ಶಾಲಾ ಆವರಣದಲ್ಲಿಯೇ ಬಿಜೆಪಿ ಪ್ರಚಾರ ಸಭೆ : ಮಕ್ಕಳ ಪಾಠ ಕಲಿಕೆಗೆ ತೊಂದರೆ..!
ಶಾಲಾ ಆವರಣದಲ್ಲಿಯೇ ಬಿಜೆಪಿ ಪ್ರಚಾರ ಸಭೆ ನಡೆಸುತ್ತಿದ್ದು, ತರಗತಿಗಳನ್ನು ನಡೆಸಲು ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹುಲಗಬಾಳಿ ಗ್ರಾಮದ ಬೀರೇಶ್ವರ ವಿದ್ಯಾವರ್ಧಕ ಪ್ರಾಥಮಿಕ ಶಾಲೆ ಎದುರಿನಲ್ಲೇ ಬಿಜೆಪಿ ಪ್ರಚಾರ ಭಾಷಣ ಮಾಡಲಾಗುತ್ತಿದೆ. ಡಿಸಿಎಂ ಲಕ್ಷ್ಮಣ ಸವದಿ, ಅಥಣಿ ಬಿಜೆಪಿ ಅಭ್ಯರ್ಥಿ, ಅನರ್ಹ ಶಾಸಕ ಮಹೇಶ ಕುಟಮಳ್ಳಿಯಿಂದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದರು.
ಶಾಲಾ ಕೊಠಡಿ ಎದುರೇ ನಿಲ್ಲಿಸಿದ ಪ್ರಚಾರದ ಧ್ವನಿವರ್ಧಕದಿಂದ ಮಕ್ಕಳ ಪಾಠ ಕಲಿಕೆಗೆ ತೊಂದರೆಯಾಗುತ್ತಿದ್ದ ವಿಡಿಯೋ ಸದ್ಯ ವೈರಲ್ ಆಗಿದೆ.

