ನಗರದ ಜನತೆಯನ್ನು ಬೆಚ್ಚಿ ಬೀಳಿಸಿದ ಮತ್ತೊಂದು ಅತ್ಯಾಚಾರ ಪ್ರಕರಣ….!

ನಗರದಲ್ಲಿ ನಡೆದ ಮತ್ತೊಂದು ಅತ್ಯಾಚಾರ ಪ್ರಕರಣ ಜನತೆಯನ್ನು ಬೆಚ್ಚಿ ಬೀಳಿಸಿ ಮನೆಯಿಂದ ಹೆಣ್ಣುಮಕ್ಕಳನ್ನು ಹೊರಗಡೆ ಕಳುಹಿಸಲು ಸಾವಿರ ಬಾರಿ ಯೋಚಿಸುವಂತೆ ಮಾಡಿದೆ. ಹೌದು.. ಇದು ಸಿಲಿಕಾನಬ್ ಸಿಟಿಯಲ್ಲಿ ನಡೆದ ಆಘಾತಕಾರಿ ಘಟನೆ.

ಕ್ಯಾಬ್ ನಲ್ಲಿ ತಡರಾತ್ರಿ ಪ್ರಯಾಣ ಮಾಡುತ್ತಿದ್ದ ಉಗಾಂಡ ಮೂಲದ 25 ವರ್ಷದ ವಿದೇಶಿ ಯುವತಿ ಮೇಲೆ ಅತ್ಯಾಚಾರ ನಡೆದಿದ್ದು, ಯುವತಿಯನ್ನು ಬೆತ್ತಲೆಯಾಗಿ ಕಾರಿನಿಂದ ದಬ್ಬಿ ಹೋದ ಘಟನೆ ಮನುಕುಲವೇ ತಲೆತಗ್ಗಿಸುವಂತೆ ಮಾಡಿದೆ.

ಯುವತಿ ಮೇಲೆ ಕ್ಯಾಬ್ ನಲ್ಲೇ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕರು ಬೆತ್ತಲೆಯಾಗಿದ್ದ ಆಕೆಯನ್ನು ಕಾರ್ ನಿಂದ ಹೊರದಬ್ಬಿ ಪರಾರಿಯಾಗಿದ್ದಾರೆ. ವಿದೇಶದಿಂದ ಕಿಡ್ನಿ ಸಮಸ್ಯೆಯಿಂದ ಚಿಕಿತ್ಸೆಗಾಗಿ ಬಂದಿದ್ದ ಯುವತಿ ಕಮ್ಮನಹಳ್ಳಿಯ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಜನವರಿ 16 ರಂದು ಸ್ನೇಹಿತರ ಮನೆಗೆ ತೆರಳಲು ಓಲಾ ಕ್ಯಾಬ್ ಬುಕ್ ಮಾಡಿದ್ದಾಳೆ. ಸ್ಥಳಕ್ಕೆ ಬಂದಿದ್ದ ಕ್ಯಾಬ್ ಚಾಲಕ ಆಕೆಯನ್ನು ಹತ್ತಿಸಿಕೊಂಡಿದ್ದಾನೆ.

ಈ ಮೊದಲೇ ಕ್ಯಾಬ್ ನಲ್ಲಿ ಇದ್ದ ಇಬ್ಬರು ಯುವಕರು ಸೇರಿದಂತೆ ಚಾಲಕ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಯುವತಿಗೆ ಗೊತ್ತಾಗದಂತೆ ಬೇರೆ ಮಾರ್ಗದಲ್ಲಿ ಕರೆದುಕೊಂಡು ಹೋದ ದುಷ್ಕರ್ಮಿಗಳು ಲೈಂಗಿಕ ದೌರ್ಜನ್ಯ ಎಸಗಿ ಚಾಕು ತೋರಿಸಿ ಆಕೆಯನ್ನು ಬೆದರಿಸಿದ್ದು, ಹಣ ಹಾಗೂ ಚಿನ್ನಾಭರಣ ಕಸಿದುಕೊಂಡಿದ್ದಾರೆ.

ಬೆಳಗಿನ 4.30 ರ ಸುಮಾರಿಗೆ ದೊಡ್ಡಬಳ್ಳಾಪುರ ಸಮೀಪದ ಆಲಹಳ್ಳಿ ನಿರ್ಜನ ಪ್ರದೇಶದಲ್ಲಿ ಆಕೆಯನ್ನು ಬೆತ್ತಲೆ ಮಾಡಿ ಕಾರ್ ನಿಂದ ಹೊರಗೆ ಹಾಕಿ ಪರಾರಿಯಾಗಿದ್ದಾರೆ. ಯುವತಿ ಸಮೀಪದ ಮನೆ ಬಳಿ ಹೋಗಿ ಸಹಾಯಕ್ಕೆ ಕಿರುಚಾಡಿದ್ದು ಹೊರಗೆ ಬಂದ ಮನೆಯವರು ಆಕೆಗೆ ಬಟ್ಟೆ ನೀಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು ಹೇಳಿಕೆ ಪಡೆದುಕೊಂಡಿದ್ದಾರೆ. ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ ಎಂದು ಹೇಳಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights