ಕೊರೊನಾ ತಡೆಗೆ ರಾಜ್ಯದಲ್ಲಿ ಸಿದ್ಧಗೊಳ್ಳುತ್ತಿವೆ ಮೂರು ಯುದ್ಧಾಸ್ತ್ರಗಳು…!
ಇದುವೆರೆಗೂ ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 163ಕ್ಕೆ ಏರಿಕೆಯಾಗಿದ್ದು. ದಿನೇ ದಿನೇ ರಾಜ್ಯದಲ್ಲಿ ಸೋಂಕು ಹರಡುವ ಭೀತಿ ಸೃಷ್ಟಿಯಾಗಿದೆ. ಇನ್ನೇನು ಲಾಕ್ ಡೌನ್ ಸಮಯ ಮುಗಿತಾ ಬಂತು. ಲಾಕ್ವ ಡೌನ್ ಅಂತ್ಯಗೊಳ್ಳಲು ಇನ್ನೂ ಕೇವಲ 9 ದಿನಗಳು ಮಾತ್ರ ಬಾಕಿ ಉಳಿದಿವೆ. ಒಂದು ವೇಳೆ ಲಾಕ್ ಡೌನ್ ಅಂತ್ಯಗೊಂಡರೆ ರಾಜ್ಯ ಕೊರೊನಾ ತಡೆಗೆ ಯಾವ ರೀತಿ ಸಿದ್ಧವಾಗಿದೆ? ಕೊರೊನಾ ವಿರುದ್ಧ ಹೋರಾಡಲು ಬೇಕಾಗಿರುವ ಮೂರು ಪ್ರಮುಖ ಯುದ್ಧಾಸ್ತ್ರಗಳು ಯಾವವು? ಅವುಗಳು ಅಗತ್ಯಕ್ಕೆ ತಕ್ಕಂತೆ ಪೂರೈಕೆಯಾಗುತ್ತಾ? ಇದೆಲ್ಲದರ ಮಾಹಿತಿ ಇಲ್ಲಿದೆ ನೋಡಿ.
ಕೊರೊನಾ ತಡೆಗೆ ಪ್ರಮುಖವಾಗಿ ಜೀವವನ್ನೇ ಪಣಕ್ಕಿಟ್ಟು ಚಿಕಿತ್ಸೆ ನೀಡುತ್ತಿರುವವರು ವೈದ್ಯರು. ಕೊರೊನಾ ವಿರುದ್ಧ ಹೋರಾಡಿ ಚಿಕಿತ್ಸೆ ನೀಡುವ ವೈದ್ಯರ ಜೀವ ಎಷ್ಟು ಸೇಫ್ ಅನ್ನೋದೇ ಪ್ರಶ್ನೆ. ಇದಕ್ಕೆ ರಾಜ್ಯ ಮೊದಲು ಕೊರೊನಾ ವಿರುದ್ಧ ಸಾರಿರುವುದು ಯುದ್ಧ ಅಂದರೆ ಅದು ಪಿಪಿಇ ಕಿಟ್ ತಯಾರಿಕೆ.

ಪಿಪಿಇ ಕಿಟ್ ತಯಾರಿಕೆ :-
ಹೌದು… ಪಿಪಿಇ (ಪರ್ಸನಲ್ ಪ್ರೊಟೆಕ್ಸ್ ) ಕಿಟ್ ಇದು ವೈದ್ಯರಿಗೆ ಅತ್ಯಾಮುಲ್ಯವಾದ ಕಿಟ್. ಇದರಲ್ಲಿ ಕೊರೊನಾ ಸೊಂಕಿತರಿಗೆ ಚಿಕಿತ್ಸೆ ನೀಡುವ ವೇಳೆ ಧರಿಸಬೇಕಾದಂತ ಎಲ್ಲಾ ವಸ್ತುಗಳು ಇರುತ್ತವೆ. ಭಟ್ಕಳದ ಸರ್ಜಿಕಲ್ ಫ್ಯಾಕ್ಟರಿಯಲ್ಲಿ ಪಿಪಿಇ ಕಿಟ್ ತಯಾರಿಸಲಾಗುತ್ತಿದೆ. ಈ ಹಿಂದೆ ಬೇಡಿಕೆಗೆ ತಕ್ಕಂತೆ ಪಿಪಿಇ ಕಿಟ್ ಸಿಗುತ್ತಿರಲಿಲ್ಲ. ಹೀಗಾಗಿ ಭಟ್ಕಳದಲ್ಲಿ ಬೇಡಿಕೆಗಿಂತಲೂ ಅಧಿಕ ಕಿಟ್ ತಯಾರಿಸಲು ಫ್ಯಾಕ್ಟರಿಯ ಸಿಬ್ಬಂದಿಗಳು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ.



ಫೇಸ್ ಶಿಲ್ಡ್ ತಯಾರಿಕೆ ;-
ಇನ್ನೂ ಭಟ್ಕಳದಲ್ಲಿ ಫೇಸ್ ಶಿಲ್ಡ್ ತಯಾರಿಯಾಗುತ್ತಿದೆ. ಕರಾವಳಿಯಲ್ಲಿ ತಯಾರಾಗುತ್ತಿರುವ ಎರಡನೇ ಯುದ್ಧಾಸ್ತ್ರ ಇದು. 25 ವಿದ್ಯಾರ್ಥಿಗಳು ದಿನಕ್ಕೆ 200 ಪೇಸ್ ಶಿಲ್ಡ್ ಗಳನ್ನು ನಿರಂತರವಾಗಿ ತಯಾರಿಸುತ್ತಿದ್ದಾರೆ. ಪೊಲೀಸರಿಗೆ ವೈದ್ಯರಿಗೆ, ವಾಲೆಟಿಯರ್ಸ್ ಗೆ ಈ ಫೇಸ್ ಶಿಲ್ಡ್ ಗಳು ಅತ್ಯಾವಶ್ಯಕವಾಗಿದ್ದು ವಿದ್ಯಾರ್ಥಿಗಳು ಸ್ವಯಂ ಪ್ರೆರೇಪಿತರಾಗಿ ತಯಾರಿಸುತ್ತಿದ್ದಾರೆ.


ಹೆಚ್ಚುವರಿ ಮಾಸ್ಕ್/ಸಾನಿಟೈಸರ್ ತಯಾರಿಕೆ :-
ಇನ್ನೂ ಮೂರನೇ ಯುದ್ಧಾಸ್ತ್ರ ಯಾವುದು ಗೊತ್ತಾ..? ಪಿಪಿಇ ಕಿಟ್ ಹಾಗೂ ಫೇಸ್ ಶಿಲ್ಡ್ ಇದ್ದರೆ ಮಾತ್ರ ಕೊರೊನಾ ತಡೆಯಲು ಸಾಧ್ಯವಿಲ್ಲ. ಜನ ಸಾಮಾನ್ಯರ ರಕ್ಷಣೆ ಕೂಡ ಇಲ್ಲಿ ಮುಖ್ಯವಾಗುತ್ತದೆ. ಇನ್ನೇನು ಲಾಕ್ ಡೌನ್ ಅಂತ್ಯಂಗೊಂಡರೆ ಜನ ಏಕಾಏಕಿ ಹೊರಬರುತ್ತಾರೆ. ಆಗ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದರಿಂದ ಸೋಂಕು ತಡೆಗೆ ಜನ ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್ ಹಾಗೂ ಸಾನಿಟೈಸರ್ ಗಳನ್ನು ಬಳಕೆ ಮಾಡಬೇಕಾಗುತ್ತದೆ. ಹೀಗೆ ತುರ್ತಾಗಿ ಅಗತ್ಯವಿರುವ ಮಾಸ್ಕ್ ಗಳು ಎಲ್ಲೆಡೆ ಲಭ್ಯವಾಗುತ್ತಿಲ್ಲ. ಅಗತ್ಯಕ್ಕಿಂತ ಕಡಿಮೆ ಮಾಸ್ಕ್ ಗಳು ವಿತರಣೆಯಾಗುತ್ತಿವೆ.

ಕೊರೊನಾ ದಿಂದ ಸಾಮಾನ್ಯ ಜನರು ಹೇಗೆ ಬಚಾವ್ ಆಗಬೇಕು. ಏ14 ಕ್ಕೆ ಲಾಕ್ ಡೌನ್ ಅಂತ್ಯವಾದರೂ ಕೊರೊನಾ ತಡೆಗೆ ಮಾಸ್ಕ್ ಹಾಗೂ ಹ್ಯಾಂಡ್ ಸಾನಿಟೈಸರ್ ತಯಾರಿಕೆಗೆ ರಾಜ್ಯದ ಕಲೆ ಜಿಲ್ಲೆಯ ಮಹಿಳಾ ಸಂಘಗಳು ಹಾಗೂ ಖೈದಿಗಳು ಮುಂದಾಗಿದ್ದಾರೆ.
ರಾಯಚೂರಿನ ಲಿಂಗನ ದೊಡ್ಡಿಯ ಸ್ವಸಾಹಾಯ ಮಹಿಳಾ ಗುಂಪುಗಳಿಂದ ಮಾಸ್ಕ್ ತಯಾರಾಗುತ್ತಿದೆ.ಈಗಾಗಲೇ 10000 ಸಾವಿರ ಮಾಸ್ಕ್ ಗಳನ್ನು ತಯಾರಿಸಲಾಗಿದ್ದು ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಹಂಚಲಾಗುತ್ತಿದೆ. ಈ ರೀತಿಯ ರಾಯಚೂರು ಜಿಲ್ಲಾಡಳಿತ ಸಮಯ ಪ್ರಜ್ಞೆಯನ್ನು ಮೆಚ್ಚಲೇ ಬೇಕು. ಇದು ದೇಶಕ್ಕೆ ಮಾದರಿ ಕೂಡ ಹೌದು.
ಇನ್ನೂ ಚಿಕ್ಕಬಳ್ಳಾಪುರದಲ್ಲೂ ಮಾಸ್ಕ್ ತಯಾರಿಯಾಗುತ್ತಿವೆ. ಈಗಾಗಲೇ 30,000 ಮಾಸ್ಕ್ ತಯಾರಾಗುತ್ತಿದೆ. ಜೊತೆಗೆ ಹಾವೇರಿ ಜೈಲು ಹಕ್ಕಿಗಳಿಂದ ನಿತ್ಯ 500 ಮಾಸ್ಕ್ ತಯಾರಿಲಾಗುತ್ತಿದೆ. ಆಶಾ ಕಾರ್ಯಕರ್ತೆಯರು, ಪೊಲೀಸರು, ವೈದ್ಯರಿಗೆ, ಜನ ಸಾಮಾನ್ಯರಿಗೆ ಮಾಸ್ಕ್ ಗಳ ಅವಶ್ಯಕತೆ ಇದ್ದು, ಸದ್ಯ ಇದರ ಪೂರೈಕೆಯಾಗುತ್ತಿದೆ.
ಈ ಮೂರು ಯುದ್ಧಾಸ್ತ್ರಗಳಿಂದ ರಾಜ್ಯ ಕೊರೊನಾ ವಿರುದ್ಧ ಹೋರಾಡಲು ಸನ್ನಧವಾಗುತ್ತಿದೆ. ಲಾಖ್ ಡೌನ್ ಅಂತ್ಯಗೊಳ್ಳಲಿ ಅಂತ್ಯಗೊಳ್ಳದೇ ಇರಲಿ ನಿಮ್ಮ ಜಾಗೃತಿಯಲ್ಲಿ ನೀವಿರಿ. ಹ್ಯಾಂಡ್ ಗ್ಲೌಸ್ ಅಥವಾ ಸಾನಿಟೈಸರ್ ಬಳಕೆ ಮಾಡುವುದನ್ನ ಮರಿಯಬೇಡಿ. ಹೊರಹೋದಾಗ ಮಾಸ್ಕ್ ಗಳನ್ನು ಕಡ್ಡಾಯವಾಗಿ ಧರಿಸಿ. ಸೇಫ್ ಆಗಿರಿ.

