ಸಂಪುಟ ವಿಸ್ತರಣೆ ಆದ್ರೆ ಗೆದ್ದವರು ಇದ್ದವರ ನಡುವೆ ಮಹಾಯುದ್ಧ – ಸಿದ್ಧರಾಮಯ್ಯ

ಉಪ ಚುನಾವಣೆಯಲ್ಲಿ ಗೆದ್ದ ಶಾಸಕರು ಸಚಿವ ಸ್ಥಾನ ಸಿಗದೇ ಅಂತರ ಪಿಶಾಚಿಗಳಾಗಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯ ಪಿಜೆಪಿ ಸರ್ಕಾರದ ಸಂಪುಟ ವಿಸ್ತರಣೆ ಕನಸಿನ ಮಾತಾಗಿದೆ. ಒಂದು ವೇಳೆ ಸಂಪುಟ ವಿಸ್ತರಣೆ ಆಗಿದ್ದೇ ಆದಲ್ಲ ಗೆದ್ದವರ ನಡುವೆ ಮಹಾಸ್ಪೋಟವೇ ನಡೆಯಲಿದೆ ಎಂಬುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹೊಸ ಬಾಂಬ್ ಸಡಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದು 9 ತಿಂಗಳಾಗಿದೆ. ಆದರೂ ಸಂಪೂರ್ಣ ಮಂತ್ರಿ ಮಂಡಲ ಮಾತ್ರ ರಚನೆಯಾಗಿಲ್ಲ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬರೀ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ರಾಜ್ಯದಲ್ಲಿ ಸರ್ಕಾರ ಇದ್ದೂ ಇಲ್ಲದಂತಿದೆ ಎಂದು ಕಿಡಿಕಾರಿದರು.

ಇನ್ನೂ ಮುಂದವರೆದು ಮಾತನಾಡಿದ ಅವರು, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಉಪ ಚುನಾವಣೆಯಲ್ಲಿ ಗೆದ್ದವರಿಗೆ 24 ಗಂಟೆಯಲ್ಲೇ ಮಂತ್ರಿ ಮಾಡುವುದಾಗಿ ಹೇಳಿದ್ರು. ಆದ್ರೇ ಗೆದ್ದು ತಿಂಗಳಾಗುತ್ತಾ ಬಂದರೂ ಮಂತ್ರಿ ಸ್ಥಾನ ನೀಡಿಲ್ಲ. ಪಾಪ ಅವರ ಪರಿಸ್ಥಿತಿ ಅಂತರ ಪಿಶಾಚಿತರ ಆಗಿದೆ. ಒಂದು ವೇಳೆ ಸಂಪುಟ ವಿಸ್ತರಣೆ ಆದ್ರೇ ಗೆದ್ದವರ ನಡುವೆ ಮಹಾ ಸ್ಪೋಟವೇ ನಡೆಯಲಿದೆ ಎಂದು ಸ್ಪೋಟಕ ಬಾಂಬ್ ಸಿಡಿಸಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights