ಕೊರೊನಾ ಹುಟ್ಟೂರಿನಲ್ಲಿ ಮದುವೆ ಸಂಭ್ರಮದಿಂದ ಟ್ರಾಫಿಕ್ ಜಾಮ್…!

ಹೊಸ ಜೀವನಕ್ಕೆ ಕಾಲಿಡಲು ಇಷ್ಟು ದಿನ ಕಾಯುತ್ತಿದ್ದ ಜೋಡಿಗಳಿಗೆ ಸುದಿನ ಬಂದಿದೆ. ಯಾಕೆಂದರೆ ಈ ಸ್ಥಳ ಕೊರೊನಾದಿಂದ ಗೆದ್ದ ಹಾಗೂ ಕೊರೊನಾ ಹುಟ್ಟಿದ್ದ ಸ್ಥಳ. ಅದುವೇ ಚೀನಾದ ವುಹಾನ್ ಪ್ರಾಂತ್ಯ.

ಹೌದು… ಮಹಾಮಾರಿ ಕೋವಿಡ್-19ಗೆ ಜನ್ಮ ನೀಡಿದ ಚೀನಾದ ವುಹಾನ್ ಪ್ರಾಂತ್ಯದಲ್ಲಿ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಮದುವೆ ಸಂಭ್ರಮಗಳನ್ನು ಎದುರು ನೋಡಿದ್ದ ಪ್ರಾಂತ್ಯದ ಜನತೆಗೆ ಸದ್ಯ ಆ ಶುಭ ದಿನ ನೋಡುವ ಭಾಗ್ಯ ಸಿಕ್ಕಿದೆ. ಮ್ಯಾರೇಜ್ ಆಪ್ ಗಳಲ್ಲಿ ಹೆಸರು ನೊಂದಾಯಿಸಿಕೊಂಡು ಯುವಕ-ಯುವತಿಯರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಎಷ್ಟು ಆಶ್ಚರ್ಯ ನೋಡಿ. ಭೂತದ ಮನೆಯಂತಾಗಿದ್ದ ವುಹಾನ್ ನಲ್ಲಿ ಸದ್ಯ ಸಂಭ್ರಮದ ದಿನಗಳು ಕಾಣಸಿಗುತ್ತಿವೆ.

ಇದಕ್ಕೆ ಕಾರಣ ಕೊರೊನಾದಿಂದ ಸಾಯುತ್ತಿದ್ದವರ ಸಂಖ್ಯೆ ಕ್ಷೀಣಿಸಿದೆ. ಲಾಕ್ ಡೌನ್ ತೆರವುಗೊಂಡ ಹಿನ್ನೆಲೆ ಅಲ್ಲಿ ಮದುವೆ ಟ್ರಾಫಿಕ್ ಏರ್ಪಟ್ಟಿದೆ.ಹೊಸ ಅಲಿಪೇ ಎನ್ನುವ ವಿವಾಹ ಸೇತುವಾಗಿ ಕೆಲಸ ಮಾಡುವ ಆಯಪ್‌ನಲ್ಲಿ ಶೇ.300ರಷ್ಟು ನೋಂದಣಿ ಹೆಚ್ಚಾಗಿದೆ. ಈ ವರ್ಷದ ಆರಂಭದಲ್ಲೇ (ಜ.23) ಲಾಕ್‌ಡೌ ನ್‌ಗೆ ಗುರಿಯಾಗಿದ್ದ ವುಹಾನ್‌ನಲ್ಲಿ ಸತತ 76 ದಿನಗಳ ಕಾಲ ಕರ್ಫ್ಯೂ ವಾತಾವರಣವಿತ್ತು. ಕಳೆದ ಮಂಗಳವಾರ (ಏ.7) ಚೀನ, ‘ಕೋವಿಡ್ ಸಾವುಗಳಲ್ಲಿನ ದಿನ’ ಅಂತಲೇ ಆಚರಿಸಿದೆ.

ಇನ್ನೊಂದೆಡೆ ಆರೋಗ್ಯ ಅಧಿಕಾರಿಗಳು, ಜನರು ಮನೆಯಿಂದ ಹೊರಗೆ ಬರವುದು, ಸುತ್ತಾಡುವುದನ್ನು ಕಡಿಮೆ ಮಾಡುವಂತೆ ಆದೇಶಿಸುತ್ತಿದ್ದಾರೆ. ಕೋವಿಡ್ ಮರು ಅಪ್ಪಳಿಸುವಿಕೆಯ ಭೀತಿಯ ನಡುವೆಯೂ ವುಹಾನ್‌, ಹೊಸ ಬದುಕು ಕಟ್ಟಿಕೊಳ್ಳಲು ಮುಂದಡಿಯಿಡುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights