ಫ್ಯಾಕ್ಟ್‌ಚೆಕ್: 1ಕೆಜಿ ದೇಹದ ತೂಕ ಇಳಿಸಿಕೊಂಡರೆ ಸಿಗಲಿದೆಯೇ 3 ಗ್ರಾಂ ಚಿನ್ನ?

ಅತಿಯಾದ ಕೆಲಸದ ಒತ್ತಡ, ಸರಿಯಾದ ಆಹಾರ ಕ್ರಮ ಇಲ್ಲದಿದ್ದರೆ ದೇಹ ತನ್ನ ತೂಕವನ್ನು ಹೇಗೆ ಹೆಚ್ಚಿಸಿಕೊಳ್ಳುತ್ತದೆ. ದೇಹದ ತೂಕ ಹೆಚ್ಚಾಗಿದ್ದರೆ ಕಡಿಮೆ ಮಾಡುವ ಹಂಬಲ, ಕಡಿಮೆ ಇದ್ದರೆ ಕೊಂಚ ಹೆಚ್ಚು ಮಾಡುವ ತವಕ. ಇದು ಇಂದಿನ ಯುವ ಮನಸ್ಸುಗಳ ತೊಳಲಾಟ. ಕೆಲವರು ದೇಹದ ತೂಕ ಕಡಿಮೆ ಇದ್ದರೂ ಪರವಾಗಿಲ್ಲ ಹೆಚ್ಚಾಗಬಾರದು. ಹೆಚ್ಚಾದರೆ ಅದನ್ನು ಇಳಿಸುವುದೇ ಕಷ್ಟ ಎಂದು ಪರಿತಪ್ಪಿಸುತ್ತಾರೆ.

ಇಂತಹ ಬೊಜ್ಜನ್ನು ಕಡಿಮೆ ಮಾಡುವ ಸಾಹಸಕ್ಕೆ ಕೆಲವರು ಮುಂದಾಗುವುದಿಲ್ಲ, ಆದರೆ ಸರ್ಕಾರವೇ ತೂಕ ಜನರ ಇಳಿಸಲು ಪ್ರೇರೇಪಿಸಿದರೆ? ಹೌದು ದುಬೈ ಸರ್ಕಾರ ಜನರ ಆರೋಗ್ಯದ  ಹಿತದೃಷ್ಟಿಯಿಂದ ಯೋಜನೆಯೊಂದನ್ನು ಘೋಷಿಸಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪ್ರಸಾರ ಮಾಡಲಾಗುತ್ತಿದೆ.

“1 ಕೆಜಿ ತೂಕವನ್ನು ಇಳಿಸಿದವರಿಗೆ 3 ಗ್ರಾಂ ಚಿನ್ನವನ್ನು ನೀಡುತ್ತಿದೆ” ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ಅನ್ನು ಹಂಚಿಕೊಳ್ಳಲಾಗುತ್ತಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದ್ದು ಈ ಸುದ್ದಿ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, 2013 ಮತ್ತು 2018ರ ಕೆಲವು ಲೇಖನಗಳು ಲಭ್ಯವಾಗಿವೆ. ಒಂದು ಕೆಜಿ ತೂಕವನ್ನು ಇಳಿಸಿಕೊಂಡರೆ 1 ಗ್ರಾಂ ಚಿನ್ನವನ್ನು ನೀಡಿ ಪ್ರೋತ್ಸಾಹಿಸುವ ಯೋಜನೆಯೊಂದನ್ನು 2013 ರಲ್ಲಿ ದುಬೈ ಮುನಿಸಿಪಾಲಿಟಿಯ ಮಹಾನಿರ್ದೇಶಕ ಹುಸೇನ್ ನಾಸರ್ ಲೂತಾಹ್ ಅವರು ಈ ಯೋಜನೆಯನ್ನು ಘೋಷಿಸಿದರು.

ಗಲ್ಫ್ ಸ್ಟೇಟ್ಸ್‌ನಲ್ಲಿ ಜನರು ಹೆಚ್ಚಾಗಿ ಸ್ಥೂಲಕಾಯದಿಂದ (ಹೆಚ್ಚಿನ ತೂಕ) ಬಳಲುತ್ತಿರುವುದರಿಂದ ಇಂತಹ ಉಚಿತ ಕೊಡುಗೆಗಳನ್ನು ನೀಡುವ ಮೂಲಕ ಆಹಾರ ಕ್ರಮ ಮತ್ತು ವ್ಯಾಯಾಮಗಳನ್ನು ಕ್ರಮಬದ್ದವಾಗಿ ಅನುಸರಿಸಿ ಆರೋಗ್ಯವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ 2013ರ “ರಂಜಾನ್ ಸಂದರ್ಭದಲ್ಲಿ ಈ ಯೋಜನೆಯನ್ನು ದುಬೈನ ಸ್ಥಳೀಯ  ಸರ್ಕಾರ ಜನರನ್ನು ಉತ್ತೇಜಿಸುವ ಸಲುವಾಗಿ ರೂಪಿಸಿತ್ತು.

ಆದರೆ ಈ ಯೋಜನೆ ಸಧ್ಯ ಅಸ್ಥಿತ್ವದಲ್ಲಿ ಇಲ್ಲ, ಎಂದು ದುಬೈ ಸರ್ಕಾರ ತಿಳಿಸಿದ್ದು, ಇದು ಹಿಂದೆ ನಾವು ಜನರ ಆರೋಗ್ಯದ ದೃಷ್ಟಿಯಿಂದ ರೂಪಸಿದ್ದೆವು, ಆದರೆ ಸದ್ಯ ಈ ಯೋಜನೆ ಜಾರಿಯಲ್ಲಿ ಇಲ್ಲ ಎಂದು ಹೇಳಿದ್ದಾರೆ ಎಂದು ನ್ಯೂಸ್ ಮೊಬೈಲ್ ತಿಳಿಸಿದೆ. ಹಾಗಾಗಿ ಇದು ಸುಳ್ಳು ಮತ್ತು ಹಳೆಯ ಅಸ್ಥಿತ್ವದಲ್ಲಿಲ್ಲದ ಯೋಜನೆ ಎಂಬುದು ಸ್ಪಷ್ಟವಾಗಿದೆ.

ಕೃಪೆ: ನೂಸ್‌ ಮೊಬೈಲ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ಮುಸ್ಲಿಂ ಯುವಕರು ದೇವಸ್ಥಾನದ ಪೂಜಾರಿ ಮೇಲೆ ಕ್ರಿಕೆಟ್ ಬ್ಯಾಟ್‌ನಿಂದ ಹಲ್ಲೆ ನಡೆಸಿದರೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights