FACT CHECK | ಕೇರಳ CPI(M) ನಾಯಕ ಮಾಹಾಕುಂಭ ಮೇಳಕ್ಕೆ ಹೋಗಿ ಪುಣ್ಯ ಸ್ನಾನ ಮಾಡಿದ್ದಾರೆ ಎಂದು ಸುಳ್ಳು ಪೋಸ್ಟ್‌ ಹಂಚಿಕೆ

ಮಲಯಾಳಂನ ಮುಖ್ಯ ವಾಹಿನಿ ಮಾಧ್ಯಮವಾದ 24 ನ್ಯೂಸ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡ ಅನೇಕ ಸಾಮಾಜಿಕ ಮಾಧ್ಯಮಗಳ ಬಳಕೆದಾರರು, ಕೇರಳದ ಹಿರಿಯ CPI(M) ನಾಯಕ ಮತ್ತು ಮಾಜಿ ಸಚಿವ ಜಿ. ಸುಧಾಕರನ್ ತಮ್ಮ ಪತ್ನಿಯೊಂದಿಗೆ ಮಹಾ ಕುಂಭಮೇಳಕ್ಕೆ ಭೇಟಿ ನೀಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಪಕ್ಷದ ಆದರ್ಶಗಳನ್ನು ಗಾಳಿಗೆ ತೂರಿ ಹೀಗೆ ಮಹಾಕುಂಭ ಮೇಳಕ್ಕೆ ಹೋಗಿರುವುದನ್ನು ಟೀಕಿಸಿ CPI(M) ಪಕ್ಷವನ್ನು ಟೀಕಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ ಮಾಡಲಾಗುತ್ತಿದೆ.

ಇದೇ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಕೇರಳ CPI(M) ಪಕ್ಷದ ವಿರುದ್ದ ಪೋಸ್ಟ್‌ಅನ್ನು ಹಂಚಿಕೊಳ್ಳುತ್ತಿದ್ದಾರೆ. (ಪೋಸ್ಟ್‌ನ ಗೂಗಲ್ ಅನುವಾದಿತ ಚಿತ್ರ) ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಇರುವ 24 ನ್ಯೂಸ್‌ನ ಲೋಗೋದ ಹಿನ್ನಲೆಯಲ್ಲಿ ಮಲೆಯಾಳಂನ 24 ನ್ಯೂಸ್‌ನ ಅಧಿಕೃತ ಸೋಶಿಯಲ್ ಮೀಡಿಯಾ ಹ್ಯಾಂಡಲ್‌ಗಳನ್ನು ಸರ್ಚ್ ಮಾಡಿದಾಗ, ಈ ಸಂಬಂಧ ಯಾವುದೇ ಪೋಸ್ಟ್‌ಗಳು ಅಧಿಕೃತ ಹ್ಯಾಂಡಲ್‌ಗಳಲ್ಲಿ ಕಂಡುಬಂದಿಲ್ಲ. ನಂತರ, CPI(M) ಅಧಿಕೃತ ಸಾಮಾಜಿಕ ಮಾಧ್ಯಮವನ್ನು ಪರಿಶೀಲಿಸಿತು. ಇದು ಯಾವುದೇ ಸಕಾರಾತ್ಮಕ ಫಲಿತಾಂಶವನ್ನು ನೀಡಲಿಲ್ಲ.


ಮತ್ತಷ್ಟು ಮಾಹಿತಿಗಾಗಿ ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 2020 ರ ಓಣಂ ಹಬ್ಬದ ಶುಭಾಶಯಗಳನ್ನು ಕೋರುತ್ತಾ, ಮೂಲ ಫೋಟೋವನ್ನು ನಾಯಕ ತನ್ನ ಅಧಿಕೃತ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ಕಂಡುಬಂದಿದೆ. ‘ಎಲ್ಲರಿಗೂ ಹೃತ್ಪೂರ್ವಕ ತಿರುಓಣ ಓಣಂ ದಿನದ ಶುಭಾಶಯಗಳು..’ ಎಂಬ ಶೀರ್ಷಿಕೆಯೊಂದಿಗೆ, ನಾಯಕ ತನ್ನ ಪತ್ನಿಯೊಂದಿಗೆ ಆಗಸ್ಟ್ 31, 2020 ರಂದು ಚಿತ್ರವನ್ನು ಪೋಸ್ಟ್ ಮಾಡಿರುವುದು ಲಭ್ಯವಾಗಿದೆ.

ಜಿ ಸುಧಾಕರನ್ ರಾಜ್ಯದ ಹಿರಿಯ CPI(M) ಪಕ್ಷದ ನಾಯಕರಲ್ಲಿ ಒಬ್ಬರು. ಅವರು ಧರ್ಮ ಮತ್ತು ಸಾಮಾಜಿಕ ಅಭಿವೃದ್ಧಿಯ ಬಗ್ಗೆ ಪ್ರಗತಿಪರ ದೃಷ್ಟಿಕೋನಗಳಿಗೆ ಹೆಸರುವಾಸಿಯಾಗಿದ್ದಾರೆ. ಆಲಪ್ಪುಳ ಜಿಲ್ಲೆಯ ಟ್ರೇಡ್ ಯೂನಿಯನ್ ನಾಯಕರಾಗಿದ್ದ ಅವರು, ಮೊದಲ ಪಿಣರಾಯಿ ವಿಜಯನ್ ಸಂಪುಟದಲ್ಲಿ 25 ಮೇ 2016 ರಿಂದ 3 ಮೇ 2021 ರವರೆಗೆ ಲೋಕೋಪಯೋಗಿ ಸಚಿವರಾಗಿ ಸೇವೆ ಸಲ್ಲಿಸಿದರು.

ಬಹುತೇಕ ಎಡಪಕ್ಷದ ನಾಯಕರು ತಮ್ಮ ಸೈದ್ದಾಂತಿಕ ಬದ್ದತೆಯೊಂದಿಗೆ ಜೀವಿಸುವಂತವರು, ದೇವರ ಅಸ್ತಿತ್ವವನ್ನು ಪ್ರಶ್ನಿಸುವವರು ಅಲ್ಲದೆ ಮೌಢ್ಯ ಮತ್ತು ಕಂದಾಚಾರಗಳನ್ನು ವಿರೋಧಿಸುವವರಾಗಿರುತ್ತಾರೆ. ಅಂತವರು ಮಹಾ ಕುಂಭಮೇಳಕ್ಕೆ ಹೋಗಿ ಸ್ನಾನಕ್ಕೆ ಯೋಗ್ಯವಲ್ಲದ ನೀರಿನಲ್ಲಿ ಮುಳುಗಿ ಪುಣ್ಯ ಸ್ನಾನ ಮಾಡುತ್ತಾರೆ ಎಂದರೆ ನಂಬುವ ಮಾತಲ್ಲ. ಆದರೆ ಅವರುಗಳ ಬಗ್ಗೆ ಅಪಪ್ರಚಾರ ಮಾಡುವ ಉದ್ದೇಶದಿಂದ 2020ರ ಹಳೆಯ ಫೊಟೊವನ್ನು ಎಡಿಟ್‌ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಪೋಸ್ಟ್‌ಅನ್ನು ಹಂಚಿಕೊಂಡಿರುವುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಕೇರಳದ CPI(M) ನಾಯಕ ಮಹಾ ಕುಂಭಕ್ಕೆ ಭೇಟಿ ನೀಡಿದ್ದಾರೆ ಎಂದು 2020ರ ಹಳೆಯ ಫೋಟೊವನ್ನು ಮಲಯಾಳಂನ ಸುದ್ದಿ ವಾಹಿನಿ 24 ನ್ಯೂಸ್‌ನ ಟೆಂಪ್ಲೇಟ್ ಬಳಸಿ ಎಡಿಟ್‌ ಮಾಡಿ ತಪ್ಪಾಗಿ ಹಂಚಿಕೊಂಡಿರುವುದು ಸ್ಪಷ್ಟವಾಗಿದೆ. ಹಾಗಾಗಿ ಜಿ ಸುಧಾಕರನ್ ಅವರು ಮಹಾಕುಂಭ ಮೇಳಕ್ಕೆ ಹೋಗಿ ಪುಣ್ಯ ಸ್ನಾನ ಮಾಡಿದ್ದಾರೆ ಎಂಬುದು ಸುಳ್ಳು.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | BJP ಮುಖ್ಯಮಂತ್ರಿ ತಮ್ಮದೇ ಪಕ್ಷದ ವಿರುದ್ದ ಮಾತನಾಡಿದ್ದಾರೆ ಎನ್ನಲಾದ ವಿಡಿಯೋದ ಅಸಲೀಯತ್ತೇನು ಗೊತ್ತೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights