ಜನತಾ ಕರ್ಫ್ಯೂ ದಿನ ಹುಟ್ಟಿದ ಹೆಣ್ಣು ಶಿಶುವಿಗೆ ಕೊರೊನಾ ಎಂದು ನಾಮಕರಣ…!

ವಿಶ್ವವೇ ತಲ್ಲಣಗೊಳಿಸಿದ ಕೊರೊನಾ ವೈರಸ್ ಇತಿಹಾಸವನ್ನೇ ಸೃಷ್ಟಿಸಿದೆ. ಈ ಮಧ್ಯೆ ವೈರಸ್ ಹೆಸರನ್ನು ಉತ್ತರ ಪ್ರದೇಶದಲ್ಲಿ ನವಜಾತ ಹೆಣ್ಣು ಶಿಶುವೊಂದಕ್ಕೆ ನಾಮಕರಣ ಮಾಡಲಾಗಿದೆ.

ವಿಶ್ವವೇ ಕೊರೊನಾ ಭೀತಿಗೆ ನಲುಗಿ ಹೋಗಿದೆ. ಕಣ್ಣು ಮುಚ್ಚಿದರೂ ಕಣ್ಣು ಬಿಟ್ಟರೂ ಕೊರೊನಾ ಎನ್ನುವ ಮಹಾಮಾರಿ ಹರಡುವ ಆತಂಕ ಜನರಲ್ಲಿ ಕಾಡುತ್ತಿದೆ.  ಭಾನುವಾರ ಲಕ್ನೋದ ಗೋರಖಪುರದ ಸೊಹಗೌರಾ ಗ್ರಾಮದಲ್ಲಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮಗು ಜನತಾ ಕರ್ಫ್ಯೂ ದಿನಕ್ಕೂ ಕೆಲವೇ ಗಂಟೆಗಳಿಗೂ ಮುನ್ನ ಜನಿಸಿದ ಹಿನ್ನೆಲೆಯಲ್ಲಿ ಈ ಮಗುವಿನ ಚಿಕ್ಕಪ್ಪ ‘ಕೊರೊನಾ’ ಎಂದು ನಾಮಕರಣ ಮಾಡಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸ ವಾಗಿದೆ.

ಈ ಬಗ್ಗೆ ಮಾತನಾಡಿದ ಮಗುವಿನ ಚಿಕ್ಕಪ್ಪ ನಿತೇಶ್ ತ್ರಿಪಾಠಿ, ಕೊರೊನಾ ಒಂದು ಭಯಾನಕ ರೋಗ. ಇದು ವಿಶ್ವಾದ್ಯಂತ ಜನರ ಪ್ರಾಣ ಬಲಿಪಡೆದುಕೊಂಡಿದೆ.ಆದರೆ ಇದರಿಂದ ಅನುಕೂಲವೂ ಆಗಿದೆ. ಕೊರೊನಾ ವೈರಸ್‍ನಿಂದಾಗಿ ಕೆಲವು ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಂಡಿದ್ದೇವೆ, ಜತ್ತಿನ ಎಲ್ಲಾ ದೇಶಗಳು ಒಂದಾಗಿ ಹೋರಾಡುತ್ತಿವೆ. ಹೀಗಾಗಿ ಈ ಮಗು ದುಷ್ಟರ ವಿರುದ್ಧ ಹೋರಾಡಲು ಜನರ ಒಗ್ಗಟ್ಟಿನ ಸಂಕೇತವಾಗಿರುತ್ತದೆ ಎಂದು ತಿಳಿಸಿದ್ದಾರೆ. ಈ ಮಗುವಿಗೆ ಕೊರೊನಾ ಎಂದು ಹೆಸರಿಡಲು ತಾಯಿ ಕೂಡ ಒಪ್ಪಿಗೆ ಸೂಚಿಸಿದ್ದಾಳೆ ಎನ್ನಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights