COVID-19 ವೈರಸ್‌ ನಾಶಕ್ಕೆ ಚೀನಾದ ಸನ್ಯಾಸಿಗಳು ಗೋ ಮೂತ್ರವನ್ನು ಸಿಂಪಡಿಸಿದ್ದರೇ?

ಚೀನಾದಲ್ಲಿ ಸನ್ಯಾಸಿಗಳು ಮಂತ್ರ ಹೇಳುತ್ತಾ ಹಸುವಿನ ಸಗಣಿ ಮತ್ತು ಹಸುವಿನ ಮೂತ್ರವನ್ನು ಬೆರೆಸಿ ಹೆಲಿಕಾಪ್ಟರ್‌ಗಳ ಮೂಲಕ ಎಲ್ಲೆಡೆ ಸಿಂಪಡಿಸಿದ್ದಾರೆ ಎಂಬ ಟೈಟಲ್‌ನೊಂದಿಗೆ 2:47 ನಿಮಿಷಗಳ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕರೋನ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಭಾರತವು ಸಂಪೂರ್ಣ ಲಾಕ್‌ಡೌನ್ ಆಗಿದೆ, ಕೆಲವು ಅಗತ್ಯ ಸೇವೆಗಳು ಮಾತ್ರ ಸಿಗುತ್ತಿವೆ. ಆ ಮಧ್ಯೆ, ಚೀನಾದಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ವಿಡಿಯೋ ಹೆಚ್ಚು ವೈರಲ್‌ ಆಗುತ್ತಿದೆ.

ಫೇಕ್‌ ನ್ಯೂಸ್ ಪೋರ್ಟಲ್ ಪೋಸ್ಟ್‌ಕಾರ್ಡ್ ನಿರ್ವಹಿಸುತ್ತಿರುವ ‘Narendra Modi fans from Karunadu’ ಎಂಬ ಫೇಸ್‌ಬುಕ್ ಪೇಜ್‌ನಿಂದ ಈ ವಿಡಿಯೋವನ್ನು ಶೇರ್‌ ಮಾಡಲಾಗಿದೆ. ಈ ಪೇಜ್‌ನಿಂದಲೇ ಫೇಸ್‌ಬುಕ್‌ನಲ್ಲಿ ಇದು ವೈರಲ್ ಆಗಿದೆ.

https://www.facebook.com/NaMoFansKarunadu/videos/212917396688804/

ಈ ವಿಡಿಯೋ ಜೊತೆಗೆ, “ಚೀನಾದವರು ವಿಮಾನದಿಂದ ಭೂಮಿಗೆ ಹರಿಶಿನ ನೀರು ಮತ್ತು ಗೋ ಮೂತ್ರದಿಂದ ಮಂತ್ರ ಪೂರ್ವಕ ಪುಣ್ಯಾಹ ಮಾಡಿ ಮಾವಿನ ಎಲೆಯಿಂದ ಪ್ರೋಕ್ಷಣೆ ಮಾಡಿ ಕರೋನಾ ವೈರಸ್ ನಿಂದ ಕಾಪಾಡಲು ಪ್ರಾರ್ಥನೆ ಮಾಡುತ್ತಿದ್ದಾರೆ. ಚೀನಾದವರು ಮಾಡಿದರೆ ದೈವ ನಂಬಿಕೆ. ಭಾರತದವರು ಮಾಡಿದರೆ ಮೂಢನಂಬಿಕೆ”. ಎಂದು ಹೇಳುತ್ತಾರೆ. ಅವರನ್ನು “ಸಂಘಿ, ಗೋ ಭಕ್ತರು ಮತ್ತು ಗೋ ಮೂತ್ರ ಕುಡಿಯುವವರು ಎಂದು ಕರೆಯುತ್ತಾರೆ” ಎಂದು ಬರೆದು ಹಂಚಲಾಗಿದೆ.

ಇದೇ ವೀಡಿಯೊ ತಮಿಳಿನಲ್ಲೂ ವೈರಲ್‌ ಆಗಿದ್ದು, “ಚೀನಾದಲ್ಲಿ ಅರಿಶಿನ ನೀರು ಮತ್ತು ಮಾವಿನ ಮರದ ಎಲೆಗಳನ್ನು ಬಳಸಿ ಹೆಲಿಕಾಪ್ಟರ್‌ಗಳಲ್ಲಿ ಸಿಂಪಡಿಸಲಾಗಿದೆ. ಅವರು ವೇದ ಮಂತ್ರಗಳನ್ನು ಜಪಿಸುತ್ತಿದ್ದಾರೆ ಮತ್ತು ಚೀನಾದಲ್ಲಿ ಕರೋನವನ್ನು ನಾಶಪಡಿಸುತ್ತಿದ್ದಾರೆ” ಎಂದು ವಿಡಿಯೋ ಜೊತೆಗೆ ಬರೆದು ವೈರಲ್‌ ಮಾಡಲಾಗಿದೆ.

ಈ ವಿಡಿಯೋ ಹಿಂದಿ ಮತ್ತು ಮಲೆಯಾಳಂನಲ್ಲೂ ವೈರಲ್‌ ಆಗಿದೆ.

 

ಚೀನಾಕ್ಕೆ ಸಂಬಂಧವೇ ಇಲ್ಲದ, ಮ್ಯಾನ್ಮಾರ್‌ನ ಹಳೆಯ ವಿಡಿಯೋ

 ಆಲ್ಟ್‌ ನ್ಯೂಸ್ ಜಾಲತಾಣವು ವೈರಲ್ ಆಗಿದ್ದ ಈ ವೀಡಿಯೊದ ವಸ್ತುನಿಷ್ಟತೆಯನ್ನು ವಿಶ್ಲೇಷಿಸಿದೆ. ಶ್ವೆ ಲ್ಯಾನ್ ಗಾ ಲೇ ಅವರ ಯೂಟ್ಯೂಬ್ ಲಿಂಕ್ ಹೊಂದಿರುವ ‘ಇನ್ಸೈಟ್ ಮ್ಯಾನ್ಮಾರ್’ ಬ್ಲಾಗ್‌ನಲ್ಲಿ ಮಾರ್ಚ್ 17, 2020 ರಂದು ಈ ವಿಡಿಯೋ ಅಪ್‌ಲೋಡ್‌ ಮಾಡಲಾಗಿದೆ. COVID-19 ಹರಡುತ್ತಿದ್ದ ಹಿನ್ನೆಲೆಯಲ್ಲಿ ಬರ್ಮೀಸ್ ಸನ್ಯಾಸಿಗಳು ಮ್ಯಾನ್ಮಾರ್‌ನಲ್ಲಿ ನೀರು ಸಿಂಪಡಿಸುತ್ತಾ ಮಂತ್ರಗಳನ್ನು ಹೇಳಿದ್ದಾರೆ ಎಂದು ಯೂಟ್ಯೂಬ್‌ ಲಿಂಕ್‌ನಲ್ಲಿ ಹೇಳಲಾಗಿದೆ.

ಹೆಚ್ಚಿನ ಹುಡುಕಾಟದ ನಂತರ,  ಫೇಸ್‌ಬುಕ್ ಪೋಸ್ಟ್ ಹಂಚಿಕೊಂಡ ಮ್ಯಾನ್ಮಾರ್ ಮೂಲದ ಪತ್ರಕರ್ತ ಕೇಪ್ ಡೈಮಂಡ್ ಎನ್ನುವವರು ಡಿಸೆಂಬರ್ 4, 2019 ರಂದು ವೀಡಿಯೊವನ್ನು ಅವರ ಫೇಸ್‌ಬುಕ್‌ ಖಾತೆಯಲ್ಲಿ ಅಪ್‌ಲೋಡ್ ಮಾಡಿರುವುದನ್ನು ಆಲ್ಟ್‌ನ್ಯೂಸ್‌ ಕಂಡುಕೊಂಡಿದೆ. ಡಿಸೆಂಬರ್‌ 04 ರಂದು ಅಪ್‌ಲೋಡ್‌ ಅಗಿರುವ ಈ ವಿಡಿಯೋದಲ್ಲಿ ಕೊರೊನಾ ವೈರಸ್ ಬಗ್ಗೆ ಯಾವುದೇ ರೀತಿಯ ಹೇಳಿಕೆಯಾಗಲೀ, ಮಾಹಿತಿಯಾಗಲೀ ಉಲ್ಲೇಖವಾಗಿಲ್ಲ.

https://www.facebook.com/permalink.php?story_fbid=2474186426241930&id=100009517909822

ಮ್ಯಾನ್ಮಾರ್ ತನ್ನ ಮೊದಲ ಕರೋನ ವೈರಸ್ ಪ್ರಕರಣವನ್ನು ಮಾರ್ಚ್ 23, 2020 ರಂದು ದೃಢಪಡಿದೆ. ಆದ್ದರಿಂದ, ಬರ್ಮೀಸ್ ಸನ್ಯಾಸಿಗಳು ಧಾರ್ಮಿಕ ವಚನಗಳನ್ನು ಜಪಿಸುವುದು ಮತ್ತು ಹೆಲಿಕಾಪ್ಟರ್‌ನಿಂದ ಪವಿತ್ರ ನೀರನ್ನು ಸಿಂಪಡಿಸುತ್ತಿರುವ ವಿಡಿಯೋ ಕೊರೊನಾ ನಾಶಕ್ಕಾಗಿ ಗೋ ಮೂತ್ರವನ್ನು ಸುರಿದ ಚೀನೀ ಸನ್ಯಾಸಿಗಳ ವಿಡಿಯೋ ಅಲ್ಲ ಎಂಬುದು ಸ್ಪಷ್ಟವಾಗಿದೆ.

ಕೊರೊನಾ ವೈರಸ್‌ ಹರಡುತ್ತಿರುವ, ಜನರು ಭೀತರಾಗಿರು ಈ ಸಂದರ್ಭದಲ್ಲೂ ಪೋಸ್ಟ್‌ಕಾರ್ಡ್‌ ನಂತಹ ಫೇಕ್‌ ನ್ಯೂಸ್‌ ಫ್ಯಾಕ್ಟರಿಗಳು ಜನರನ್ನು ದಾರಿತಪ್ಪಿಸುವ, ಇನ್ನೊಂದು ದೇಶ ಅಥವಾ ಸಮುದಾಯದ ವಿರುದ್ಧ ದ್ವೇಷವನ್ನು ಹುಟ್ಟುಹಾಕುವ ತಂತ್ರಗಾರಿಕೆಯಲ್ಲಿ ತೊಡಗಿರುವುದು ಅವಮಾನಕರ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights