ಬಸ್ ನಿಲ್ದಾಣದಲ್ಲೇ ಹುಡುಗಿಯರಿಬ್ಬರು ಹೊಡೆದಾಟ : ವಿಡಿಯೋ ವೈರಲ್

ಹುಡುಗಿಯರಿಬ್ಬರು ಜಗಳ ಮಾಡಿಕೊಂಡು ಹೊಡೆದಾಡಿಕೊಂಡಿರುವ ಘಟನೆ ತುಮಕೂರು ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಸೋಮವಾರ ಸಾರ್ವಜನಿಕವಾಗಿಯೇ ಜಗಳವಾಡಿ ಕೊನೆಗೆ ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿದ್ದಾರೆ. ಒಬ್ಬರಿಗೊಬ್ಬರು ಜುಟ್ಟು ಹಿಡಿದುಕೊಂಡು ನೂಕಾಟ ತಳ್ಳಾಟ ಮಾಡಿಕೊಂಡು ಕೆಳಗಡೆ ಬಿದ್ದು ಹೊಡೆದಾಟ ಮಾಡಿಕೊಂಡಿದ್ದಾರೆ.

ವೈರಲ್: ಎರಡು ಜಡೆಗಳ ನಡುವೆ ನಡೆದಿರುವ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣ ಹಾಗೂ ವಾಟ್ಸ್ ಅಪ್ ನಲ್ಲಿ ವೈರಲ್ ಆಗಿದೆ. ವಿವಿಧ ವಾಟ್ಸ್ ಅಫ್ ಗ್ರೂಪ್ ನಲ್ಲಿ ‘ಏನ್ ಗುರು ನಮ್ ತುಮಕೂರಲ್ಲಾ?, ನಾವಿದ್ದಾಗ ಇಂತಹದ್ಯಾವದೂ ಕಾಣಲಿಲ್ಲ.’ ಎಂದು ಚರ್ಚೆಯಾಗುತ್ತಿದೆ.

ಯಾವ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದಾರೆಂಬುದು ತಿಳಿದು ಬಂದಿಲ್ಲ. ಅದರೆ, ಸಾರ್ವಜನಿಕ ಸ್ಥಳದಲ್ಲೇ ಹೊಡೆದಾಡಿರುವ ಇಬ್ಬರಿಗೂ ಹಿರಿಯರು ಬೈದು ಬುದ್ದಿವಾದ ಹೇಳಿ ಕಳುಹಿಸಿದ್ದಾರೆನ್ನಲಾಗಿದೆ. ಇಬ್ಬರೂ ಕಾಲೇಜು ಹುಡುಗಿಯರೇ ಆಗಿದ್ದಾರೆಂದು ಹೇಳಲಾಗುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights