FACT CHECK | ನಜಾಕತ್ ಅಲಿ ಎಂಬ ಬಟ್ಟೆ ವ್ಯಾಪಾರಿ 11 ಪ್ರವಾಸಿಗರನ್ನು ರಕ್ಷಿಸಿದ್ರಾ?
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮಂಗಳವಾರ ನಡೆದ ಉಗ್ರರ ಗುಂಡಿನ ದಾಳಿಯಲ್ಲಿ 26 ಜನರು ಸಾವಿಗೀಡಾಗಿ 17 ಜನರು ಗಾಯಗೊಂಡಿದ್ದರು. ಇದರ ಹಲವು ವಿಡಿಯೋ, ಸುದ್ದಿಗಳು ಹರಿದಾಡುತ್ತಿದ್ದು, ನಜಾಕತ್ ಅಲಿ ಎಂಬ ಬಟ್ಟೆ ವ್ಯಾಪಾರಿ 11 ಪ್ರವಾಸಿಗರನ್ನು ರಕ್ಷಿಸಿದರು ಎಂದು ಹೇಳಲಾಗುತ್ತಿದೆ.
एक ख़बर यह भी है।
11 पर्यटकों को कपड़ा व्यवसायी नज़ाकत अली ने बचाया.
क्या आपके व्हाट्सअप तक ये पहुंचा..?#PahalgamTerroristAttack pic.twitter.com/CivqnwgHNO
— Bittu Yadav (@BittuYada000) April 23, 2025
“ನಜಾಕತ್ ಅಲಿ ಎಂಬ ಬಟ್ಟೆ ವ್ಯಾಪಾರಿ 11 ಪ್ರವಾಸಿಗರನ್ನು ರಕ್ಷಿಸಿದ್ದಾರೆ. ಈ ಸುದ್ದಿ ನಿಮ್ಮ ವಾಟ್ಸಾಪ್‌ಗೆ ತಲುಪಿದೆಯೇ?” ಎಂದು ‘ಬಿಟ್ಟು ಯಾದವ್’ ಎಂಬುವವರು ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.
ಇದೇ ರೀತಿಯ ಹೇಳಿಕೆಗಳನ್ನು ರಿಜ್ವಾನ್ ಹೈದರ್, ವಿಶಾಲ್ ಜ್ಯೋತಿ ದೇವ್ ಅಗರ್ವಾಲ್, ಅನಿರುದ್ಧ್ ಸಿಂಗ್ ವಿದ್ರೋಹಿ, ಡಾ. ವಿಜೇಂದರ್ ಸಿಂಗ್ ಸಿದ್ದು, ವಿನೀತ್ ಕುಮಾರ್, ಕೃಷ್ಣ ಕಾಂತ್ ಮತ್ತು ಪ್ರತೀಕ್ ಪಟೇಲ್ ಎಂಬುವವರು ತಮ್ಮ ಎಕ್ಸ್ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಕೆಲವು ಈ ಸುದ್ದಿಗೆ ಸಂಬಂಧಿಸಿದ ಪತ್ರಿಕೆ ತುಣುಕುಗಳನ್ನು ಪೋಸ್ಟ್ ಮಾಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ಗಳಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸು ಕೀವರ್ಡ್‌ಗಳನ್ನು ಬಳಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ,ಏಪ್ರಿಲ್ 23, 2025ರ ದೈನಿಕ್ ಭಾಸ್ಕರ್ ರ ವರದಿಯೊಂದು ಲಭ್ಯವಾಗಿದೆ. ಈ ಸುದ್ದಿ ನಿಜವೆಂದು ತಿಳಿದುಬಂದಿದೆ.
ಏಪ್ರಿಲ್ 23, 2025ರ ದೈನಿಕ್ ಭಾಸ್ಕರ್ ವರದಿಯ ಪ್ರಕಾರ, “ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಕಾಶ್ಮೀರಿ ಉದ್ಯಮಿಯೊಬ್ಬರು ಛತ್ತೀಸ್‌ಗಢದ 11 ಪ್ರವಾಸಿಗರ ಜೀವ ಉಳಿಸಿದ್ದಾರೆ.”
“ಇವರು ಚಿರ್ಮಿರಿಯಿಂದ ಪ್ರವಾಸಕ್ಕೆ ಹೋಗಿದ್ದರು. ದಾಳಿಯ ಸಮಯದಲ್ಲಿ ಅವರು ಪಹಲ್ಗಾಮ್‌ನಲ್ಲಿಯೇ ಇದ್ದರು. ತನ್ನ ಬುದ್ಧಿವಂತಿಕೆಯಿಂದ ಉದ್ಯಮಿ ನಜಕತ್ ಅಲಿ ಇವರೆಲ್ಲರನ್ನೂ ಸುರಕ್ಷಿತವಾಗಿ ಸ್ಥಳಾಂತರಿಸಿದರು. ಈ ಪ್ರವಾಸಿಗರಲ್ಲಿ ಬಿಜೆಪಿ ಕೌನ್ಸಿಲರ್, ಮಾಜಿ ಕೌನ್ಸಿಲರ್ ಮತ್ತು 3 ಮಕ್ಕಳು ಕೂಡ ಸೇರಿದ್ದರು,” ಎಂದು ಹೇಳಲಾಗಿದೆ.
ಭೂಕುಸಿತದಿಂದಾಗಿ ರಸ್ತೆ ಸಂಚಾರಕ್ಕೆ ಅಡಚಣೆಯಾಗಿ ಎರಡೂ ಬದಿಗಳಲ್ಲಿ ಪ್ರವಾಸಿಗರ ಗುಂಪು ಸೇರಿತ್ತು. ಈ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಗುಂಡಿನ ದಾಳಿ ಪ್ರಾರಂಭವಾಯಿತು. ಇದರಿಂದ ಜನರು ಸಿಕ್ಕ ಸಿಕ್ಕಲ್ಲಿ ಓಡಲು ಪ್ರಾರಂಭಿಸಿದರು. ಆಗ ಪ್ರತಿ ವರ್ಷ ಚಳಿಗಾಲದಲ್ಲಿ ಪಹಲ್ಗಾಮ್‌ಗೆ ಬಂದು ಬೆಚ್ಚಗಿನ ಬಟ್ಟೆಗಳನ್ನು ಮಾರಾಟ ಮಾಡುವ ನಜಕತ್ ಅಲಿ ಪ್ರವಾಸಿಗರನ್ನು ಗುರುತಿಸು ಇವರನ್ನು ಹೋಟೆಲ್ ಕಡೆಗೆ ಕರೆದೊಯ್ದರು. ಇದರಿಂದ ಅವರ ಜೀವಗಳು ಉಳಿದವು.
ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಸುದ್ದಿಗೆ ಸಂಬಂಧಿಸಿದ ಮಾಹಿತಿ ಈಟಿವಿ ಭಾರತ್ ಮತ್ತು ಹರಿಭೂಮಿಯಲ್ಲೂ ಕಂಡು ಬಂದಿದೆ.ಬಿಜೆಪಿ ಕೌನ್ಸಿಲರ್, ಮಾಜಿ ಕೌನ್ಸಿಲರ್ ಸೇರಿ 11 ಪ್ರವಾಸಿಗರನ್ನು ಕಾಶ್ಮೀರಿ ಬಟ್ಟೆ ವ್ಯಾಪಾರಿ ನಜಾಕತ್ ಅಲಿ ರಕ್ಷಿಸಿದರು ಎಂಬ ಸುದ್ದಿ ನಿಜ ಎಂದು ತಿಳಿದು ಬಂದಿದೆ. ಇವರು ಗುಂಡಿನ ದಾಳಿ ಸಂದರ್ಭದಲ್ಲಿ ಪ್ರವಾಸಿಗರನ್ನು ಹೋಟೆಲ್‌ಗೆ ಕರೆದೊಯ್ದು ರಕ್ಷಣೆ ಮಾಡಿದ್ದರು ಎಂದು ದೃಢಪಟ್ಟಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ನಜಾಕತ್ ಅಲಿ ಎಂಬ ಬಟ್ಟೆ ವ್ಯಾಪಾರಿ 11 ಪ್ರವಾಸಿಗರನ್ನು ರಕ್ಷಿಸಿದ್ದಾರೆ. ಈ ಘಟನೆಯನ್ನು ಕೆಲವರು ಧರ್ಮದ ಹಿನ್ನಲೆಯಲ್ಲಿ ನೋಡುತ್ತಿರುವುದರಿಂದ ಈ ವ್ಯಕ್ತಿ ಅಥವಾ ಘಟನೆ ಬಗ್ಗೆ ಅನುಮಾನ ವ್ಯಕ್ತಪಡಿಸಿ ಕಮೆಂಟ್ ಮಾಡಿದ್ದರು. ವಾಸ್ತವವಾಗಿ ನಜಾಕತ್ ಅಲಿ ಎಂಬುವವರು 11 ಪ್ರವಾಸಿಗರನ್ನು ರಕ್ಷಿಸಿದ್ದಾರೆ. ಎಂಬುದು ನಿಜ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | 2020ರ ಹಳೆಯ ವಿಡಿಯೋವನ್ನು ಪಹಲ್ಗಾಮ್ ಘಟನೆಗೆ ಲಿಂಕ್ ಮಾಡಿ ಹಂಚಿಕೆ

