ಸರ್ಕಾರದ ಮೇಲೆ ಆರೋಪಿಸುವ ಕಾಂಗ್ರೆಸ್ ದು ಕೊಳಕು ರಾಜಕಾರಣ – ಪ್ರಕಾಶ್ ಜಾವಡೇಕರ್
ಸರ್ಕಾರದ ಮೇಲೆ ಆರೋಪಿಸುವುದು ಕೊಳಕು ರಾಜಕಾರಣ ಎಂದು ಕಾಂಗ್ರೆಸ್ ವಿರುದ್ಧ ದೆಹಲಿ ಬಿಜೆಪಿ ನಾಯಕ ಪ್ರಕಾಶ್ ಜಾವಡೇಕರ್ ಹರಿಹಾಯ್ದಿದ್ದಾರೆ.
ದೆಹಲಿ ಹಿಂಸಾಚಾರದಲ್ಲಿ 20 ನಾಗರೀಕರು ಬಲಿಯಾದ ಘಟನೆಯ ಹೊಣೆ ಹೊತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಒತ್ತಾಯಿಸಿದ್ದಾರೆ. ಇದರೊಂದಿಗೆ ದೆಹಲಿ ಹಿಂಸಾಚಾರದ ವೇಳೆ ಅಮಿತ್ ಶಾ ಹಾಗೂ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಏನ್ ಮಾಡ್ತಾಯಿದ್ರು..? ಎಂದು ಖಡಕ್ ಪ್ರಶ್ನೆ ಹಾಕಿದ್ರು. ಇದಕ್ಕೆ ಸಿಡಿಮಿಡಿ ಗೊಂಡ ಪ್ರಕಾಶ್ ಜಾವಡೇಕರ್ ” ಸರ್ಕಾರದ ಮೇಲೆ ಆರೋಪಿಸುವುದು ಕೊಳಕು ರಾಜಕಾರಣ” ಎಂದಿದ್ದಾರೆ.
ಅಮಿತ್ ಶಾ ಎಲ್ಲೇ ಇದ್ದರೂ ಅಲ್ಲಿಂದಲೇ ಕೆಲಸ ಮಾಡುತ್ತಾರೆ. ಹಿಂಸಾಚಾರದ ಬಗ್ಗೆ ತನಿಖೆಯ ಬಳಿಕ ಸತ್ಯಾಂಶ ಹೊರಬರಲಿದೆ. ಘಟನೆ ಸಂಬಂಧ ಅಮಿತ್ ಶಾ ಸಭೆ ನಡೆಸಿದ್ದಾರೆಂದು ಸಮಜಾಯಿಸಿ ನುಡಿದಿದ್ದಾರೆ.

