ಬ್ಲ್ಯಾಕ್ ಮೇಲ್ ಮಾಡಿದ್ದಾರೆಂದು ನಿರ್ಮಾಪಕಿ ವಂದನಾ ವಿರುದ್ಧ ನಟಿ ಸಂಜನಾ ದೂರು..
ನಟಿ ಸಂಜನಾ ಗಲ್ರಾನಿ ಹಾಗೂ ನಿರ್ಮಾಪಕಿ ವಂದನಾ ಜೈನ್ ನಡುವಣ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜನಾ ಇಂದು ಕೇಂದ್ರೀಯ ವಿಭಾಗದ ಡಿಸಿಪಿ ಅವರನ್ನು ಭೇಟಿ ಮಾಡಿ ದೂರು ನೀಡಿದ್ದಾರೆ. ತಮ್ಮನ್ನು ಬ್ಲ್ಯಾಕ್ ಮೇಲ್ ಮಾಡಿದ್ದು, ಈ ಬಗ್ಗೆ ತಾವು ಕಾನೂನು ಪ್ರಕಾರ ಪೊಲೀಸರಿಗೆ ದೂರು ನೀಡಿರುವುದಾಗಿ ಸಂಜನಾ ತಿಳಿಸಿದ್ದಾರೆ.
ಇಂದು ಕೇಂದ್ರೀಯ ಡಿಸಿಪಿ ಕಚೇರಿಗೆ ತಮ್ಮ ತಾಯಿ ಹಾಗೂ ತಂಗಿ ಜೊತೆ ತೆರಳಿದ್ದ ಸಂಜನಾ ದೂರು ನೀಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಂದನಾ ಜೈನ್ ಅವರು ತಮಗೆ ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ಈ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ತಮಗೆ ಜೈಲಿಗೆ ಹಾಕಿ ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿದರು.
ಇನ್ನು ತಾವು ವಂದನಾ ಜೈನ್ ಮೇಲೆ ಬಾಟಲಿಯಿಂದ ಹಲ್ಲೆ ಮಾಡಿದ್ದೇನೆಂದು ಹೇಳಲಾಗಿದೆ. ಒಂದು ವೇಳೆ, ಹಲ್ಲೆ ಮಾಡಿದ್ದರೆ ಅವರ ಮುಖದ ಮೇಲೆ ಗಾಯ ಇರಬೇಕಿತ್ತು. ವಿಡಿಯೋನಲ್ಲಿ ನನ್ನ ಕೈಯಲ್ಲಿ ಬಾಟಲಿ ಇರುವುದನ್ನು ಯಾರಾದ್ರೂ ನೋಡಿದ್ರಾ ಎಂದು ಪ್ರಶ್ನಿಸಿದರು…

