ಗಣೇಶ ಮಹೋತ್ಸವ, ಮೊಹರಂಗೆ ಮದ್ಯ ನಿಷೇಧ : ಅಕ್ರಮ ಸೇಂದಿ ಮಾರಾಟ ಜೋರು

ರಾಯಚೂರಿನಲ್ಲಿ ಗಣೇಶ ಮಹೋತ್ಸವ ಹಾಗೂ ಮೊಹರಂ ಕಾರಣ ಮದ್ಯ ಮಾರಾಟ ನಿಷೇಧ ಹಿನ್ನೆಲೆ ಅಕ್ರಮ ಸಿಎಚ್ ಪೌಡರ್ ಕಲಬೆರಿಕೆ ಸೇಂದಿ ಮಾರಾಟ ಜೋರಾಗಿದೆ. ನಗರದ ಮೈಲಾರನಗರದಲ್ಲಿ ದಾಳಿ ನಡೆಸಿದ ಅಬಕಾರಿ ವಿಚಕ್ಷಣ ದಳದ ಅಧಿಕಾರಿಗಳು ಭಾರೀ ಪ್ರಮಾಣದ ಸೇಂದಿ ಹಾಗೂ ಸೇಂದಿ ತಯಾರಿಕಾ ವಸ್ತುಗಳನ್ನ ಜಪ್ತಿಮಾಡಿದ್ದಾರೆ.

ಆರೋಪಿ ನರಸಿಂಹಲು ಅಲಿಯಾಸ್ ಬ್ರೂಸ್ಲಿ ಗೆ ಸೇರಿದ 200 ಲೀಟರ್ ಕಲಬೆರಿಕೆ ಸೆಂದಿ, 4 ಕೆಜಿ ಸಿಎಚ್ ಪೌಡರ್, ಈಸ್ಟ್ , ವೈಟ್ ಪೇಸ್ಟ್ ,ಸಕ್ಕರೆ, ಒಂದು ದ್ವಿಚಕ್ರ ವಾಹನವನ್ನ ಜಪ್ತಿಮಾಡಲಾಗಿದೆ. ಜಪ್ತಿಯಾಗಿರುವ ವಸ್ತುಗಳಿಂದ ಒಂದು ಲಕ್ಷ ಲೀಟರ್ ನಷ್ಟು ಕಲಬೆರಿಕೆ ಸೆಂದಿಯನ್ನ ತಯಾರಿಸಬಹುದಾಗಿದೆ.

ಈಗಾಗಲೇ ಸಾಕಷ್ಟು ಪ್ರಕರಣಗಳನ್ನ ಎದುರಿಸುತ್ತಿರುವ ಆರೋಪಿ ಬ್ರೂಸ್ಲಿ ಪರಾರಿಯಾಗಿದ್ದಾನೆ. ಅಬಕಾರಿ ಇಲಾಖೆ ವಿಚಕ್ಷಣ ದಳ ಅಧಿಕಾರಿ ಹನುಮಂತ ಗುತ್ತೇದಾರ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದೆ. ಹಬ್ಬಗಳ ಹಿನ್ನೆಲೆ ರಾಯಚೂರಿನಲ್ಲಿ ಮೂರುದಿನಗಳ ಕಾಲ ನಿಷೇಧ ಹೇರಿರುವುದನ್ನೇ ಬಂಡವಾಳ ಮಾಡಿಕೊಂಡು ಅಕ್ರಮ ಕಲಬೆರಿಕೆ ಸೇಂದಿ ದಂಧೆ ಕೋರರು ಎಗ್ಗಿಲ್ಲದೆ ಸೆಂದಿ ತಯಾರಿಕೆ ಹಾಗೂ ಮಾರಾಟ ನಡೆಸಿದ್ದಾರೆ.

ಹೀಗಾಗಿ ಅಬಕಾರಿ ಇಲಾಖೆ ನಿನ್ನೆಯಿಂದ ನಿರಂತರ ದಾಳಿ ನಡೆಸಿದೆ. ನಿನ್ನೆ ದೇವದುರ್ಗದಲ್ಲಿ ಕಳ್ಳಭಟ್ಟಿ ತಯಾರಿಕೆಗೆ ಬಳಸುವ 180 ಲೀ ಬೆಲ್ಲದ ಕೊಳೆ ಜಪ್ತಿಮಾಡಿ ಎರಡು ಪ್ರತ್ಯೇಕ ಪ್ರಕರಣಗಳನ್ನ ದಾಖಲಿಸಿಕೊಂಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights