ಫ್ಯಾಕ್ಟ್‌ಚೆಕ್ : ಶಾಲಾ ವಿದ್ಯಾರ್ಥಿ ಹಗ್ಗ ಹಿಡಿದು ನೇತಾಡುತ್ತ ನದಿ ದಾಟುವ ದೃಶ್ಯಗಳು ಭಾರತದ್ದಲ್ಲ!

ನಮ್ಮ ಹಿರಿಯರು ಹಿಂದಿನ ಕಾಲದಲ್ಲಿ ಶಿಕ್ಷಣ ಪಡೆಯಲು ಹೇಗೆಲ್ಲ ಕಷ್ಟ ಪಡುತ್ತಿದ್ದರು ಎಂಬುದನ್ನು ಮನೆಗಳಲ್ಲಿ ಅವರ ಬಗ್ಗೆ ಹೇಳುತ್ತಿದ್ದ ಕಥೆಗಳ ಮೂಲಕ ಕೇಳಿದ್ದೇವೆ. ಶಾಲೆಗೆ ಹೋಗಲು ಕಿ.ಮೀ ಗಟ್ಟಲೆ ನಡೆದುಕೊಂಡು ನದಿ ದಾಟಿಕೊಂಡು ಹೋಗುತ್ತಿದ್ದ ಅವರ ಕಾಲದ ಕಷ್ಟಗಳನ್ನು ಹೇಳುವುದನ್ನು ಕೇಳಿದ್ದೇವೆ. ಆದರೆ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು ಶಾಲಾ ಸಮವಸ್ತ್ರ ಧರಿಸಿ ವಿದ್ಯಾರ್ಥಿನಿಯೊಬ್ಬಳು ಶಾಲೆಗೆ ಹೋಗುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

https://twitter.com/Ayesha86627087/status/1626176618023747584?ref_src=twsrc%5Etfw%7Ctwcamp%5Etweetembed%7Ctwterm%5E1626176618023747584%7Ctwgr%5E3ddf05f7359ab3084aafba5c94ca223a1bf668b1%7Ctwcon%5Es1_&ref_url=https%3A%2F%2Fwww.indiatoday.in%2Ffact-check%2Fstory%2Fvideo-of-girl-ziplining-across-river-to-attend-school-is-not-from-india-2337762-2023-02-21

ರಭಸವಾಗಿ ಹರಿಯುತ್ತಿರುವ ನದಿಗೆ ಅಡ್ಡಲಾಗಿ ತೂಗು ಹಾಕಿರುವ ಹಗ್ಗವನ್ನು ಹಿಡಿದು ಜಿಪ್ ಲೈನ್ ಬಳಸಿ ನದಿ ದಾಟಿಕೊಂಡು ಹೋಗುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ತಲುಪಿಸಿ, ಶಾಲೆ ಕಲಿಯಲು ಮಕ್ಕಳು ಹೇಗೆ ಕಷ್ಟ ಪಡಬೇಕಾಗಿದೆ ನೋಡಿ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಶಾಲಾ ಬಾಲಕಿಯೊಬ್ಬಳು ಜಿಪ್ ಲೈನ್ ಬಳಸಿ ನದಿ ದಾಟಿಕೊಂಡು ಹೋಗುವ ದೃಶ್ಯಗಳನ್ನು ಪರಿಶೀಲಿಸದಾಗ, ವೈರಲ್ ವಿಡಿಯೋ ಭಾರತದ್ದಲ್ಲ ಎಂದು ಇಂಡಿಯಾ ಟುಡೇ ಫ್ಯಾಕ್ಟ್‌ಚೆಕ್ ವರದಿಯನ್ನು ಪ್ರಕಟಿಸಿದೆ.

ಮತ್ತಷ್ಟು ಮಾಹಿತಿಗಾಗಿ ಗೂಗಲ್ ಸರ್ಚ್ ಮಾಡಿದಾಗ ವೈರಲ್ ವಿಡಿಯೋದ ದೃಶ್ಯಗಳ ಬಗ್ಗೆ ನವೆಂಬರ್ 2022 ರಂದು ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿದ್ದ ವರದಿ ಲಭ್ಯವಾಗಿದೆ. ಆದರೆ, ವೀಡಿಯೊವನ್ನು ಎಲ್ಲಿ ಚಿತ್ರೀಕರಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿಲ್ಲ.

ಟ್ವೀಟರ್ ಅಕೌಂಟ್‌ಗಳ ಮೂಲಕ ಸರ್ಚ್ ಮಾಡಿದಾಗ, ಜೂನ್ 15, 2022 ರಂದು “ಮ್ಯಾಗ್ಡಲೀನಾ” ಹ್ಯಾಶ್‌ಟ್ಯಾಗ್‌ನೊಂದಿಗೆ ಹಂಚಿಕೊಳ್ಳಲಾದ ಟ್ವೀಟ್‌ ಲಭ್ಯವಾಗಿದೆ. ಮ್ಯಾಗ್ಡಲೇನಾ ಎಂಬ ಪ್ರದೇಶ ಕೊಲಂಬಿಯಾ ದೇಶದ ಉತ್ತರ ಭಾಗದಲ್ಲಿದೆ.

ಸಾಂಟಾ ಮಾರ್ಟಾ ನಗರದ ಸಮೀಪವಿರುವ ಪೋರ್ಟೊ ಮಸ್ಕಿಟೋ ಗ್ರಾಮದಲ್ಲಿ ವೀಡಿಯೊವನ್ನು ಚಿತ್ರೀಕರಿಸಲಾಗಿದೆ ಎಂದು  ಉಲ್ಲೇಖಿಸಿದೆ, ಅಲ್ಲಿ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಲು ತಾತ್ಕಾಲಿಕ ಜಿಪ್‌ಲೈನ್‌ಗಳನ್ನು ಬಳಸಿಕೊಂಡು ಗೈರಾ ನದಿಯನ್ನು ದಾಟುವ ದೃಶ್ಯಗಳು ಎಂದು ಟ್ವೀಟ್ ಉಲ್ಲೇಖಿಸಿದೆ.

ಲಭ್ಯವಾದ ಪತ್ರಿಕಾ ವರದಿಗಳ ಪ್ರಕಾರ, ಈ ಅಪಾಯಕಾರಿ ವಾತಾವರಣದಲ್ಲಿ ಶಾಲಾ ಬಾಲಕಿಯ ಶಿಕ್ಷಣವನ್ನು ಪಡೆಯುವ ಪರಿಸ್ಥಿತಿ ಇದ್ದು, ನರಕಜಮಂತ ಎಂಬ ಸಮುದಾಯದ ವಿದ್ಯಾರ್ಥಿಗಳು ಪ್ರತಿ ದಿನ ಇದೇ ಸವಾಲನ್ನು ಎದುರಿಸಿ ಜೀವ ಭಯದಲ್ಲಿ ಓದುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾಂಟಾ ಮಾರ್ಟಾದ ಶಿಕ್ಷಣ ಕಾರ್ಯದರ್ಶಿ ಆಂಟೋನಿಯೊ ಪೆರಾಲ್ಟಾ ಅವರು ಪ್ರತಿಕ್ರಿಯಿಸಿದ್ದಾರೆ.

“ಇದು ಗಂಭೀರ ಸ್ವರೂಪದ ಪ್ರಕರಣವಾಗಿದ್ದು, ನಾವು ಇದನ್ನು ಆಧ್ಯತೆಯಾಗಿ ತೆಗೆದುಕೊಂಡು ಕ್ರಮ ವಹಿಸಬೇಕಿದೆ ಎಂದಿದ್ದಾರೆ. 2008 ರಿಂದ ಇದೇ ಪರಿಸ್ಥಿತಿ ಇದ್ದು, ನದಿಯನ್ನು ದಾಟಲು ಹೋಗಿ ಹಲವರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಹಾಗಾಗಿ ಈ ವೈರಲ್ ದೃಶ್ಯಾವಳಿಗಳು ಭಾರತದ್ದಲ್ಲ. ಆದರೂ ಇಂತಹ ಪರಿಸ್ಥಿತಿ ಭಾರತದಲ್ಲೂ ಇದೆ ಎಂಬುದು ಗಮನಾರ್ಹ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಇಂಡಿಯಾ ಟುಡೇ

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: 1ಕೆಜಿ ದೇಹದ ತೂಕ ಇಳಿಸಿಕೊಂಡರೆ ಸಿಗಲಿದೆಯೇ 3 ಗ್ರಾಂ ಚಿನ್ನ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights