ಹಬ್ಬದೂಟ ಮಾಡಲು ತೆರಳುತ್ತಿದ್ದ ಇಬ್ಬರು ಯುವಕರ ಧಾರುಣ ಸಾವು..!

ಹಬ್ಬದೂಟ ಮಾಡಲು ತೆರಳುತ್ತಿದ್ದ ಇಬ್ಬರು ಯುವಕರ ಧಾರುಣ ಸಾವನ್ನಪ್ಪಿದ ಘಟನೆ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಬಸವನಹಳ್ಳಿ ಬಳಿ ನಡೆದಿದೆ.

ಪ್ರವಾಹಕ್ಕೆ ಕೊಚ್ಚಿ‌ಹೋಗಿದ್ದ ಸೇತುವೆ ಮೇಲಿಂದ ಬೈಕ್ ಸಮೇತ ಬಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೈಸೂರು ಜಿಲ್ಲೆ ಸಾಲಿಗ್ರಾಮ ಮೂಲದ ರಂಗಸ್ವಾಮಿ,ಸಿದ್ದರಾಜು ಮೃತ ಯುವಕರು.

ಸಾಲಿಗ್ರಾಮದಿಂದ ಬಸವನಹಳ್ಳಿಗೆ ಹಬ್ಬಕ್ಕೆ ಬರುತ್ತಿದ್ದಾಗ ಸೇತುವೆ ಕುಸಿದಿರೋ ಬಗ್ಗೆ ಮಾಹಿತಿಯಿಲ್ಲದೆ ಬಂದು ಕತ್ತಲಲ್ಲಿ ಬೈಕ್ ಕೆಳಕ್ಕುರುಳಿ ಬಿದ್ದಿದೆ. ಮೇಲಿಂದ ಬಿದ್ದ ರಭಸಕ್ಕೆ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.

ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights