7,8,9,10ನೇ ಹಾಗೂ ಪಿಯುಸಿ ಮಕ್ಕಳ ಪರೀಕ್ಷೆ ಬಗೆಗಿನ ಗೊಂದಲಕ್ಕೆ ತೆರೆ ಎಳೆದ ಶಿಕ್ಷಣ ಸಚಿವರು..
ದೇಶದೆಲ್ಲೆಡೆ ಲಾಕ್ ಡೌನ್ ಜಾರಿಯಲ್ಲಿದೆ. ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಪರೀಕ್ಷೆ ಕುರಿತಾಗಿ ಶಿಕ್ಷಣ ಇಲಾಖೆಗೆ ಕೇಳಬೇಕಾದ ಕೆಲ ಪ್ರಶ್ನೆಗಳಿವೆ. ಅದುವೇ 7, 8,9ನೇ ತರಗತಿ, ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆ ಯಾವಾಗ ನಡೆಯುತ್ತವೆ..? ಈ ಬಗ್ಗೆ ಇರುವ ಗೊಂದಲಗಳಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸ್ಪಷ್ಟನೆ ನೀಡಿದ್ದಾರೆ.
ಹೌದು.. ಮಕ್ಕಳಿಗೆ ಹಾಗೂ ಪೋಷಕರಿಗೆ ಪರೀಕ್ಷೆಗಳ ಬಗ್ಗೆ ಇರುವ ಗೊಂದಲವನ್ನು ಸಚಿವರು ವಿಡಿಯೋವೊಂದನ್ನ ಬಿಡುಗಡೆ ಮಾಡುವ ಮೂಲಕ ನಿವಾರಿಸಿದ್ದಾರೆ. ಈ ಹಿಂದೆ ಶಿಕ್ಷಣ ಸಚಿವರು ಒಂದು ಆದೇಶ ಹೊರಡಿಸಿದ್ದರು. 1 ರಿಂದ 6 ತೇ ತರಗತಿ ವರೆಗೂ ಪರೀಕ್ಷೆ ಇಲ್ಲ ಎಂದು ಹೇಳಲಾಗಿತ್ತು. ಅದರಂತೆ ಪರೀಕ್ಷೆ ಇಲ್ಲದೇ ಉತ್ತೀರ್ಣ ಕೂಡ ಮಾಡಲಾಗಿದೆ. ಈಗ ನಮ್ಮ ಮುಂದೆ ಇರೋದು 7,8, 9, 10ನೇ ಹಾಗೂ ಪಿಯುಸಿ ಮಕ್ಕಳ ಪರೀಕ್ಷೆಯ ವಿಚಾರ. ಇದಕ್ಕೂ ಸಚಿವರು ವಿಡಿಯೋದಲ್ಲಿ ಉತ್ತರ ನೀಡಿದ್ದಾರೆ. ಈ ವಿಡಿಯೋದಲ್ಲಿ ಸಚಿವರು ಹೇಳಿರುವುದೇನೆಂದರೆ-
ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಪರೀಕ್ಷೆ ಬಗ್ಗೆ ನಿರ್ಣಯ ಮಾಡಲಾಗಿದೆ. ಈಗ 7,8ನೇ ತರಗತಿಯ ಮಕ್ಕಳಿಗೆ ಪರೀಕ್ಷೆ ಇಲ್ಲದೇ ಮುಂದಿನ ತರಗತಿಗೆ ಉತ್ತೀರ್ಣ ಮಾಡಬೇಕು ಎನ್ನುವ ತೀರ್ಮಾನ ಮಾಡಿದ್ದೇವೆ. 9ನೇ ತರಗತಿಯ ವಿದ್ಯಾರ್ಥಿಗಳಿಗೆ ಈ ಹಿಂದೆ ರೂಪಾತ್ಮಕ, ಸಂಕಲನಾತ್ಮಕ ಪರೀಕ್ಷೆ ಮಾಡಲಾಗಿದೆ. ಇದರ ಆಧಾರದ ಮೇಲೆ ಉತ್ತೀರ್ಣ ಮಾಡಲಾಗುತ್ತದೆ. ಒಂದು ವೇಳೆ ಇದರಲ್ಲಿ ಉತ್ತೀರ್ಣ ಆಗದೇ ಇದ್ದರೇ ಈ ರಜೆ ಸಂದರ್ಭದಲ್ಲಿ ಅಂಥ ಮಕ್ಕಳ ಕಲಿಕೆ ಉತ್ತೇಜಿಸಿ ನಂತರ ಕಲಿಕೆ ಮಟ್ಟನ್ನು ಸುಧಾರಿಸಿ ಉತ್ತೀರ್ಣ ಮಾಡಬೇಕು. ಇದನ್ನು ಆಯಾ ಶಾಲೆಗಳು ನಿರ್ಧಾರ ತೆಗೆದುಕೊಳ್ಳಬೇಕು.
ಇನ್ನೂ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಏಪ್ರಿಲ್ 14 ರ ನಂತರ ನಿರ್ಧಾರ ಮಾಡಲಾಗುತ್ತದೆ. ಪಿಯುಸಿ ಯ ಕೊನೆಯ ಪತ್ರಿಕೆ ಪರೀಕ್ಷೆ ಒಂದು ಬಾಕಿ ಇದೆ. ಅದನ್ನೂ ಕೂಡ ಏಪ್ರಿಲ್ 14 ರ ನಂತರ ನಿರ್ಧಾರ ಮಾಡಲಾಗುತ್ತದೆ.
ಆದರೆ ಪರೀಕ್ಷೆ ಇಲ್ಲ ಅಂತ ಯಾವ ಮಕ್ಕಳು ಹೊರಬರುವಂತಿಲ್ಲ. ಮನೆಯಲ್ಲೇ ಇದ್ದು ಬೇರೆ ವಿಷಯ ಕಲಿರಿ. ದೇಶದ ಹಿತಕ್ಕೆ ನೀವು ಕೈ ಜೋಡಿಸಿ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
https://www.facebook.com/100000520624203/videos/3359678524059469/

