ಫ್ಯಾಕ್ಟ್‌ಚೆಕ್ : ಗಂಡ ಸಾವನಪ್ಪಿದನೆಂದು ಹೆಂಡತಿಯನ್ನು ಜೀವಂತ ಸಮಾಧಿ ಮಾಡುತ್ತಿರುವ ದೃಶ್ಯ ನಿಜವೇ?

ಥೈಲ್ಯಾಂಡ್‌ನಲ್ಲಿ ಗಂಡ ತೀರಿಕೊಂಡಿದಕ್ಕೆ ಆತನ ಹೆಂಡತಿಯನ್ನು ಜೀವಂತ ಸಮಾಧಿ ಮಾಡಲಾಗುತ್ತಿರುವ ದೃಶ್ಯಗಳು ಎಂದು ಹೇಳುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಥೈಲ್ಯಾಂಡ್‌ನ ಬುಡಕಟ್ಟು ಸಮುದಾಯವೊಂದರಲ್ಲಿ ಗಂಡ ತೀರಿಕೊಂಡರೆ ಸತ್ತ ಗಂಡನ ಪಕ್ಕದಲ್ಲಿ ಮಹಿಳೆಯರನ್ನು ಜೀವಂತ ಸಮಾಧಿ ಮಾಡುವ ಪದ್ಧತಿಯನ್ನು ಅನುಸರಿಸುತ್ತಾರೆ ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಹಾಗಿದ್ದರೆ ಥೈಲ್ಯಾಂಡ್‌ನಲ್ಲಿ ಈ ಘಟನೆ ನಡೆದಿರುವುದು ನಿಜವೇ? ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, 13 ವರ್ಷಗಳ ಹಿಂದೆ 2009 ರಲ್ಲಿ ‘House OF Xiong’ YouTube ಚಾನಲ್ ಪ್ರಕಟಿಸಿದ ಇದೇ ರೀತಿಯ ದೃಶ್ಯಗಳನ್ನೊಳಗೊಂಡ  ವಿಡಿಯೊ ಲಭ್ಯವಾಗಿದೆ. YouTube ಚಾನಲ್‌ನಲ್ಲಿ ಇದನ್ನು Neeg Lub Txim ಚಲನಚಿತ್ರ ಸರಣಿಯ 9 ನೇ ಸಂಚಿಕೆಯ ದೃಶ್ಯಗಳು ಎಂದು ವಿವರಿಸಲಾಗಿದೆ.

ಚಿತ್ರದ ಸಂಚಿಕೆಗಳನ್ನು ಗಮನಿಸಿದಂತೆ, ಆಕೆಯ ಪತಿಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಕ್ಕಾಗಿ ಶಿಕ್ಷೆಯಾಗಿ ಮಹಿಳೆಯನ್ನು ಜೀವಂತ ಸಮಾಧಿ ಮಾಡುವ ದೃಶ್ಯವನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಇದನ್ನೆ ನೈಜ ಘಟನ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಆದರೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ದೃಶ್ಯಗಳು ನೈಜ ಘಟನೆಯಿಂದ ತೆಗೆದುಕೊಂಡಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ವಾಸ್ತವವಾಗಿ ಥೈಲ್ಯಾಂಡ್‌ನ ಬುಡಕಟ್ಟು ಸಮುದಾಯದಲ್ಲಿ ಗಂಡ ತೀರಿಕೊಂಡರೆ ಸತ್ತ ಗಂಡನ ಪಕ್ಕದಲ್ಲಿ ಮಹಿಳೆಯರನ್ನು ಜೀವಂತ ಸಮಾಧಿ ಮಾಡುವ ಪದ್ಧತಿ ಆಚರಣೆಯಲ್ಲಿ ಇಲ್ಲ. ಈ ವೈರಲ್ ದೃಶ್ಯಗಳು ಹಳೆಯ ಮೋಂಗ್ ಚಲನಚಿತ್ರದಿಂದ ತೆಗೆದುಕೊಳ್ಳಲಾಗಿದ್ದು, ಥೈಲ್ಯಾಂಡ್‌ನಲ್ಲಿ ಗಂಡ ತೀರಿಕೊಂಡಿದಕ್ಕೆ ಆತನ ಹೆಂಡತಿಯನ್ನು ಜೀವಂತ ಸಮಾಧಿ ಮಾಡಲಾಗಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಉಕ್ರೇನ್‌ನಲ್ಲಿ ಐಸ್‌ ಕ್ರೀಮ್ ಸವಿದರೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights