FACT CHECK | ವೈಟ್ ಹೌಸ್‌ನಲ್ಲಿ ಟ್ರಂಪ್‌ ಕೆನ್ನೆಗೆ ಹೊಡೆದ್ರಾ ಉಕ್ರೇನ್‌ನ ಅಧ್ಯಕ್ಷ ?

ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ಪ್ರಸಾರವಾಗುತ್ತಿದ್ದು, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಜೆಲೆನ್‌ಸ್ಕಿ ನಡುವೆ ವೈಟ್ ಹೌಸ್‌ನಲ್ಲಿ ಮಾತಿನ ಚಕಮಕಿ ನಡೆದಿದೆ ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

ಉಕ್ರೇನ್-ರಷ್ಯಾ ಯುದ್ಧ ಮತ್ತು ಅಮೆರಿಕದ ಸೇನಾ ನೆರವು ಕುರಿತಾಗಿ ಚರ್ಚೆ ನಡೆಯುವ ಸಂದರ್ಭದಲ್ಲಿ ಇಬ್ಬರು ನಾಯಕರ ನಡುವೆ ವಾಗ್ವಾದ ಉಂಟಾಗಿತ್ತು. ಇಬ್ಬರೂ ಒಬ್ಬರ ಮೇಲೆ ಒಬ್ಬರು ಕೈಕೈ ಮಿಲಾಯಿಸಿ ಹಲ್ಲೆ ಮಾಡಿದ್ದಾರೆ ಎಂದು ವಿಡಿಯೋ ಹಂಚಿಕೊಳ್ಳಲಾಗಿದೆ.


Meme×100 ಮತ್ತು Anonymous ಎಂಬ ಎಕ್ಸ್‌ ( ಟ್ವಿಟ್ಟರ್ ) ಖಾತೆಗಳಿಂದ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಜೆಲೆನ್‌ಸ್ಕಿ – ಟ್ರಂಪ್ ಗೆ ಪಂಚ್ ಮಾಡುವುದನ್ನು ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ ಜಗಳ ಆರಂಭವಾಗುತ್ತಿದ್ದಂತೆ ಟ್ರಂಪ್ ಅವರ ಮುಖದ ಚಲನೆಯಾಗುತ್ತಿದಂತೆ ಬದಲಾಗುತ್ತಿರುವುದನ್ನು ಕಾಣಬಹುದು. ಆದ್ದರಿಂದ, ಈ ವೀಡಿಯೊವನ್ನು ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಿರಬಹುದು ಎಂಬ ಅನುಮಾನ ಮೂಡುತ್ತದೆ.

ಹೆಚ್ಚಿನ ಮಾಹಿತಿಗಾಗಿ ಕೀವರ್ಡ್‌ಗಳನ್ನು ಬಳಸಿ ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ, ಎನ್‌ಡಿಟಿವಿ ಹಿರಿಯ ಪತ್ರಕರ್ತ ಉಮಾಶಂಕರ್ ಸಿಂಗ್ ಅವರ ಟ್ವೀಟ್ ಲಭ್ಯವಾಗಿದೆ. ವೈಟ್ ಹೌಸ್‌ನಲ್ಲಿ ಜೆಲೆನ್‌ಸ್ಕಿ ಮತ್ತು ಟ್ರಂಪ್ ನಡುವೆ ನಡೆದ 49 ನಿಮಿಷ 53 ಸೆಕೆಂಡುಗಳ ಸಂಪೂರ್ಣ ಸಂಭಾಷಣೆಯ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಇದರಲ್ಲಿ ಟ್ರಂಪ್ ಮತ್ತು ಜೆಲೆನ್‌ಸ್ಕಿ ಸುಮಾರು 35 ನಿಮಿಷಗಳ ಕಾಲ ಸಾಮಾನ್ಯವಾಗಿ ಮಾತನಾಡುತ್ತಾರೆ. ಆದರೆ, ಕೊನೆಯ 10 ನಿಮಿಷಗಳಲ್ಲಿ ತೀವ್ರ ವಾಗ್ವಾದ ನಡೆಯುತ್ತದೆ. ಆದರೆ, ವೀಡಿಯೊದಲ್ಲಿ ಎಲ್ಲಿಯೂ ಕೈಕೈ ಮಿಲಾಯಿಸುವುದು, ಹೊಡೆದಾಟ ನಡೆದಿರುವುದು ಕಾಣಿಸುವುದಿಲ್ಲಎಂದು ಸಜಗ್ ತಂಡ ವರದಿ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಟ್ರಂಪ್ ಮತ್ತು ಜೆಲೆನ್‌ಸ್ಕಿ ಅವರು ಕೈಕೈ ಮಿಲಾಯಿಸಿ ಜಗಳ ಮಾಡುವ ವಿಡಿಯೋ ಸುಳ್ಳು. ಎಐ ತಂತ್ರಜ್ಙಾನ ಬಳಸಿ ಮೂಲ ತಿರುಚಿರುವುದು ಎಂದು ದೃಢವಾಗಿದೆ. ಇಬ್ಬರು ನಾಯಕರ ನಡುವೆ ತೀವ್ರ ವಾಗ್ವಾದ ನಡೆದಿದೆಯಾದರೂ ಕೈ ಕೈ ಮಿಲಾಯಿಸಿಲ್ಲ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಶಿವರಾತ್ರಿ ಹಬ್ಬದ ದಿನ ಮೃಗಾಲಯದ ಹುಲಿಗಳಿಗೆ ಮಾಂಸಾಹಾರ ನೀಡಿದಕ್ಕೆ ABVP ಪ್ರತಿಭಟನೆ ನಡೆಸಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights