ಬಿಜೆಪಿ ಪಕ್ಷವನ್ನು ಫಿಶ್ ಮಾರ್ಕೆಟ್ ಗೆ ಹೋಲಿಸಿದ ಜಮೀರ್ ಅಹ್ಮದ್ ಖಾನ್..

ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಬಿಜೆಪಿ ಪಕ್ಷವನ್ನು ಫಿಶ್ ಮಾರ್ಕೆಟ್ ಗೆ ಹೋಲಿಸಿ ವಿವಾದವನ್ನು ಸೃಷ್ಟಿಸಿದ್ದಾರೆ.

ಹೌದು..  ಉಮೇಶ್ ಕತ್ತಿ ಸಿಎಂ ಆಗುವ ಅರ್ಹತೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಜಮೀರ್ ಅಹಮ್ಮದ್ ಖಾನ್, ಉಮೇಶ್ ಕತ್ತಿ ಅಷ್ಟೇ ಅಲ್ಲ ಬಿಜೆಪಿಯಲ್ಲಿ ಹಲವ್ರು ಸಿಎಂ ಆಕಾಂಕ್ಷಿಗಳಿದ್ದಾರೆ. ಅವ್ರ ಹೆಸರು ನಾನು ಹೇಳೋಕೆ ಹೋಗಲ್ಲ. ಸಿಎಂ ನಾನಾಗ್ಬೇಕು,ನೀನಾಗ್ಬೇಕು ಎಂದು ಒಂದು ರೀತಿ ಬಿಜೆಪಿ ಫಿಶ್ ಮಾರ್ಕೆಟ್ ಆಗಿದೆ. ಕರ್ನಾಟಕದಲ್ಲಿರೋ ಬಿಜೆಪಿ ಸರ್ಕಾರ ಫಿಶ್ ಮಾರ್ಕೆಟ್ ಆಗಿದೆ. ಎಲ್ಲರೂ ಸಿಎಂ ಆಗ್ಬೇಕಂತಾರೆ ಎಂದು ಹೇಳಿದ್ದಾರೆ.

ನಮ್ಮ ಪಕ್ಷದಲ್ಲಿ ಸಿದ್ದರಾಮಯ್ಯ ಒಬ್ರೇ ನಾಯಕರಾಗಿದ್ರು, ಸಿದ್ದರಾಮಯ್ಯ ಒಬ್ರೇ ಸಿಎಂ ಆಗಿದ್ರು. ಉಮೇಶ್ ಕತ್ತಿ ತರಹ ಬಹಳಷ್ಟು ಶಾಸಕರು ತಾವೇ ಸಿಎಂ ಆಗ್ಬೇಕೆಂದು ಎದ್ದು ನಿಂತಿದ್ದಾರೆ. ಸಿಎಂ ಬಿಎಸ್ವೈ ಬಿಜೆಪಿಯ ಯಾವ ಶಾಸಕರ ಮಾತು ಕೇಳ್ತಿಲ್ಲ.

ಬಿಎಸ್ವೈ ಹಿಟ್ಲರ್ ರೀತಿ ನಡೆದುಕೊಳ್ತಿದ್ದಾರೆ. ನನಗೆ ಬಂದಿರೋ ಮಾಹಿತಿ ಪ್ರಕಾರ ೪೦ಜನ ಬಿಜೆಪಿ ಶಾಸಕರು ಅಸಮಾಧಾನವಿದೆ. ಖಂಡಿತವಾಗಿಯೂ ಆರು ತಿಂಗಳ ಮೇಲೆ ಬಿಜೆಪಿ ಸರ್ಕಾರ ಇರಲು ಸಾಧ್ಯವಿಲ್ಲ. ಬಿಜೆಪಿ ಸರ್ಕಾರದ ಪತನವಾಗುತ್ತೆಂದು ಜಮೀರ್ ಅಹ್ಮದ್ ಖಾನ್ ಭವಿಷ್ಯ ನುಡಿದಿದ್ದಾರೆ.

ಬೈ ಎಲೆಕ್ಷನ್ ರಿಸಲ್ಟ್ ಅಕ್ಟೋಬರ್ ೨೩ಕ್ಕೆ ಬರುತ್ತೆ. ಬಿಜೆಪಿ ಸರ್ಕಾರ ಉಳಿಸಿಕೊಳ್ಳೋಕೆ ೮ಸ್ಥಾನ ಗೆಲ್ಲಲೇಬೇಕು. ಅದು ಸಾಧ್ಯನೇ ಇಲ್ಲ. ನಾವು , ಜೆಡಿಎಸ್ ಸೇರಿ ೧೪,೧೫ಸ್ಥಾನ ಗೆಲ್ಲುತ್ತೇವೆ.೬ತಿಂಗಳ ಹೋಗಲ್ಲ,ಬೈ ಎಲೆಕ್ಷನ್ ರಿಸಲ್ಟ್ ಬಂದ ಎರಡೇ ದಿನಕ್ಕೆ ಸರ್ಕಾರ ಹೋಗುತ್ತೆ. ಬೈ ಎಲೆಕ್ಷನ್ ಹಿನ್ನೆಲೆಯಲ್ಲಿ ಬಿಜೆಪಿ ಪ್ಲಾನ್ ಮಾಡಿ ಡಿಕೆಶಿಯನ್ನು ಒಳಗೆ ಹಾಕಿದೆ. ನ್ಯಾಯಾಲಯದ ಮೇಲೆ ವಿಶ್ವಾಸವಿದೆ. ಇವತ್ತು ಡಿಕೆಶಿಗೆ ಬೇಲ್ ಆಗುತ್ತೆ ಅನ್ನೋ ವಿಶ್ವಾಸವೂ ಇದೆ. ಡಿಕೆಶಿ ಹೊರಬಂದ್ರೆ ನಮಗೆ ಆನೆಬಲ ಬಂದಂತಾಗುತ್ತೆ ಎಂದಿದ್ದಾರೆ.

ಇನ್ನೂ ಹೆಚ್ ಡಿ ಕೆ, ಸಿದ್ದರಾಮಯ್ಯ ಗಿಣಿ, ಹದ್ದು ವಿಚಾರದಲ್ಲಿ ಟಾಕ್ ವಾರ್ ವಿಚಾರ ಮಾತನಾಡಿ ಎಚ್ ಡಿಕೆಗೆ ಜಮೀರ್ ಅಹಮ್ಮದ್ ಖಾನ್ ಟಾಂಗ್ ಕೊಟ್ಟಿದ್ದಾರೆ.

ಕುಮಾರಸ್ವಾಮಿ ಈ ಚುನಾವಣೆ ದೃಷ್ಠಿಯಿಂದ ಹೇಳ್ತಿದ್ದಾರೆ. ಮೊದಲು ಯಾಕೆ ಹೇಳಲಿಲ್ಲ. ಸರ್ಕಾರ ಬಿತ್ತಲ್ಲ ಅವತ್ತೆ ಸಿದ್ದರಾಮಯ್ಯ ಬೀಳಿಸಿದ್ರು ಅಂತ ಯಾಕೆ ಕುಮಾರಸ್ವಾಮಿ ಹೇಳಲಿಲ್ಲ. ಒಂದೊಮ್ಮೆ ಸಿದ್ದರಾಮಯ್ಯ ಸರ್ಕಾರ ಬೀಳಿಸಿದ್ರೆ. ನಮ್ಮಲ್ಲಿಂದ ಹೋದ ೧೫ಜನ ಅತೃಪ್ತರ ಶಾಸಕರನ್ನು ಅನರ್ಹಗೊಳಿಸಿದವರು ಯಾರು..? ಅತೃಪ್ತ ಕಾಂಗ್ರೆಸ್ ಶಾಸಕರಿಗೆ ತಕ್ಕ ಪಾಠ ಕಲಿಸ್ಬೇಕೆಂದಲೇ ಸಿದ್ದರಾಮಯ್ಯ ಅನರ್ಹಗೊಳಿಸಿದ್ರು. ಸಿದ್ದರಾಮಯ್ಯವನವ್ರೇ ಅತೃಪ್ತ ಶಾಸಕರನ್ನು ಕಳುಹಿಸಿದ್ರೆ.ಯಾಕೆ ಅನರ್ಹಗೊಳಿಸ್ತಿದ್ರು ಎಂದು ಪ್ರಶ್ನೆ ಮಾಡಿದ್ದಾರೆ.

ಹೆಚ್ ಡಿಕೆಗೆ ಏನೋ ಒಂದು ಚಟಕ್ಕೆ ಅವರಿಗೊಂದು ಅಭ್ಯಾಸ. ಎಚ್ ಡಿ ಕೆಗೆ ಹಿಟ್ ಆಂಡ್ ಡ್ರೈವ್ ಅಂತ ಎಲ್ಲರೂ ಪಟ್ಟಕಟ್ಟಿದ್ದಾರೆ. ಯಾವತ್ತೂ ಕೂಡಾ ಎಚ್ ಡಿ ಕೆ ಹಿಟ್ ಆಂಡ್ ಡ್ರೈವ್ ಮಾಡುವರೇ. ೧ವರ್ಷ ೨ತಿಂಗಳು ಎಚ್ ಡಿಕೆ ಸಿಎಂ ಆಗಿದ್ರು ಅವಾಗ ಯಾಕೆ ಹೇಳ್ಲಿಲ್ಲ. ಆಡಳಿತದಲ್ಲಿದ್ದಾಗ ಎಚ್ ಡಿ ಕೆ ಸಿದ್ದರಾಮಯ್ಯನವರೇ ನಮ್ಮ ನಾಯಕರು ಎಂದು ಹತ್ತಾರು ಬಾರಿ ಸಮಾರಂಭದಲ್ಲೇ ಹೇಳಿದ್ದಾರೆ. ಸರ್ಕಾರ ಬಿದ್ದು ೨ತಿಂಗಳಿಗೆ ಈ ರೀತಿ ಹೇಳ್ತಿದ್ದಾರೆ ಅಂದ್ರೆ ನಾವು ಅರ್ಥಮಾಡಿಕೊಳ್ಳಬೇಕು. ಎಚ್ ಡಿ ಕೆ ಬೈ ಎಲೆಕ್ಷನ್ ನಲ್ಲಿ ಸಿಂಪಥಿ ಗಿಟ್ಟಿಸಿಕೊಳ್ಳಲು ಈ ರೀತಿ ಮಾತನಾಡ್ತಿದ್ದಾರೆ. ಗಿಣಿ,ಹದ್ದು ಯಾರೆಂಬುದನ್ನು ಎಚ್ ಡಿ ಕೆ, ಸಿದ್ದರಾಮಯರನ್ನೇ ಕೇಳಿ ಎಂದ ಜಮೀರ್ ಹೇಳಿದ್ದಾರೆ.

ಅನರ್ಹರ ಭವಿಷ್ಯ ಇನ್ನೂ ತೀರ್ಮಾನವಾಗಿಲ್ಲ. ಏನೇಯಾದರೂ ಚುನಾವಣೆ ನಡೆಯಲೇಬೇಕು. ಅವ್ರೇ ಅಭ್ಯರ್ಥಿ ಆಗ್ತಾರೋ,ಬೇರೆಯವ್ರು ನಿಲ್ತಾರೋ ಗೊತ್ತಿಲ್ಲ.

ನಮ್ಗೆ ನೂರಕ್ಕೆ ನೂರು ವಿಶ್ವಾಸವಿದೆ,೧೫ಕ್ಷೇತ್ರ ಗೆಲ್ತೇವೆ. ಅನರ್ಹರಿಗೆ ಟಿಕೆಟ್ ಹಂಚಿಕೆಯಲ್ಲಿನ ಅಸಮಾಧಾನ ಬಿಜೆಪಿ ಯಾವ ರೀತಿ ಮ್ಯಾನೇಜ್ ಮಾಡುತ್ತೆ ಅಂತ ನನಗೆ ಗೊತ್ತಿಲ್ಲ. ಮೊದಲಿನಿಂದ ಆಯಾಯ ಕ್ಷೇತ್ರದಲ್ಲಿ ಬಿಜೆಪಿಯವ್ರು ಇದ್ದಾರೆ. ಈಗ ಪಾಪ ನಮ್ಮವರನ್ನು ತೆಗೆದುಕೊಂಡಿದ್ದಾರೆ. ನಮ್ಮವರಿಗೆ ಟಿಕೆಟ್ ಕೊಡೋಕೆ ಹೊರಟಿದ್ದಾರೆ,ಪಾಪ ಅವರ ಗತಿಯೇನು. ಅಧಿಕಾರಗೋಸ್ಕರ ಮೂಲ ಬಿಜೆಪಿಯವರನ್ನು ಬಲಿಕೊಡ್ತಿದ್ದಾರೆ. ಇವ್ರು ಅಧಿಕಾರಕ್ಕೋಸ್ಕರ ೪೦ವರ್ಷ ದುಡಿದವರಿಗೆ ಬಿಟ್ಟು ನಮ್ಮವರಿಗೆ ಟಿಕೆಟ್ ಕೊಡೋದು ಎಷ್ಟು ಸರಿ ಎಂದು ಕೇಳಿದ್ದಾರೆ.

ಬಿಎಸ್ವೈ ಸಿಎಂ ಆದ್ರೆ ಬಿಎಸ್ವೈ ಮನೆ ವಾಚ್ ಮ್ಯಾನ್ ಆಗುವ ಜಮೀರ್ ಹೇಳಿಕೆಗೆ ಸ್ಪಷ್ಟನೆ ನೀಡಿದ ಮಾಜಿ ಸಚಿವ ಜಮೀರ್ ಅಹಮ್ಮದ್ ಖಾನ್, ಹಿಂದೆ ನಡೆದ ಬೈ ಎಲೆಕ್ಷನ್ ನಲ್ಲಿ ೨ಸ್ಥಾನ ಗೆದ್ದು ಬಿಎಸ್ವೈ ಸಿಎಂ ಆಗ್ತೀನಿ ಅಂದಿದ್ರು. ಮೇ, ೨೩ ರಂದು ಸಿಎಂ ಆಗ್ತಿನಿ ಅಂದಿದ್ರು. ಆಗ ನಾನು ಮೇ ೨೩ ಅಲ್ಲ ಇನ್ನೆರಡು ದಿನ ಮೇ ೨೫ ರಂದು ಸಿಎಂ ಆದ್ರೆ ವಾಚಮ್ಯಾನ್ ಆಗ್ತೀನಿ ಅಂದಿದ್ದೆ. ಆ ಸಮಯದಲ್ಲಿ ಬಿಎಸ್ವೈ ಸಿಎಂ ಆಗಿದ್ರೆ ೧ದಿನ ಅಲ್ಲ,೧ವಾರ ಬಿಎಸ್ವೈ ಮನೆ ವಾಚ್ ಮ್ಯಾನ್ ಆಗ್ತಿದ್ದೆ ಎಂದು ಜಮೀರ್ ಅಹಮ್ಮದ್ ಖಾನ್ ಸ್ಪಷ್ಟನೆ ನೀಡಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights