ಜಾತಿಭೇದ ಮರೆತು ಗೌರಿ-ಗಣೇಶನ ಹಬ್ಬ ಆಚರಿಸಿದ ಯುವಕರು….

ಜಾತಿಭೇದ ಮರೆತು ಯುವಕರ ಗುಂಪೊಂದು ಗೌರಿ-ಗಣೇಶ ಹಬ್ಬವನ್ನು ಆಚರಣೆ ಮಾಡಿದೆ.

ಹೌದು.. ಆಗಷ್ಟ ೨೫ ರಂದು ಲಿಂಗಸಗೂರು ಪಟ್ಟಣದಲ್ಲಿ ಎರಡು ಕೋಮುಗಳ‌ ಮಧ್ಯೆ ವೈಮನಸ್ಸು ಉಂಟಾಗಿತ್ತು, ಯುವಕನೊಬ್ಬ ಧಾರ್ಮಿಕ ಭಾವನೆ ಕೆರಳುವಂಥ ಪೋಸ್ಟಗಳನ್ನು ಫೇಸ್ ಬುಕ್ ಪೋಸ್ಟ ಮಾಡಿದ ಹಿನ್ನೆಲೆಯಲ್ಲಿ ಸ್ವಲ್ಪ ತ್ವೇಷಮಯ ವಾತವರಣ ಉಂಟಾಗಿತ್ತು.

ಆದರೆ ಈಗ ಭಾವೈಕ್ಯತೆ ಸಾರುವ ಉದ್ದೇಶದಿಂದ ರಾಮ ರಹಿಮ ಎಂಬ ಸಂಘದಿಂದ ಗಣೇಶ ಮೂರ್ತಿ ಪ್ರತಿಷ್ಟಾಪಿಸಿ ಗಮನ ಸೆಳೆಯುತ್ತಿದ್ದಾರೆ. ಹಿಂದು ಹಾಗು ಮುಸ್ಲಿಂ ಜನಾಂಗದ ಯುವಕರು ಸೇರಿ ಪೊಲೀಸ್ ಠಾಣೆಯ ಮುಂದೆ ಇರುವ ಬಡಾವಣೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದಾರೆ.

ಇದೇ ನಿಜವಾಗಿ ಭಾರತದ ಸಾಮರಸ್ಯ ಎಂಬಂತೆ ಭಾವೈಕ್ಯ ಸಾಮರಸ್ಯ ಸಾರಿದ್ದಾರೆ, ಗಣೇಶ ಪ್ರತಿಷ್ಠಾಪಿಸಿದ ಸ್ಥಳಕ್ಕೆ ಲಿಂಗಸಗೂರು ಪಿಎಸ್ಐ ಪ್ರಕಾಶ ಡಂಬಳ ಭೇಟಿ ನೀಡಿ ಪ್ರೋತ್ಸಾಹಿಸಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights