Corona donation : ಮೋದಿ ನಿಧಿಗೆ ದೇಣಿಗೆಯ ಮಹಾಪೂರ, CM ನಿಧಿಗೆ ಬಿಡಿಗಾಸು..
ಕೊರೋನಾ ವಿರುದ್ಧ ಹೋರಾಟಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ಥಾಪಿಸಿರುವ ವಿಶೇಷ ನಿಧಿಗೆ ದೇಣಿಗೆಯ ಮಹಾಪೂರವೇ ಹರಿದುಬರುತ್ತಿದೆ. ಆದರೆ ಎಲ್ಲ ರಾಜ್ಯಗಳ ಸಿಎಂಗಳ ಪರಿಹಾರ ನೀಧಿಗೆ ಮಾತ್ರ ಚಿಕ್ಕಾಸಿನ ಕೊಡುಗೆ ಸಂಗ್ರಹವಾಗುತ್ತಿರುವುದು ವಿಪರ್ಯಾಸವೇ ಸರಿ.


ಕಳೆದ ತಿಂಗಳಷ್ಟೇ ಆರಂಭಿಸಲಾದ pm cares ಎಂಬ ವಿಶೇಷ ನಿಧಿಗೆ ತಿಂಗಳೊಪ್ಪತ್ತಿನಲ್ಲಿ ಅಂದಾಜು 10 ಸಾವಿರ ಕೋಟಿ ರೂ ದೇಣಿಗೆ ಹರಿದು ಬಂದಿದೆ ಎಂದು ತಿಳಿದುಬಂದಿದೆ.. ಇದಕ್ಕೆ ಹೋಲಿಸಿದರೇ ಸಿಎಂಗಳ ಪರಿಹಾರ ನಿಧಿಗಳಿಗೆ ಹೆಚ್ಚಿನ ಮೊತ್ತದ ದೇಣಿಗೆ ಆಕರವಾಗುತ್ತಿಲ್ಲ ಎಂದು ಅಂಕಿ ಅಂಶಗಳು ಸ್ಪಷ್ಟವಾಗಿ ಹೇಳುತ್ತಿವೆ.

ಪ್ರಧಾನಿ ಅವರ ವಿಶೇಷ ನಿಧಿ ಆರಂಭಕ್ಕೂ ಮೊದಲೇ ಸಿಎಂ ಪರಿಹಾರ ನಿಧಿಯಲ್ಲಿ ವಿಶೇಷ ಕೋವಿಡ್ ನಿಧಿ ಖಾತೆ ತೆರೆಯಲಾಗಿತ್ತು. ಉದಾರವಾಗಿ ದೇಣಿಗೆ ನಿಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪನವರು ಮನವುನ್ನು ಮಾಡಿದ್ದರು. ಕಳೆದ ಮೂರು ವಾರಗಳಲ್ಲಿ ಈ ನಿಧಿಗೆ 138 ಕೋಟಿ ರೂ ದೇಣಿಗೆ ಸಂಗ್ರಹವಾಗಿದೆ. ಪ್ರಧಾನಿ ಪರಿಹಾರ ನಿಧಿಗೆ ಹೋಲಿಸಿದರೆ ಇದು ತೀರಾ ಕಡಿಮೆ.
ಇದೇ ರೀತಿ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ದೊಡ್ಡ ರಾಜ್ಯ ಮಹಾರಾಷ್ಟ್ರದಲ್ಲಿ ಸಹ ಇದೆ ಪರಿಸ್ಥಿತಿ ಇದ್ದು ಸಿಎಂ ಪರಿಹಾರ ನಿಧಿಗೆ ಈವರಗೆ ಮಾತ್ರ 247 ಕೋಟಿ ರೂ ದೇಣಿಗೆ ಬಂದಿದೆ. ಇದು ದೇಶದ ಫೈನಾನ್ಸ್ ಕ್ಯಾಪಿಟಲ್ ಆಗಿದ್ದರು ಸಹ ದೇಣಿಗೆ ಹರಿದು ಬರುತ್ತಿಲ್ಲ, ಮಹಾಮಾರಿ ವಿರುದ್ಧದ ಹೋರಾಟಕ್ಕೆ ಜನ ಸ್ಪಂದಿಸುತ್ತಿಲ್ಲ ಅಂತ ಅಲ್ಲ.. ಕೇಂದ್ರ ಸರಕಾರವು ಪಿಎಂ ನಿಧಿಗೆ ನೀಡುವ ದೇಣಿಗೆ ಮೇಲೆ ಆದಾಯ ತೆರಿಗೆ ವಿನಾಯಿತಿ ಘೋಷಿಸಿದ್ದು, ದೊಡ್ಡ ಕಂಪೆನಿಗಳು ಕೇಂದ್ರ ಕೈಹಿಡಿಯಲು ನಿರ್ಧರಿಸಿರುವುದು ಈ ಪರಿಸ್ಥಿತಿಗೆ ಕಾರಣವಾಗಿದೆ, CM ನಿಧಿಗೆ ದೇಣಿಗೆ ನೀಡಿದರೆ ತೆರಿಗೆ ವಿನಾಯಿತಿ ನೀಡುವುದಿಲ್ಲ ಎನ್ನುವ ಕೇಂದ್ರದ ನೀತಿಯೇ ಈ ತಾರತಮ್ಯಕ್ಕೆ ಕಾರಣ..

ಕರೋನಾ ವಿರುದ್ದದ ಹೋರಾಟದಲ್ಲಿ ರಾಜ್ಯಗಳ ಪಾತ್ರ ಬಹಳ ಮುಖ್ಯವಾಗಿದೆ, ಹಾಗಿದ್ದರು ಸಹ PM ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಹಠಮಾರಿ ದೋರಣೆಯೇ ಈ ತಾರತಮ್ಯಕ್ಕೆ ಕಾರಣ. ಹಿಗಾಗಿ ರಾಜ್ಯಗಳು ಸಂಪನ್ಮೂಲಗಳ ಕೊರತೆಯನ್ನು ಎದುರಿಸುತ್ತಿವೆ..

