FACT CHECK | ನೀರಿನ ರಭಸಕ್ಕೆ ಸೇತುವೆ ಕೊಚ್ಚಿ ಹೋಗಿದೆ ಎಂದು AI ವಿಡಿಯೋ ಹಂಚಿಕೆ

ಪ್ರಕೃತಿಯ ಪ್ರಚಂಡತೆ: ನೀರಿನ ಹೊಡೆತಕ್ಕೆ ತತ್ತರಿಸಿದ ಸೇತುವೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ. ನೀರಿನ ರಭಸಕ್ಕೆ ಸೇತುವೆ ಕೊಚ್ಚಿ ಹೋಗಿದೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

ನೀರಿನ ಹೊಡೆತಕ್ಕೆ ತತ್ತರಿಸಿದ ಸೇತುವೆ ಎಂದು ಎಐ ವೀಡಿಯೋ ವೈರಲ್

ಫೇಸ್ಬುಕ್ ನಲ್ಲಿ ಈ ಹೇಳಿಕೆ ಕಂಡುಬಂದಿದ್ದು, ಈ ಪೋಸ್ಟ್‌ನಲ್ಲಿ ಮಾಡಿದದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ಸೇತುವೆ ಮೇಲೆ ನೀರಿನ ಅಲೆ ಬಂದಪ್ಪಳಿಸುವ ವೀಡಿಯೋವನ್ನು ಕೂಲಂಕಷವಾಗಿ ಗಮನಿಸಿದ್ದೇವೆ. ಈ ವೇಳೆ ಇದರ ದೃಶ್ಯಗಳು ಅಸಹಜತೆಯಿಂದ ಕೂಡಿರುವುದು ಮತ್ತು ನೀರು ಅಪ್ಪಳಿಸಿದರೂ ವಾಹನಗಳು ಸಾಮಾನ್ಯವೆಂಬಂತೆ ಮುಂದೆ ಸಾಗುತ್ತಿರುವುದು ಕಂಡುಬಂದಿದೆ.

ಆ ಬಳಿಕ ನಾವು ವೀಡಿಯೋದ ಕೀಫ್ರೇಮ್ ಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಹಲವು ಸಮಯಗಳ ಹಿಂದೆಯೂ ಈ ವೀಡಿಯೋವನ್ನು ಪೋಸ್ಟ್ ಮಾಡಿರುವುದು ಕಂಡುಬಂದಿದೆ.

ನೀರಿನ ಹೊಡೆತಕ್ಕೆ ತತ್ತರಿಸಿದ ಸೇತುವೆ ಎಂದು ಎಐ ವೀಡಿಯೋ ವೈರಲ್

ನಂತರ ನಾವು ಕೀಫ್ರೇಮ್ ಗಳನ್ನು ವಿವಿಧ ಎಐ ಪತ್ತೆ ಸಾಧನಗಳ ಮೂಲಕ ಪರಿಶೀಲಿಸಿದ್ದೇವೆ. ಎಐ ಪತ್ತೆ ಸಾಧನ ಸೈಟ್ ಎಂಜಿನ್ ಮೂಲಕ ವೈರಲ್ ಕೀಫ್ರೇಮ್ ಪರಿಶೀಲಿಸಿದಾಗ, 99%ರಷ್ಟು ಎಐನಿಂದ ಮಾಡಿದ್ದಾಗಿದೆ ಎಂದು ಅದು ಹೇಳಿದೆ.

ನೀರಿನ ಹೊಡೆತಕ್ಕೆ ತತ್ತರಿಸಿದ ಸೇತುವೆ ಎಂದು ಎಐ ವೀಡಿಯೋ ವೈರಲ್

ವಾಸ್‌ ಇಟ್ ಎಐ ಮೂಲಕ ಪರಿಶೀಲಿಸಿದಾಗ, ಈ ಚಿತ್ರ ಅಥವಾ ಅದರ ಭಾಗ ಎಐನಿಂದ ಮಾಡಿದ್ದಾಗಿದೆ ಎಂಬುದಾಗಿದೆ ಎಂದು ಹೇಳಿದೆ. ಡಿಕಾಪಿ ಎಐ ಮೂಲಕ ಪರಿಶೀಲಿಸಿದಾಗ, 99.99% ಇದು ಎಐನಿಂದ ಮಾಡಿದ್ದಾಗಿದೆ ಎಂಬುದನ್ನು ಖಚಿತಪಡಿಸಿದೆ.

ನೀರಿನ ಹೊಡೆತಕ್ಕೆ ತತ್ತರಿಸಿದ ಸೇತುವೆ ಎಂದು ಎಐ ವೀಡಿಯೋ ವೈರಲ್

ಒಟ್ಟಾರೆಯಾಗಿ ಹೇಳುವುದಾದರೆ, ಈ ವಿಡಿಯೋ ಎಐನಿಂದ ಮಾಡಿದ್ದಾಗಿದ್ದು, ನೀರಿನ ಹೊಡೆತಕ್ಕೆ ತತ್ತರಿಸಿದ ಸೇತುವೆ ಎಂದ ವಿಡಿಯೋ ನಿಜವಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಡಾ. ಮನಮೋಹನ್ ಸಿಂಗ್ ಚೀನಾದ ನಿಯೋಗವನ್ನು ಭೇಟಿಯಾಗುತ್ತಿರುವ ಈ ಸಂದರ್ಭದಲ್ಲಿ ಅವರು ಭಾರತದ ಪ್ರಧಾನಿ ಆಗಿರಲಿಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights