಹೊಸದಾಗಿ ಆಯ್ಕೆಯಾದ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಎಂದು ಹಂಚಿಕೊಂಡ ನಂತರ ಸಾಕಷ್ಟು ಮಂದಿ ಸಾಮಾಜಿಕ ಜಾಲತಾಣದ ಬಳಕೆದಾರರು, ಬಜೆಪಿ ಬೆಂಬಲಿಗರು, ಹಿಂದುತ್ವವಾದಿಗಳು ಕೂಡ ಇದೇ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿವೇ ಎಂದು ಪರಿಶೀಲಿಸೋಣ
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಎಜಸ್‌ನಲ್ಲಿ ಸರ್ಚ್ ಮಾಡಿದಾಗ, 19 ಫೆಬ್ರವರಿ , 2025 ರ ಮೂಲ ಪೋಸ್ಟ್ ಮರಾಠಿ ನಟಿ ಪಾಯಲ್ ಜಾಧವ್ ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಲಭ್ಯವಾಗಿದೆ. ಈ ಪೋಸ್ಟ್‌ನ ಶೀರ್ಷಿಕೆಯಲ್ಲಿ, ಶಿವಾಜಿ ಜಯಂತಿಯ ಸ್ಮರಣಾರ್ಥವಾಗಿ ವಿಡಿಯೋದಲ್ಲಿ ಪ್ರದರ್ಶನ ನೀಡಿದ್ದೇನೆ ಎಂದು ಬರೆದುಕೊಂಡಿರುವುದು ಕಂಡು ಬಂದಿದೆ.

ಜಾಧವ್ ಅವರ ಇನ್‌ಸ್ಟಾಗ್ರಾಮ್ ಖಾತೆಯನ್ನು ಪರಿಶೀಲಿಸಿದಾಗ, ಮರಾಠಿ ನಾಟಕ ಅಬೀರ್ ಗುಲಾಲ್ ಸೇರಿದಂತೆ ವಿವಿಧ ನಾಟಕಗಳಲ್ಲಿ ಅವರು ಅಭಿನಯಿಸಿದ ಹಲವಾರು ವೀಡಿಯೊಗಳನ್ನು ನಾವು ನೋಡಿದ್ದೇವೆ. ಟೈಮ್ಸ್ ಆಫ್ ಇಂಡಿಯಾ ಪ್ರಕಾರ, ಜಾಧವ್ ಅವರ ಇತ್ತೀಚಿನ ಚಿತ್ರಗಳಲ್ಲಿ ತ್ರೀ ಆಫ್ ಅಸ್ ಮತ್ತು ಬಾಪ್ಲೋಕ್ ಸೇರಿವೆ. IMDB ಅವರು ಪ್ಯಾರೀಸ್, ಗೋಲ್ ಮಾಲ್ ಮತ್ತು ಮನ್ವತ್ ಮರ್ಡರ್ಸ್ ಚಿತ್ರಗಳ ಪಾತ್ರವರ್ಗದ ಭಾಗವಾಗಿ ಪಟ್ಟಿ ಮಾಡಿದ್ದಾರೆ. ಇನ್ನು ನಾವು ಪಯಾಲ್ ಜಾಧವ್ ಮತ್ತು ರೇಖಾ ಗುಪ್ತಾ ಅವರ ಚಿತ್ರಗಳ ಹೋಲಿಕೆ ಮಾಡಿದ್ದೇವೆ ಈ ವೇಳೆ ವೈರಲ್ ವಿಡಿಯೋದಲ್ಲಿರುವುದು ದೆಹಲಿ ಸಿಎಂ ಅಲ್ಲ ಎಂಬುದು ಕೂಡ ನಮಗೆ ಖಚಿತವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ನೂತನ ದೆಹಲಿ ಸಿಎಂ ರೇಖಾ ಗುಪ್ತಾ ಅವರು ಈ ಹಿಂದೆ ಯೋಧನಂತೆ ಕತ್ತಿ ಹಿಡಿದು ತಾಲೀಮು ನಡೆಸಿದ್ದರು ಎಂದು ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಸುಳ್ಳು ನಿರೂಪಣೆಯಿಂದ ಕೂಡಿದೆ. ವೈರಲ್ ವಿಡಿಯೋದಲ್ಲಿ ಇರುವವರು ಮರಾಠಿ ನಟಿ ಪಾಯಲ್ ಜಾಧವ್, ಇವರು ಛತ್ರಪತಿ ಶಿವಾಜಿ ಜನ್ಮ ದಿನದ ಸಲುವಾಗಿ ವಿಡಿಯೋ ಮಾಡಿ ಹಂಚಿಕೊಂಡಿದ್ದರು. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | AAP ಶಾಸಕನನ್ನು ಬಂಧಿಸಲಾಗಿದೆ ಎಂದು ಹಳೆಯ ವಿಡಿಯೋ ಹಂಚಿಕೆ

