FACT CHECK | ಹಿಂದೂ ಗೆಳತಿ ಮೇಲೆ ಹಲ್ಲೆ ಮಾಡಿದ ಮುಸ್ಲಿಂ ಯುವಕ ಎಂಬ ವಿಡಿಯೋದ ಅಸಲೀಯತ್ತೇನು ಗೊತ್ತೆ?
ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಈ ವಿಡಿಯೋದಲ್ಲಿ ಸಾರ್ವಜನಿಕವಾಗಿ ವ್ಯಕ್ತಿಯೊಬ್ಬ ಹುಡುಗಿಗೆ ಕಪಾಳಮೋಕ್ಷ ಮಾಡುತ್ತಿರುವುದನ್ನು ಕಾಣಬಹುದು. ವಿಡಿಯೋದಲ್ಲಿ ಹುಡುಗಿ ಹಿಂದೂ ಮತ್ತು ಆಕೆಯನ್ನು ಹೊಡೆಯುತ್ತಿರುವ ಯುವಕ ಆಕೆಯ ಮುಸ್ಲಿಂ ಗೆಳೆಯ ಎಂದು ಹೇಳಲಾಗುತ್ತಿದೆ.

ಫೇಸ್‌ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಅವಳ ಜಿಹಾದಿ ಗೆಳೆಯ ಅವಳನ್ನು ನಾಯಿಗೆ ಹೊಡೆದಾಗೆ ಹೊಡೆಯುತ್ತಿದ್ದಾನೆ ಆಕೆಯ ಕುಟುಂಬ ಸದಸ್ಯರು ಅವಳನ್ನು ಗದರಿಸಿದರೆ, ಅವಳು ಅವರನ್ನು ಬೆದರಿಸುತ್ತಿದ್ದಳು’’ ಎಂದು ಬರೆದುಕೊಂಡಿದ್ದಾರೆ.
ಇದೇ ರೀತಿಯ ಹೇಳಿಕೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವೈರಲ್ ವಿಡಿಯೋದ ಕೀ ಫ್ರೇಮ್‌ಗಳನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಬೇರೆ ಭಾಷೆಗಳಲ್ಲೂ ಇದೇ ಹೇಳಿಕೆಯೊಂದಿಗೆ ವಿಡಿಯೋವೊಂದು ವೈರಲ್ ಆಗುತ್ತಿರುವುದು ಲಭ್ಯವಾಗಿದೆ. ಈ ಪೈಕಿ ಒಂದು ಪೋಸ್ಟ್ನ ಕಮೆಂಟ್ ಸೆಕ್ಷನ್ನಲ್ಲಿ ‘‘ಇದು ಸುಜೀತ್ ಪಾಂಡೆ ಮತ್ತು ಅಂಕಿತಾ ಕರೋಟಿಯ ಅವರ ಸ್ಕ್ರಿಪ್ಟ್ ಮಾಡಿದ ವಿಡಿಯೋ’’ ಎಂದು ಬರೆದಿರುವುದು ಕಂಡುಬಂದಿದೆ.
कुतिया की तरह पिट रही है बॉयफ्रेंड से
मा बाप जोर से डांट-फटकार भी दे तो धमकी दे देंगी
धर्मगुरु को बास्टर्ड बोल देंगी pic.twitter.com/TqLnDL1KNQ— Shubhangi Pandit (@Babymishra_) July 31, 2025
ಈ ಮಾಹಿತಿಯೊಂದಿಗೆ ಗೂಗಲ್ನಲ್ಲಿ ಸುಜಿತ್ ಪಾಂಡೆ ಎಂಬ ಕೀವರ್ಡ್ನಿಂದ ಹುಡುಕಿದಾಗ ಇದೇ ಹೆಸರಿನ ಯೂಟ್ಯೂಬ್ ಚಾನೆಲ್ನ ಲಿಂಕ್ ಒಂದು ಸಿಕ್ಕಿತು. ಈ ಯೂಟ್ಯೂಬ್ ಚಾನೆಲ್‌ನಲ್ಲಿ ಮೂಲ ವೀಡಿಯೊ ಕೂಡ ಕಂಡುಬಂದಿದೆ. ಇಲ್ಲಿ ಇದನ್ನು ಜೂನ್ 1, 2023 ರಂದು ಅಪ್‌ಲೋಡ್ ಮಾಡಲಾಗಿದೆ. ಸುಮಾರು 5 ನಿಮಿಷಗಳ ಹಿಂದಿನ ಈ ವೀಡಿಯೊದಲ್ಲಿ, 14 ಸೆಕೆಂಡುಗಳಲ್ಲಿ ಡಿಸ್‌ಕ್ಲೈಮರ್ ಕಾಣಬಹುದು.
ಈ ವಿಡಿಯೋ ಕೇವಲ ಮನರಂಜನಾ ಉದ್ದೇಶಗಳಿಗಾಗಿ ಮಾತ್ರ ಮಾಡಲಾಗಿದೆ ಎಂದು ಡಿಸ್‌ಕ್ಲೈಮರ್‌ನಲ್ಲಿ ಹೇಳಲಾಗಿದೆ. ಇದೇ ಯೂಟ್ಯೂಬ್ ಚಾನೆಲ್‌ನಲ್ಲಿ ಸುಜಿತ್ ಪಾಂಡೆ ಅವರ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಖಾತೆಯ ಲಿಂಕ್ ಇದ್ದು, ಅದನ್ನು ಪರಿಶೀಲಿಸಿದಾಗ ಆತ ಕಂಟೆಂಟ್ ಕ್ರಿಯೇಟರ್ ಎಂದು ಸ್ಪಷ್ಟವಾಗಿ ಬರೆದಿರುವುದು ಕಂಡಿದೆ. ಇವರ ಖಾತೆಯಲ್ಲಿ ಇಂತಹ ಅನೇಕ ಸ್ಕ್ರಿಪ್ಟ್ ಮತ್ತು ತಮಾಷೆಯ ವಿಡಿಯೋಗಳಿವೆ.
ವೈರಲ್ ವಿಡಿಯೋದಲ್ಲಿ ಕಾಣುವ ಹುಡುಗಿ ಕೂಡ ಕಂಟೆಂಟ್ ಕ್ರಿಯೇಟರ್, ಆಕೆಯ ಹೆಸರು ಅಂಕಿತಾ ಕರೋಟಿಯಾ. ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿರುವ ಇನ್ನೂ ಅನೇಕ ವೀಡಿಯೊಗಳನ್ನು ಅವರಿಬ್ಬರ ಚಾನೆಲ್‌ಗಳಲ್ಲಿ ನೋಡಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, ಹಿಂದೂ ಗೆಳತಿಯ ಮೇಲೆ ಮುಸ್ಲಿಂ ಯುವಕ ಹಲ್ಲೆ ನಡೆಸುತ್ತಿದ್ದಾನೆ ಎಂದು ವೈರಲ್ ಆಗಿರುವ ವಿಡಿಯೋವನ್ನು ಸ್ಕ್ರಿಪ್ಟ್ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಪಶ್ಚಿಮ ಬಂಗಾಳದಲ್ಲಿ ಹಿಂದೂ ಮನೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಬಾಂಗ್ಲಾದೇಶದ ವಿಡಿಯೋ ಹಂಚಿಕೆ

