FACT CHECK | ನಟ ವಿಜಯ್ ಇಫ್ತಾರ್‌ನಲ್ಲಿ ಭಾಗವಹಿಸಿದಕ್ಕೆ ತಮ್ಮ ಪಕ್ಷದ ಕಚೇರಿಯನ್ನು ಧ್ವಂಸ ಮಾಡಲಾಗಿದೆಯೇ?
ತಮಿಳು ನಟ-ರಾಜಕಾರಣಿ ವಿಜಯ್ ಅವರ ಫೋಟೋ ಇರುವ ಗೋಡೆಯನ್ನು ಧ್ವಂಸ ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಗೋಡೆಯ ಮೇಲಿನ ಬಣ್ಣಗಳು ಅವರು ಇತ್ತೀಚೆಗೆ ಸ್ಥಾಪಿಸಿದ ಪಕ್ಷವಾದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಯ ಬಣ್ಣಗಳಿಗೂ ಹೊಂದಿಕೆಯಾಗುತ್ತವೆ. ವಿಜಯ್ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ನಂತರ ಈ ಘಟನೆ ನಡೆದಿದೆ ಎಂಬ ಹೇಳಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.

ಮಾರ್ಚ್ 25, 2025 ರಂದು ಫೇಸ್ಬುಕ್ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡು, ‘‘ತಮಿಳುನಾಡಿನಲ್ಲಿ ವಿಜಯ್ ಗೆ ಮಂಗಳಾರತಿ’’ ಎಂದು ಬರೆದುಕೊಂಡಿದ್ದಾರೆ. ಹಾಗೆಯೆ ವೀಡಿಯೊದ ಮೇಲ್ಬಾಗದಲ್ಲಿ ‘‘ಇಫ್ತಾರ್ ಕೂಟದ ಮಹಿಮೆ’’ ಎಂದು ಬರೆಯಲಾಗಿದೆ. (Archive)
ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವಿಡಿಯೋವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವಿಡಿಯೋದ ಕೀ ಫ್ರೇಮ್‌ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಫೆಬ್ರವರಿ 19, 2025 ರಂದು ‘thalapathy_tvk_0622’ ಎಂಬ ಇನ್‌ಸ್ಟಾಗ್ರಾಮ್ ಖಾತೆಯಿಂದ ಹಂಚಿಕೊಂಡ ವಿಡಿಯೋವೊಂದು ಲಭ್ಯವಾಗಿದೆ.
View this post on Instagram
ಅದೇ ರೀತಿ, ‘enddrum_thalapathy_vijay_ fans‘ ಎಂಬ ಮತ್ತೊಂದು ಇನ್‌ಸ್ಟಾಗ್ರಾಮ್ ಖಾತೆಯು ಫೆಬ್ರವರಿ 20, 2025 ರಂದು ಅದೇ ವೀಡಿಯೊವನ್ನು ಹಂಚಿಕೊಂಡಿದೆ.
ಭಾರತದಲ್ಲಿ, ರಂಜಾನ್ ಉಪವಾಸವು ಮಾರ್ಚ್ 12, 2025 ರಂದು ಪ್ರಾರಂಭವಾಯಿತು ಮತ್ತು ವಿಜಯ್ ಮಾರ್ಚ್ 7 ರಂದು ಇಫ್ತಾರ್ ಕೂಟವನ್ನು ಆಯೋಜಿಸಿದ್ದರು. ಆದರೆ, ಈ ವೀಡಿಯೊ ಇಫ್ತಾರ್ ಕಾರ್ಯಕ್ರಮಕ್ಕಿಂತ ಮೊದಲೇ ಇಂಟರ್ನೆಟ್ನಲ್ಲಿದೆ. ಹೀಗಾಗಿ ಇಫ್ತಾರ್ ಕಾರ್ಯಕ್ರಮಕ್ಕಿಂತ ಹಿಂದಿನದು ಎಂದು ದೃಢಪಡಿಸಿತು.
ಕುಮುದಂ ನ್ಯೂಸ್ 24×7 ಫೆಬ್ರವರಿ 18, 2025 ರಂದು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವೈರಲ್ ವೀಡಿಯೊದ ಅದೇ ದೃಶ್ಯಗಳನ್ನು ಹಂಚಿಕೊಂಡಿದೆ. ಈ ಯೂಟ್ಯೂಬ್ ವೀಡಿಯೊಕ್ಕೆ “ಟಿವಿಕೆ ಕಚೇರಿ ಧ್ವಂಸ: ತಾವೇಕಾ ಜಿಲ್ಲಾ ಕಚೇರಿ ಧ್ವಂಸ | ಟಿವಿಕೆ ವಿಜಯ್ | ತಿರುವಳ್ಳೂರು | ಪಥಿಯಾಲ್ ಪೆಟ್ಟೈ” ಎಂಬ ಶೀರ್ಷಿಕೆ ನೀಡಲಾಗಿದೆ.
ಕುಮುದಮ್ ನ್ಯೂಸ್ ಪ್ರಕಾರ, ತಿರುವಳ್ಳೂರಿನಲ್ಲಿ ರಸ್ತೆಯನ್ನು ಅತಿಕ್ರಮಿಸಿ ನಿರ್ಮಿಸಲಾಗಿದ್ದ ಟಿವಿಕೆ ಕಚೇರಿಯನ್ನು ಕೆಡವುವುದನ್ನು ವೀಡಿಯೊ ತೋರಿಸಿದೆ. ನ್ಯೂಸ್ ತಮಿಳ್24X7 ನ ಯೂಟ್ಯೂಬ್ ಚಾನೆಲ್ ಕೂಡ ಅದೇ ದಿನ ಈ ಘಟನೆಯ ಬಗ್ಗೆ ವರದಿ ಮಾಡಿದೆ.
ವೈರಲ್ ಆಗಿರುವ ವೀಡಿಯೊವು ತಿರುವಲ್ಲೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಕ್ರಮವಾಗಿ ನಿರ್ಮಿಸಲಾದ ಟಿವಿಕೆ ಯುವ ಕಚೇರಿಯ ಧ್ವಂಸವನ್ನು ತೋರಿಸಿದೆ. ಧ್ವಂಸವು ಫೆಬ್ರವರಿ 18, 2025 ರಂದು ನಡೆಯಿತು. ಆದ್ದರಿಂದ, ಈ ವೀಡಿಯೊ ದಳಪತಿ ವಿಜಯ್ ಅವರ ಇಫ್ತಾರ್ ಕೂಟಕ್ಕೂ ಯಾವುದೇ ಸಂಬಂಧವಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, ತಿರುವಳ್ಳೂರಿನಲ್ಲಿ ರಸ್ತೆಯನ್ನು ಅತಿಕ್ರಮಿಸಿ ನಿರ್ಮಿಸಲಾಗಿದ್ದ ಟಿವಿಕೆ ಕಚೇರಿಯನ್ನು ಫೆಬ್ರವರಿ 18, 2025 ರಂದು ಧ್ವಂಸಗೊಳಿಸಿದ ವಿಡಿಯೋವನ್ನು ಸುಳ್ಳು ನಿರೂಪಣೆಯೊಂದಿಗೆ, ಮಾರ್ಚ್ 7 ರಂದು ವಿಜಯ್ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಕಾರಣಕ್ಕೆ ಟಿವಿಕೆ ಕಚೇರಿಯನ್ನು ಧ್ವಂಸ ಮಾಡಲಾಗಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಮನುಷ್ಯ ಮುಖವಿರುವ ನೀರಾನೆಯ ವಿಡಿಯೋದ ಅಸಲೀಯತ್ತೇನು ಗೊತ್ತೇ?

