FACT CHECK | ಅರವಿಂದ್ ಕೇಜ್ರಿವಾಲ್‌ರನ್ನು ಭೇಟಿಯಾಗಲು ಭಾರತಕ್ಕೆ ಬರ್ತಾರಾ ಸುನಿತಾ ವಿಲಿಯಮ್ಸ್?
ಕಳೆದ ಮಾರ್ಚ್ 18ರಂದು ಅಂತಾರಾಷ್ಟ್ರಿಯ ಬಾಹ್ಯಾಕಾಶ ವಿಮಾನ ನಿಲ್ದಾಣದಿಂದ ಹೊರಟಿದ್ದ ಸುನಿತಾ ವಿಲಿಯಮ್ಸ್ ಸೇರಿ 4 ಗಗನಯಾತ್ರಿಗಳು ಸುರಕ್ಷಿತವಾಗಿ ಫ್ಲೋರಿಡಾ ಕಡಲಿಗೆ ಬಂದಿಳಿದಿದ್ದರು. ಈ ವೇಳೆ ಮೊದಲ ಬಾರಿಗೆ ಪತ್ರಿಕಾಗೋಷ್ಠಿ ನಡೆಸಿದ ಅವರು, ಭಾರತ ಅದ್ಭುತವಾಗಿದೆ ಮತ್ತು ಬಾಹ್ಯಾಕಾಶದಿಂದ ಹಿಮಾಲಯದ ನೋಟ ಆಕರ್ಷಕವಾಗಿದೆ ಎಂದು ಹೇಳಿದ್ದರು. ಅಲ್ಲದೆ, ನಾನು ನನ್ನ ತಂದೆಯ ಜನ್ಮಭೂಮಿಗೆ ಖಂಡಿತವಾಗಿ ಭೇಟಿ ನೀಡುತ್ತೇನೆ ಎಂದು ತಿಳಿಸಿದ್ದರು.
ಇದೇ ಸಂದರ್ಭದಲ್ಲಿ ಸುನಿತಾ ವಿಲಿಯಮ್ಸ್ ಅವರು ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡಲಿದ್ದು, ದಿಲ್ಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿಯಾಗುತ್ತೇನೆ ಎಂದು ಹೇಳಿದ್ದಾಗಿ ಪೋಸ್ಟ್‌ಗಳು ವೈರಲ್ ಆಗಿವೆ.
“मैं जल्द भारत दौरे पर जाऊँगी और केजरीवाल जी से मिलूँगी”
◆ सुनीता विलियम्स ने कहा #SunitaWilliams | @Astro_Suni | Sunita Williams pic.twitter.com/GTAoMntIDh
— Chirag Patel (@tuvter) April 1, 2025
ಚಿರಾಗ್ ಪಟೇಲ್ ಎಂಬ ಎಕ್ಸ್ ಬಳಕೆದಾರರೊಬ್ಬರು ‘ನಾನು ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡಲಿದ್ದು, ಕೇಜ್ರಿವಾಲ್ ಜೀ ಅವರನ್ನು ಭೇಟಿಯಾಗುತ್ತೇನೆ – ಸುನಿತಾ ವಿಲಿಯಮ್ಸ್ ಹೇಳಿಕೆ’ ಎಂದು ನ್ಯೂಸ್ 24ರ ಲೋಗೋ ಒಳಗೊಂಡು ವೈರಲ್ ಟೆಂಪ್ಲೇಟ್ ಅನ್ನು ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಸುನಿತಾ ವಿಲಿಯಮ್ಸ್ ಅವರು ಭಾರತಕ್ಕೆ ಬಂದು ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿಯಾಗುವುದಾಗಿ ಹೇಳಿದ್ದಾರೆ ಎಂದು ಬರೆಯಲಾಗಿದೆ.
ಇದೇ ರೀತಿ ನ್ಯೂಸ್ 24 ರ ಲೋಗೋದೊಂದಿಗೆ ವೈರಲ್ ಟೆಂಪ್ಲೇಟ್ ಅನ್ನು ಹಂಚಿಕೊಂಡಿರುವ ಪೋಸ್ಟ್‌ಗಳನ್ನು ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಭಾರತೀಯ ಮೂಲದ ಅಮೆರಿಕನ್ ಗಗನಯಾತ್ರಿ ಸುನೀತಾ ವಿಲಿಯಮ್ ಭಾರತಕ್ಕೆ ಬಂದು ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಅವರನ್ನು ಭೇಟಿಯಾಗುತ್ತೆನೆ ಎಂದು ಹೇಳಿದ್ದಾರೆ ಎನ್ನಲಾದ ಸುದ್ದಿ ನಿಜವೇ ಎಂದು ಪರಿಶೀಲಿಸಲು, ಗೂಗಲ್ ಸರ್ಚ್ ಮಾಡಿದಾಗ, ಏಪ್ರಿಲ್ 1 ರಂದು ಮಾಡಿದ ಪೋಸ್ಟ್‌ವೊಂದು ಲಭ್ಯವಾಗಿದೆ. ವೈರಲ್ ಟೆಂಪ್ಲೇಟ್‌ಗೂ ಇದಕ್ಕೂ ಬಹುತೇಕ ಹೊಂದಿಕೆಯಾಗುತ್ತಿತ್ತು. ಆದರೆ ಈ ಪೋಸ್ಟ್‌ನಲ್ಲಿ ದಿಲ್ಲಿಯ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಬಗ್ಗೆ ಉಲ್ಲೇಖ ಇರಲಿಲ್ಲ.
“मैं जल्द भारत दौरे पर आऊंगी”
◆ सुनीता विलियम्स ने कहा #SunitaWilliams | @Astro_Suni | Sunita Williams pic.twitter.com/XhzOiAVoIX
— News24 (@news24tvchannel) April 1, 2025
ಆಗ, ನ್ಯೂಸ್ 24ರ ಈ ಎಕ್ಸ್ ಪೋಸ್ಟ್‌ನ್ನೇ ತಿರುಚಿ ಎಲ್ಲೆಡೆ ಹಂಚಿಕೊಳ್ಳಲಾಗುತ್ತಿದೆ ಎಂದು ದೃಢಪಟ್ಟಿತು. ಇನ್ನು ಈ ಕೇಜ್ರಿವಾಲ್ ಭೇಟಿ ಬಗ್ಗೆ ಸುನಿತಾ ವಿಲಿಯಮ್ ಹೇಳಿಕೆ ನೀಡಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ಈ ಬಗ್ಗೆ ಮತ್ತಷ್ಟು ಗೂಗಲ್‌ನಲ್ಲಿಸರ್ಚ್ ಮಾಡಿದಾಗ, ಈ ಬಗ್ಗೆ ಹಲವು ಮಾಧ್ಯಮಗಳು ವರದಿ ಮಾಡಿದ್ದು, ಇದರಲ್ಲೆಲ್ಲೂ ಕೇಜ್ರಿವಾಲ್ ಉಲ್ಲೇಖ ಇರಲಿಲ್ಲ. ದೈನಿಕ್ ಭಾಸ್ಕರ್‌ನಲ್ಲಿ ಪತ್ರಿಕಾಗೋಷ್ಠಿಯ 3 ನಿಮಿಷಗಳ ಕ್ಲಿಪ್ ಇದ್ದು, ಅದರಲ್ಲಿ ಸುನಿತಾ ವಿಲಿಯಮ್ಸ್ ಅವರು ಶೀಘ್ರದಲ್ಲೇ ಭಾರತಕ್ಕೆ ಬರುತ್ತೇನೆ ಎಂದಷ್ಟೇ ಹೇಳಿರುವುದು ದಾಖಲಾಗಿದೆ.
ಸುನಿತಾ ವಿಲಿಯಮ್ಸ್ ಅವರು ಭಾರತಕ್ಕೆ ಬಂದು ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿಯಾಗಲಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್ ನಕಲಿ ಎಂದು ತಿಳಿದು ಬಂದಿದೆ. ನ್ಯೂಸ್ 24 ಟೆಂಪ್ಲೇಟ್ ಅನ್ನೇ ಬಳಸಿ, ಸುಳ್ಳು ಸುದ್ದಿ ಹಂಚಲಾಗುತ್ತಿದೆ ಎಂದು ದೃಢಪಟ್ಟಿದೆ. ಸುನಿತಾ ವಿಲಿಯಮ್ಸ್ ಭಾರತಕ್ಕೆ ಬರುತ್ತೇನೆ ಎಂದಷ್ಟೇ ಹೇಳಿದ್ದು, ಕೇಜ್ರಿವಾಲ್ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ ಎಂದು ಪರಿಶೀಲನೆಯಿಂದ ದೃಢಪಟ್ಟಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಭಾರತೀಯ ಮೂಲದ ಅಮೆರಿಕಾದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಭಾರತಕ್ಕೆ ಭೇಟಿ ನೀಡಲಿದ್ದೇನೆ ಎಂದು ಹೇಳಿದ್ದು, ಎಲ್ಲಿಯೂ ದಿಲ್ಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್‌ರನ್ನು ಭೇಟಿಯಾಗುತ್ತೇನೆ ಎಂದು ಹೇಳಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ತಮ್ಮ ಪ್ರಾಣವನ್ನು ಲೆಕ್ಕಿಸದೆ ಭೂಕಂಪನದಿಂದ ಶಿಶುಗಳನ್ನು ರಕ್ಷಿಸುವ ದಾದಿಯರ ವಿಡಿಯೋ ಎಲ್ಲಿಯದು ಗೊತ್ತೇ?

