ಸಿಲಿಂಡರ್ ಸ್ಪೋಟ ಹೊತ್ತಿ ಉರಿದ ಮೂರು ಮನೆಗಳು : ವಿಡಿಯೋ ವೈರಲ್
ಸಿಲಿಂಡರ್ ಸ್ಪೋಟ ಹೊತ್ತಿಕೊಂಡು ಮೂರು ಮನೆಗಳು ಉರಿದ ಘಟನೆ ಬೆಳಗಾವಿ ತಾಲೂಕಿನ ಹಲಗಾ ಗ್ರಾಮದಲ್ಲಿ ನಡೆದಿದೆ.
ಹೊತ್ತಿ ಉರಿದ ಬಾಳು ಚಿಕ್ಕಬಾಳಪ್ಪ, ಸುನೀಲ್, ಶಾಂತಿನಾಥ ಎಂಬವರ ಮನೆಗಳು ಬೆಂಕಿಗಾಹುತಿಯಾಗಿವೆ. ಗ್ಯಾಸ್ ಲೀಕ್ ಆಗಿ ದೇವರ ಮನೆಯಲ್ಲಿದ್ದ ದೀಪದಿಂದ ಬೆಂಕಿ ಹೊತ್ತಿಕೊಂಡ ಪರಿಣಾಮ ನಂತರ ಸಿಲಿಂಡರ್ ಸ್ಪೋಟಗೊಂಡು ಪಕ್ಕದ ಮನೆಗೂ ಬೆಂಕಿ ವ್ಯಾಪಿಸಿದೆ.
ಅದೃಷ್ಟವಶಾತ್ ಮೂರು ಕುಟುಂಬದ ಸದಸ್ಯರು, ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಅಗ್ನಿ ಶಾಮಕ ದಳ ಮತ್ತು ಪೊಲೀಸರು ಆಗಮಿಸಿದ್ದಾರೆ.