FACT CHECK | ತಮ್ಮ ಪ್ರಾಣವನ್ನು ಲೆಕ್ಕಿಸದೆ ಭೂಕಂಪನದಿಂದ ಶಿಶುಗಳನ್ನು ರಕ್ಷಿಸುವ ದಾದಿಯರ ವಿಡಿಯೋ ಎಲ್ಲಿಯದು ಗೊತ್ತೇ?

ಇತ್ತೀಚೆಗೆ ಮ್ಯಾನ್ಮಾರ್ -ಥೈಲ್ಯಾಂಡ್ ಮತ್ತು ಚೀನಾ ಸೇರಿದಂತೆ ಅಲ್ಲಿನ ನೆರೆಯ ದೇಶಗಳಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದೇ ಸಂದರ್ಭದಲ್ಲಿ ವಿಡಿಯೋಚವೊಂದು ವೈರಲ್ ಆಗುತ್ತಿದ್ದು ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಭೂಕಂಪನದಲ್ಲಿ ಆಸ್ಪತ್ರೆ ಕೊಠಡಿಯೊಂದು ಅಲುಗಾಡುತ್ತಿರುವಾಗ ಇಬ್ಬರು ದಾದಿಯರು ತಮ್ಮ ಜೀವವನ್ನು ಲೆಕ್ಕಿಸದೆ ಶಿಶುಗಳನ್ನು ರಕ್ಷಿಸುತ್ತಿರುವ ದೃಶ್ಯ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ. ಮ್ಯಾನ್ಮಾರ್‌ನಲ್ಲಿರುವ ಆಸ್ಪತ್ರೆಯಲ್ಲಿ ನವಜಾತ ಶಿಶುಗಳನ್ನು ರಕ್ಷಿಸುವ ನರ್ಸ್‌ಗಳ ಎಂದು ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.

ಮಾರ್ಚ್ 29, 2025 ರಂದುಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ನಿನ್ನೆ ಮಯೂನ್ಮರ್ ನಲ್ಲಿ ಬೃಹತ್ ಭೂಕಂಪದಲ್ಲಿ ನವಜಾತಾ ಶಿಶು ವಿನ ರಕ್ಷಣೆಗೆ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ನರ್ಸ್. ಮಹಾಮಾತೆಯರು’’ ಎಂದು ಬರೆದುಕೊಂಡಿದ್ದಾರೆ. ( ಆರ್ಕೈವ್ ಮಾಡಿದ ಲಿಂಕ್‌ಅನ್ನು ಇಲ್ಲಿ ನೋಡಬಹುದು  Archive) ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್​ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ವೈರಲ್ ವೀಡಿಯೊದ ಸ್ಕ್ರೀನ್ ಶಾಟ್​ನೊಂದಿಗೆ ಅನೇಕ ಮಾಧ್ಯಮಗಳು ಸುದ್ದಿ ಪ್ರಕಟಿಸಿರುವುದುಲಭ್ಯವಾಗಿದೆ. ಮಾರ್ಚ್ 31, 2025 ರಂದು ಇಂಡಿಯಾ ಟುಡೆ ‘‘ಚೀನಾದಲ್ಲಿ ಭೂಕಂಪದ ಸಮಯದಲ್ಲಿ ಶಿಶುಗಳನ್ನು ರಕ್ಷಿಸಲು ನರ್ಸ್‌ಗಳು ತಮ್ಮ ಪ್ರಾಣವನ್ನು ಪಣಕ್ಕಿಟ್ಟರು’’ ಎಂಬ ಶೀರ್ಷಿಕೆಯೊಂದಿಗೆ ಸುದ್ದಿ ಪ್ರಕಟಿಸಿದೆ. ಹಾಗಾಗಿ ಇದನ್ನು ಮ್ಯಾನ್ಮಾರ್‌ನಲ್ಲಿ ನಡೆದ ಘಟನೆಯಲ್ಲ ಎಂದು  ಸೌತ್ ಚೆಕ್ ವರದಿ ಮಾಡಿದೆ.

ವರದಿಯ ಪ್ರಕಾರ, ಚೀನಾ-ಮ್ಯಾನ್ಮಾರ್ ಗಡಿಯಲ್ಲಿ ಸಂಭವಿಸಿದ ಪ್ರಬಲ ಭೂಕಂಪದ ಸಮಯದಲ್ಲಿ ನವಜಾತ ಶಿಶುಗಳನ್ನು ರಕ್ಷಿಸಲು ಚೀನಾದಲ್ಲಿ ಇಬ್ಬರು ವೀರ ದಾದಿಯರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿರುವ ಭಯಾನಕ ಸಿಸಿಟಿವಿ ದೃಶ್ಯಗಳು ಹೊರಬಂದಿವೆ ಎಂದು ಬರೆಯಲಾಗಿದೆ.

ಇದೇ ಸಮಯದಲ್ಲಿ ಚೀನಾ ಗ್ಲೋಬಲ್ ಟೆಲಿವಿಷನ್ ನೆಟ್‌ವರ್ಕ್‌ನ (CGTN) ಅಧಿಕೃತ ಯೂಟ್ಯೂಬ್ ಹ್ಯಾಂಡಲ್‌ನಲ್ಲಿ ಇದೇ ವೈರಲ್ ವೀಡಿಯೊ ಉತ್ತಮ ಕ್ವಾಲಿಟಿಯಲ್ಲಿ ಕಂಡುಬಂದಿದೆ. ಮಾರ್ಚ್ 30, 2025 ರ ದಿನಾಂಕದ ವರದಿಯ ಶೀರ್ಷಿಕೆ ಹೀಗಿದೆ: ‘‘ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಭೂಕಂಪದ ಸಮಯದಲ್ಲಿ ನೈಋತ್ಯ ಚೀನಾದಲ್ಲಿನ ದಾದಿಯರು ನವಜಾತ ಶಿಶುಗಳನ್ನು ರಕ್ಷಿಸಿದ್ದಾರೆ’’ ವರದಿಯ ಪ್ರಕಾರ, ಈ ಘಟನೆ ಮಾರ್ಚ್ 28 ರಂದು ನಡೆದಿದ್ದು, ಆ ಸ್ಥಳವನ್ನು ಚೀನಾದ ರುಯಿಲಿ ನಗರ ಎಂದು ಗುರುತಿಸಲಾಗಿದೆ.

Two nurses at the maternity ward of Jingcheng Hospital in Yunnan province try holding the creches of newborns.(@tongbingxue)

ಶುಕ್ರವಾರ (ಮಾರ್ಚ್ 28, 2025) ನೆರೆಯ ಮ್ಯಾನ್ಮಾರ್‌ನಲ್ಲಿ ಪ್ರಬಲ ಭೂಕಂಪ ಸಂಭವಿಸಿದಾಗ, ಚೀನಾದ ಯುನ್ನಾನ್ ಪ್ರಾಂತ್ಯದಲ್ಲಿರುವ ಜಿಂಗ್‌ಚೆಂಗ್ ಆಸ್ಪತ್ರೆಯ ಹೆರಿಗೆ ಕೇಂದ್ರದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ನವಜಾತ ಶಿಶುಗಳನ್ನು ರಕ್ಷಿಸಲು ಇಬ್ಬರು ನರ್ಸ್‌ಗಳು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿರುವುದು ಸೆರೆಯಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್, ಹಿಂದೂಸ್ತಾನ್ ಟೈಮ್ಸ್ ಮತ್ತು ಬಿಬಿಸಿ ವರದಿಗಳನ್ನು ನೀವು ನೋಡಬಹುದು. ವೈರಲ್ ವೀಡಿಯೊದ ಸ್ಕ್ರೀನ್ ಶಾಟ್​ನೊಂದಿಗೆಯೇ ಇಲ್ಲಿ ವರದಿ ಮಾಡಲಾಗಿದೆ.ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ವೈರಲ್ ವೀಡಿಯೊ ಚೀನಾದ ಯುನ್ನಾನ್ ಪ್ರಾಂತ್ಯದ್ದು ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಮಾರ್ಚ್ 28ರಂದು ಮ್ಯಾನ್ಮಾರ್‌ನಲ್ಲಿ ಪ್ರಬಲ ಭೂಕಂಪ ಸಂಭವಿಸಿದಾಗ, ಇಬ್ಬರು ದಾದಿಯರು ತಮ್ಮ ಪ್ರಾಣವನ್ನು ಲೆಕ್ಕಿಸದೆ, ಚೀನಾದ ಯುನ್ನಾನ್ ಪ್ರಾಂತ್ಯದಲ್ಲಿರುವ ಜಿಂಗ್‌ಚೆಂಗ್ ಆಸ್ಪತ್ರೆಯ ಹೆರಿಗೆ ಕೇಂದ್ರದಲ್ಲಿ ನವಜಾತ ಶಿಶುಗಳನ್ನು ರಕ್ಷಿಸಿದ ದೃಶ್ಯಗಳನ್ನು ಮ್ಯಾನ್ಮಾರ್‌ನದ್ದು ಎಂದು ತಪ್ಪಾಗಿ ಹಂಚಿಕೊಳ್ಳುತ್ತಿದ್ದಾರೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ  ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಬಾಲಕನೊಬ್ಬ ಹುಲಿಯ ಬೋನಿಗೆ ಬೀಳುವ ವಿಡಿಯೋದ ಅಸಲೀಯತ್ತೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights